twitter
    For Quick Alerts
    ALLOW NOTIFICATIONS  
    For Daily Alerts

    James Day 4 Box office collections : 'ಜೇಮ್ಸ್' ನಾಲ್ಕೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸಾಫೀಸ್ ಗಳಿಕೆ 100 ಕೋಟಿ

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್ ಆಗಿ ಐದನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪು ಸ್ಟೈಲಿಶ್ ಎಂಟ್ರಿ. ಮಾಸ್ ಲುಕ್, ಮಸ್ತ್ ಡ್ಯಾನ್ಸ್, ಆಕ್ಷನ್ ಸೀನ್‌ಗಳನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಪುನೀತ್ ಸಿನಿಮಾ ನೋಡಿ ಅಭಿಮಾನಿಗಳು ಕಣ್ಣುಗಳು ಒದ್ದೆಯಾಗಿವೆ.

    Recommended Video

    James 100 Crore Club | ಜೇಮ್ಸ್ ಕಲೆಕ್ಷನ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ಕಿಶೋರ್

    ಅಪ್ಪು ಸಿನಿಮಾ ರಿಲೀಸ್ ಆಗಲಿ ಅಂತ ಅದೆಷ್ಟೋ ಅಭಿಮಾನಿಗಳು ಕಾದುಕೂತಿದ್ದರು. ಹಾಗೇ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸುತ್ತೆ? ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು ಮಾಡಬಹುದು? ಅನ್ನೋ ಕುತೂಹಲ ಗರಿಗೆದರಿತ್ತು. ನಿರೀಕ್ಷೆಯಂತೆ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಕನ್ನಡದ ಮಟ್ಟಿದೆ ಇದು ದಾಖಲೆ ಅಂತಲೇ ಹೇಳಬಹುದು.

    James Day 3 Box office:'ಜೇಮ್ಸ್' 3ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ವಿವರJames Day 3 Box office:'ಜೇಮ್ಸ್' 3ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ವಿವರ

    ಇಲ್ಲಿವರೆಗೂ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ ಕಲೆಕ್ಷನ್‌ ಬಗೆ ನಿಕರವಾದ ಮಾಹಿತಿ ಇರಲಿಲ್ಲ. 'ಜೇಮ್ಸ್' ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಸಿದೆ ಅಂತೆಲ್ಲಾ ಸುದ್ದಿಯಾಗಿತ್ತು. ಸ್ಯಾಟಲೈಟ್ ರೈಟ್ಸ್, ಒಟಿಟಿ ರೈಟ್ಸ್ ಸೇರಿ 100 ಕೋಟಿ ಅಂತೆಲ್ಲಾ ಸುದ್ದಿಯಾಗಿತ್ತು. ಆದರೆ, ನಿರ್ಮಾಪಕರಾಗಲಿ, ಸಿನಿಮಾ ತಂಡ ಆಗಲಿ ಈ ಬಗ್ಗೆ ಖಚಿತವಾಗಿ ಮಾಹಿತಿ ನೀಡಿಲ್ಲ. ಕನ್ನಡ ಚಿತ್ರರಂಗದ ವಿತರಕರ ಪ್ರಕಾರ 'ಜೇಮ್ಸ್' ಲೆಕ್ಕಾಚಾರನೇ ಬೇರೆ.

    'ಜೇಮ್ಸ್' ಕಲೆಕ್ಷನ್ ಎಷ್ಟು?

    'ಜೇಮ್ಸ್' ಕಲೆಕ್ಷನ್ ಎಷ್ಟು?

    ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಕರ್ನಾಟಕ ಅಷ್ಟೇ ಅಲ್ಲ. ದೇಶ- ವಿದೇಶದಲ್ಲಿಯೂ 'ಜೇಮ್ಸ್' ಚಿತ್ರವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಿತ್ತು. ಹೀಗಾಗಿ ಮೊದಲ ದಿನದ ಗಳಿಕೆ ಸುಮಾರು 32 ಕೋಟಿ ಎಂದು ಹೇಳಲಾಗಿತ್ತು. ಈಗ ನಾಲ್ಕು ದಿನಗಳಲ್ಲಿ, ಕೇವಲ ಚಿತ್ರಮಂದಿರಗಳಿಂದಲೇ 'ಜೇಮ್ಸ್' ಸಿನಿಮಾ ಗಳಿಕೆ 100 ಕೋಟಿ ದಾಟಿದೆ ಎಂದು ಸ್ಯಾಂಡಲ್‌ವುಡ್ ಮಂದಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮೂಲಕ 'ಜೇಮ್ಸ್' ಅಧಿಕೃತವಾಗಿ 100 ಕೋಟಿ ಕ್ಲಬ್ ಸೇರಿದಂತಾಗಿದೆ.

    Puneeth Viral Photo: ಅಪ್ಪು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದು ನೋಡಿದ್ದೀರಾ? ಈ ಫೋಟೊ ಬಲು ಅಪರೂಪPuneeth Viral Photo: ಅಪ್ಪು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದು ನೋಡಿದ್ದೀರಾ? ಈ ಫೋಟೊ ಬಲು ಅಪರೂಪ

    ಭಾನುವಾರ 'ಜೇಮ್ಸ್' ಸಿನಿಮಾ ಗಳಿಕೆ ಎಷ್ಟು?

    ಭಾನುವಾರ 'ಜೇಮ್ಸ್' ಸಿನಿಮಾ ಗಳಿಕೆ ಎಷ್ಟು?

    ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಭಾನುವಾರ (ಮಾರ್ಚ 21)ರಂದು 'ಜೇಮ್ಸ್' ಬಾಕ್ಸಾಫೀಸ್‌ ಗಳಿಕೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಹೆಚ್ಚು ಕಡಿಮೆ ಮೊದಲ ದಿನದ ಗಳಿಕೆ 32 ಕೋಟಿ ಆಸುಪಾಸಿನಲ್ಲೇ 4ನೇ ದಿನವೂ ಗಳಿಕೆ ಕಂಡಿದೆ ಎಂದು ಸ್ಯಾಂಡಲ್‌ವುಡ್ ವಿತರಕರು ಲೆಕ್ಕ ಹಾಕಿದ್ದಾರೆ. ಭಾನುವಾರ ವಿಶ್ವದಾದ್ಯಂತ ಭರ್ಜರಿ ಕೆಲೆಕ್ಷನ್ ಮಾಡು ಮುನ್ನುಗ್ಗುತ್ತಿದೆ.

    ಜೇಮ್ಸ್ ಕಲೆಕ್ಷನ್ ಹೇಗಿದೆ?

    ಜೇಮ್ಸ್ ಕಲೆಕ್ಷನ್ ಹೇಗಿದೆ?

    ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾ 4 ದಿನಗಳಲ್ಲೂ ಸೂಪರ್ ಕಲೆಕ್ಷನ್ ಮಾಡಿದೆ ಪ್ರತಿದಿನ ಚಿತ್ರಮಂದಿರ ಹೌಸ್‌ಫುಲ್ ಆಗಿದೆ. ವಿಶ್ವದಾದ್ಯಂತ ನಾಲ್ಕು ದಿನಗಳಲ್ಲಿ 'ಜೇಮ್ಸ್' ಗಳಿಕೆ ಹೀಗಿದೆ.
    Day 1 32 ಕೋಟಿ, (ಅಂದಾಜು)
    Day 2 21.8 ಕೋಟಿ (ಅಂದಾಜು)
    Day 3 26.4 ಕೋಟಿ (ಅಂದಾಜು)
    Day 4 30 ಕೋಟಿ (ಅಂದಾಜು)
    ಒಟ್ಟು 110.2 ಕೋಟಿ(ಅಂದಾಜು)

    ಈ ಮೂಲಕದ ಅಧಿಕೃತವಾಗಿ 'ಜೇಮ್ಸ್' ಕೇವಲ ಥಿಯೇಟರ್‌ಗಳಿಂದ ಬಂದ ಗಳಿಕೆಯಿಂದಲೇ 100 ಕೋಟಿ ಕ್ಲಬ್ ಸೇರಿದಂತಾಗಿದೆ. ಕನ್ನಡದ ಸಿನಿಮಾವೊಂದು ಅತೀ ವೇಗದಲ್ಲಿ 100 ಕೋಟಿ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ. ಆಸ್ಟ್ರೇಲಿಯಾದಲ್ಲಿ 18 ಲಕ್ಷ, ಅಮೆರಿಕದಲ್ಲಿ 66 ಲಕ್ಷ ಗಳಿಕೆ ಕಂಡಿದೆ. ವಿದೇಶದಲ್ಲೂ ಉತ್ತಮ ಗಳಿಕೆ ಕಾಣುತ್ತಿದ್ದು, ಹೀಗೆ ಮುಂದುವರೆದರೆ, ಈ ವಾರಾಂತ್ಯದೊಳಗೆ 150 ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ.

    James: 'ಜೇಮ್ಸ್'ನಲ್ಲಿ ಪುನೀತ್ ರಾಜ್‌ಕುಮಾರ್ ಮರುಸೃಷ್ಟಿ: ಗೆದ್ದ ಚಿತ್ರತಂಡ!James: 'ಜೇಮ್ಸ್'ನಲ್ಲಿ ಪುನೀತ್ ರಾಜ್‌ಕುಮಾರ್ ಮರುಸೃಷ್ಟಿ: ಗೆದ್ದ ಚಿತ್ರತಂಡ!

    ಸ್ಯಾಟಲೈಟ್, ಓಟಿಟಿ ರೈಟ್ಸ್ ಎಷ್ಟು?

    ಸ್ಯಾಟಲೈಟ್, ಓಟಿಟಿ ರೈಟ್ಸ್ ಎಷ್ಟು?

    ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಓಟಿಟಿ ರೈಟ್ಸ್ ಸುಮಾರು 40 ಕೋಟಿಗೆ ಸೇಲ್ಆಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಸ್ಯಾಟಲೈಟ್ ರೈಟ್ಸ್ ಕೂಡ ಎಲ್ಲಾ ಭಾಷೆ ಸೇರಿ 20 ಕೋಟಿ ದಾಡಿದೆ ಎಂದು ಅಂದಾಹು ಮಾಡಲಾಗಿದೆ. ಈ ಮೂಲಕ 'ಜೇಮ್ಸ್' 160 ರಿಂದ 170 ಕೋಟಿ ಗಳಿಕೆ ಆದಂತೆ ಆಗಿದೆ.

    English summary
    Puneeth Rajkumar James worldwide Boxoffice collection 100crore. Here is more details about james boxoffice collection.
    Monday, March 21, 2022, 10:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X