ಕಾಶ್ಮೀರಕ್ಕೆ ಹೊರಟ ಜೇಮ್ಸ್: ಹಾಡು ಮತ್ತು ಫೈಟ್ ಚಿತ್ರೀಕರಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಬಿಡುಗಡೆಗಾಗಿ ಅಪ್ಪು ಫ್ಯಾನ್ಸ್ ಕಾಯ್ತಿದ್ದಾರೆ. ಯುವರತ್ನ ಚಿತ್ರದ ಬಳಿಕ ಚೇತನ್ ಕುಮಾರ್ ಜೊತೆ ಜೇಮ್ಸ್ ಸಿನಿಮಾ ಮಾಡುತ್ತಿರುವುದು ಗೊತ್ತೆ ಇದೆ.

ಜೇಮ್ಸ್ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಜೇಮ್ಸ್ ಶೂಟಿಂಗ್ ಮಾಡಲಾಗಿದೆ. ಈಗ ಕಾಶ್ಮೀರದಲ್ಲಿ ಜೇಮ್ಸ್ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು, ನಾಳೆಯಿಂದ (ಫೆಬ್ರವರಿ 18) ಶೂಟಿಂಗ್ ಆರಂಭವಾಗಲಿದೆ.

ಜೇಮ್ಸ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಕಾಶ್ಮೀರಕ್ಕೆ ಪುನೀತ್ ರಾಜ್ ಕುಮಾರ್ ತೆರಳಿದ್ದಾರೆ. ಜೊತೆಗೆ ಕೆಲವು ಆಕ್ಷನ್ ದೃಶ್ಯಗಳನ್ನು ಸಹ ಅಲ್ಲಿಯೇ ಚಿತ್ರೀಕರಿಸಲು ಯೋಜಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Puneeth Rajkumar James Shooting at Kashmira

ಈ ಕುರಿತು ಜೇಮ್ಸ್ ಚಿತ್ರತಂಡ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ''ನಾಳೆಯಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಜೇಮ್ಸ್ ಚಿತ್ರದ ಚಿತ್ರೀಕರಣ ನಡೆಯಲಿದೆ. ಎ ಹರ್ಷ ನೃತ್ಯ ನಿರ್ದೇಶನದಲ್ಲಿ ಹಾಡು ಮತ್ತು ವಿಜಯ್ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗುತ್ತಿದೆ'' ಎಂದು ಪೋಸ್ಟ್ ಹಾಕಿದ್ದಾರೆ.

ನಿನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಸಹ ಆಸ್ಪತ್ರೆಗೆ ಭೇಟಿ ನೀಡಿ ಸಹೋದರನ ಆರೋಗ್ಯ ವಿಚಾರಿಸಿದ್ದರು. ರಾಘಣ್ಣ ಆರೋಗ್ಯವಾಗಿದ್ದಾರೆ ಎಂದು ತಿಳಿದ ಮೇಲೆಯಷ್ಟೇ ಕಾಶ್ಮೀರಕ್ಕೆ ತೆರಳುವ ನಿರ್ಧಾರ ತೆಗೆದುಕೊಂಡಿದ್ದರು.

ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಜೇಮ್ಸ್ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಅನು ಪ್ರಭಾಕರ್ ಹಾಗೂ ತೆಲುಗು ನಟ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Puneeth Rajkumar Starrer James movie will be shooting in Kashmir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X