'ಜೇಮ್ಸ್' ರೆಕಾರ್ಡ್: ಒಂದೇ ಥಿಯೇಟರ್‌ನಲ್ಲಿ 5 ಸಾವಿರಕ್ಕೂ ಅಧಿಕ ಟೆಕೆಟ್ ಸೋಲ್ಡ್!
'ಜೇಮ್ಸ್' ಚಿತ್ರದ ಬಗ್ಗೆ ಎಷ್ಟು ಹೇಳಿದರು, ಎಷ್ಟು ಮಾತನಾಡಿದರು ಸಾಲದು. ಅಷ್ಟರ ಮಟ್ಟಿಗೆ ಜೇಮ್ಸ್ ಚಿತ್ರದ ಹವಾ ಇದೆ. ಜೇಮ್ಸ್ ದಿನಕೊಂದು ದಾಖಲೆ ಮಾಡುತ್ತಿದೆ. ಜೇಮ್ಸ್ ಕನ್ನಡ ಚಿತ್ರಗಳು ಹಿಂದೆಂದೂ ಮಾಡಿರದ ರೆಕಾರ್ಡ್ ಮಾಡುತ್ತಿದೆ. ರಿಲೀಸ್ ದಿನ ಹತ್ತಿರವಾಗುತ್ತಿದ ಹಾಗೆ ಜೇಮ್ಸ್ ಬಗ್ಗೆ ಒಂದೊಂದೇ ಸುದ್ದಿಗಳು ಸಂಚಲನ ಮೂಡಿಸುತ್ತಿದೆ.
ಸದ್ಯ ಜೇಮ್ಸ್ ಚಿತ್ರದ ಬಗ್ಗೆ ಮತ್ತೊಂದು ಮಹತ್ತರ ಸುದ್ದಿ ಬಂದಿದೆ. ಜೇಮ್ಸ್ ಚಿತ್ರ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಸಾವಿರಾರು ಮಂದಿ ಚಿತ್ರವನ್ನು ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಸಿನಿಮಾ ಟಿಕೆಟ್ ಸಿಗುವುದು ಮುಂದಿನ ದಿನಗಳಲ್ಲಿ ಕಷ್ಟ ಆಗಬಹುದು. ಹಾಗಾಗಿ ಮುಂಚಿತವಾಗಿಯೇ ಜನ ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಿದ್ದಾರೆ.
ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಜೇಮ್ಸ್ ಹೊಸ ದಾಖಲೆ ಮಾಡಿದೆ. ಒಂದೇ ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಇರುವ 'ಕಾವೇರಿ ಸಿನಿಮಾಸ್' ಚಿತ್ರಮಂದಿರದಲ್ಲಿ ಬೆಳಗ್ಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದ್ದು, ಜನ ಮತ್ತೆ ಮತ್ತೆ ಟಿಕೆಟ್‌ಗಾಗಿ ಮುಗಿ ಬೀಳುತ್ತಿದ್ದಾರೆ.

ಆನ್‌ಲೈನ್ ಮೂಲಕವೂ ಹೆಚ್ಚೆಚ್ಚು ಟಿಕೆಟ್ ಬುಕ್ಕಿಂಗ್. 'ಜೇಮ್ಸ್' ಸಿನಿಮಾದ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿರುವ 5 ಗೋಪಾಲನ್ ಮಾಲ್‌ಗಳಲ್ಲಿ ಜೇಮ್ಸ್ ಸಿನಿಮಾ ಬುಕಿಂಗ್ ಮಾಡಬಹುದಾಗಿದೆ. ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ 'ಜೇಮ್ಸ್' ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ವಿತರಣೆಯಾಗುತ್ತಿದೆ.
ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿಯೇ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಕೊನೆಯ ದಿನವೇ ಥಿಯೇಟರ್‌ಗಳ ಸಂಖ್ಯೆ ಹೊರಬೀಳಲಿದೆ.


Click it and Unblock the Notifications











