For Quick Alerts
  ALLOW NOTIFICATIONS  
  For Daily Alerts

  'ಧರಣಿ ಮಂಡಲ ಮಧ್ಯದೊಳಗೆ' ಪುನೀತ್ ರಾಜ್ ಕುಮಾರ್

  |

  'ಧರಣಿ ಮಂಡಲ ಮಧ್ಯದೊಳಗೆ' ಎಂಬ ಪುಣ್ಯಕೋಟಿಯ ಪದ್ಯ ಯಾರಿಗೆ ತಾನೇ ತಿಳಿದಿಲ್ಲ. ಇದೀಗ ಈ ಹಾಡಿನ ಸಾಲಿನ ಸಿನಿಮಾ ಬಂದಿದೆ. ಈ ವಿಶೇಷ ಶೀರ್ಷಿಕೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ.

  ಸಿನಿಮಾ ಪೋಸ್ಟರ್ ನೋಡಿ ಇಷ್ಟಪಟ್ಟ ಪುನೀತ್ ಪ್ರೀತಿಯಿಂದ ಅದನ್ನು ಲಾಂಚ್ ಮಾಡಿದ್ದಾರೆ. ಹೊಸ ಪ್ರಯೋಗಕ್ಕೆ ಕೈ ಹಾಕಿರುವ ಹೊಸ ಹುಡುಗರ ಬೆನ್ನು ತಟ್ಟಿದ್ದಾರೆ. ಪುನೀತ್ ಬೆಂಬಲ ಚಿತ್ರತಂಡದ ಬಲ ಹೆಚ್ಚಾಗಿದೆ. ಪುನೀತ್ ಗೆ ಚಿತ್ರತಂಡ ಫೋಟೋ ಒಂದನ್ನು ಗಿಫ್ಟ್ ಆಗಿ ನೀಡಿದೆ.

  'ಗುಳ್ಟು' ನವೀನ್ ಗೆ ಜೋಡಿಯಾದ ಐಶಾನಿ ಶೆಟ್ಟಿ 'ಗುಳ್ಟು' ನವೀನ್ ಗೆ ಜೋಡಿಯಾದ ಐಶಾನಿ ಶೆಟ್ಟಿ

  'ಗುಳ್ಟು' ಖ್ಯಾತಿಯ ನವೀನ್ ಈ ಸಿನಿಮಾದ ನಾಯಕನಾಗಿದ್ದಾರೆ. ಸ್ಯಾಂಡಲ್ ವುಡ್ ಶಾಕುಂತಲೆ ಐಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ. ಶ್ರೀಧರ್ ಷಣ್ಮುಖ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದಿ ಪೂರಿ ಜಗನ್ನಾಥ್ ಜೊತೆಗೆ ಶ್ರೀಧರ್ ಕೆಲಸ ಮಾಡಿದ್ದರು.

  ಸದ್ಯ, ಬಿಡುಗಡೆಯಾಗಿರುವ ಪೋಸ್ಟರ್ ಹೊಸತನದಿಂದ ಕೂಡಿದೆ. ಡಿಫರೆಂಟ್ ಆಗಿರುವ ಪೋಸ್ಟರ್ ಸಿನಿಮಾದ ಕಥೆ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಇಡೀ ಸಿನಿಮಾದ ಕಥೆಯನ್ನು ಪೋಸ್ಟರ್ ನಲ್ಲಿ ಹೇಳಿದ್ದು, ಕ್ರಿಯೇಟವ್ ಆಗಿದೆ.

  ಚಿತ್ರದ ಒಂದಿಷ್ಟು ಪಾತ್ರಗಳ ನಡುವೆ ಇಂಟರ್ ಕನೆಕ್ಟ್ ಇದ್ದು, ಅಲ್ಲಿ ನಡೆಯೋ ಕತೆಯ ಜೊತೆಗೆ ಮುಖ್ಯವಾಗಿ ಸಿನಿಮಾದಲ್ಲಿ ಬಂಚ್ ಆಫ್ ಎಮೋಶನ್ಸ್ ಹೇಳೋಕೆ ನಿರ್ದೇಶಕರು ಹೊರಟಿದ್ದಾರಂತೆ. ಇದೊಂದು ಹೈಪರ್ ಲಿಂಕ್ ಶೈಲಿಯ ಸಿನಿಮಾ ಆಗಿದೆಯಂತೆ.

  ಪೂರಿ ಜಗನ್ನಾಥ್ ಶಿಷ್ಯನ ಸಿನಿಮಾದಲ್ಲಿ 'ಗುಳ್ಟು' ನವೀನ್ಪೂರಿ ಜಗನ್ನಾಥ್ ಶಿಷ್ಯನ ಸಿನಿಮಾದಲ್ಲಿ 'ಗುಳ್ಟು' ನವೀನ್

  ಅಂದಹಾಗೆ, ಓಂಕಾರ್ ಹಾಗೂ ಪ್ರಶಾಂತ್ ಅಂಚನ್ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದ ನಿರ್ಮಾಪಕರಗಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನೀಡುತ್ತಿದ್ದಾರೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳು ಬರುತ್ತಿದ್ದಾರೆ.

  English summary
  Actor Puneeth Rajkumar launched 'Dharani Mandala Madhyadolage kannada movie titel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X