ಯುವರತ್ನ ಚಿತ್ರದಲ್ಲಿ ಅಪ್ಪು ಜೆರ್ಸಿ ನಂ 29: ಏನಿದರ ಸೀಕ್ರೆಟ್?
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಟೀಸರ್ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಸಖತ್ ಪವರ್ ಫುಲ್ ಆಗಿ ಟೀಸರ್ ಹೊರಹೊಮ್ಮಿದ್ದು, ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಈ ಚಿತ್ರದಲ್ಲಿ ಪುನೀತ್ ಕಾಲೇಜ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದು, ನಿರೀಕ್ಷೆ ಹೆಚ್ಚಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.
ರಗ್ಬಿ ಆಟಗಾರನಾಗಿರುವ ಪವರ್ ಸ್ಟಾರ್ 29 ನಂ ಜೆರ್ಸಿ ತೊಟ್ಟಿದ್ದಾರೆ. ಮತ್ತು ಆರ್ ಕೆ ಯೂನಿವರ್ಸಿಟಿ ಸ್ಟೂಡೆಂಟ್ ಆಗಿ ನಟಿಸಿದ್ದಾರೆ. ಈ ಎರಡು ಅಂಶಗಳ ಹಿಂದೆ ಒಂದು ಸೀಕ್ರೆಟ್ ಇದೆ. ಏನದು? ಮುಂದೆ ಓದಿ....

ಅಪ್ಪು ಜೆರ್ಸಿ ನಂ 29 ಯಾಕೆ?
ಸ್ಟಾರ್ ನಟರ ಸಿನಿಮಾಗಳು ಅಂದ್ಮೇಲೆ ಅಲ್ಲಿ ಪ್ರತಿಯೊಂದ ಸಣ್ಣ ವಿಷಯದ ಹಿಂದೆಯೂ ಒಂದೊಂದು ಆಸಕ್ತಿಕರವಾದ ಸಂಗತಿ ಇರುತ್ತೆ. ಈಗ ಯುವರತ್ನ ಟೀಸರ್ ನೋಡಿದ್ಮೇಲೆ ಅಂತಹದ್ದೆ ವಿಷ್ಯವೊಂದು ಕಣ್ಣಿಗೆ ಬಿದ್ದಿದೆ. ಯುವರತ್ನ ಚಿತ್ರದಲ್ಲಿ ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದು, 29ನೇ ಜೆರ್ಸಿ ತೊಟ್ಟಿದ್ದಾರೆ. ಜೆರ್ಸಿ ಮೇಲೆ 29 ಯಾಕೆ ಹಾಕಬೇಕಿತ್ತು ಎಂದು ಗಮನಿಸದಾಗ ಅದರ ಹಿಂದಿನ ಕಾರಣ ಬಹಿರಂಗವಾಗಿದೆ.

ಪುನೀತ್ 29ನೇ ಸಿನಿಮಾ ಸಂಕೇತ
ಯುವರತ್ನ.....ಪುನೀತ್ ರಾಜ್ ಕುಮಾರ್ ನಟನೆತಯ 29ನೇ ಚಿತ್ರ. ಹಾಗಾಗಿ, ಸಿನಿಮಾದ ನಂಬರ್ ಸಂಕೇತಿಸುವ ಕಾರಣಕ್ಕಾಗಿ ಅಪ್ಪು ಜೆರ್ಸಿ ಮೇಲೆ 29 ನಂಬರ್ ಬಳಸಲಾಗಿದೆ. ಯುವರತ್ನ ಬಿಡುಗಡೆ ವೇಳೆ ಈ ಜೆರ್ಸಿ ನಂಬರ್ ಟ್ರೆಂಡ್ ಆದರೂ ಅಚ್ಚರಿ ಇಲ್ಲ.

RK ಯೂನಿವರ್ಸಿಟಿ ಅಂದ್ರೆ ಏನು?
ಇನ್ನು ಯುವರತ್ನ ಟೀಸರ್ ಗಮನ ಸೆಳೆದ ಇನ್ನೊಂದು ಅಂಶ ಅಂದ್ರೆ ಆರ್ ಕೆ ಯೂನಿವರ್ಸಿಟಿ. ಆರ್ ಕೆ ಅಂದ್ರೆ ಯಾವ ಕಾಲೇಜ್ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ನಿರ್ದೇಶಕರು ಯಾವ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ, ಅಭಿಮಾನಿಗಳು ಮಾತ್ರ RK ಅಂದ್ರೆ ಅದು ರಾಜ್ ಕುಮಾರ್ ಯೂನಿವರ್ಸಿಟಿ ಎಂದು ಹೇಳುತ್ತಿದ್ದಾರೆ.

ಪಕ್ಕಾ ಯೂತ್ ಸಿನಿಮಾ
ಅಪ್ಪು, ಅಭಿ ಅಂತಹ ಸಿನಿಮಾಗಳ ಬಳಿಕ ಪುನೀತ್ ರಾಜ್ ಕುಮಾರ್ ಮತ್ತೆ ಕಾಲೇಜ್ ಓರಿಯೆಂಟೆಡ್ ಕಥೆ ಮಾಡ್ತಿದ್ದಾರೆ. ಶಿಕ್ಷಣ ಉದ್ಯಮದ ಸುತ್ತ ಕಥೆ ಮಾಡಲಾಗಿದ್ದು, ಇಲ್ಲಿಯೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ಇದೆಯಂತೆ. ಪುನೀತ್ ರಾಜ್ ಕುಮಾರ್ ನಾಯಕನಾಗಿದ್ದು, ಸಯೀಶಾ ನಾಯಕಿಯಾಗಿ ನಟಿಸಿದ್ದಾರೆ. ವಸಿಷ್ಠ ಸಿಂಹ, ಧನಂಜಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಸಾಥ್ ನೀಡಿದ್ದಾರೆ.


Click it and Unblock the Notifications











