For Quick Alerts
  ALLOW NOTIFICATIONS  
  For Daily Alerts

  'ಬಡವ ರಾಸ್ಕಲ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್

  |

  ಡಾಲಿ ಧನಂಜಯ್ ನಿರ್ಮಾಣದ ಮೊದಲ ಸಿನಿಮಾ 'ಬಡವ ರಾಸ್ಕಲ್' ಶುಕ್ರವಾರ ಆರಂಭವಾಗುತ್ತಿದೆ. ಅಣ್ಣಾವ್ರ ಫೇಮಸ್ ಡೈಲಾಗ್ ನ್ನ ಸಿನಿಮಾಗೆ ಶೀರ್ಷಿಕೆಯನ್ನಾಗಿಸಿ ಧನಂಜಯ್ ಸಿನಿಮಾ ಮಾಡ್ತಿದ್ದಾರೆ.

  ಈ ಚಿತ್ರಕ್ಕೆ ಸ್ವತಃ ಧನಂಜಯ್ ಅವರೇ ನಾಯಕ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಬಡವ ರಾಸ್ಕಲ್' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಡಾಲಿ ಧನಂಜಯ್ ರ ಮತ್ತೊಂದು ಹೊಸ ಸಿನಿಮಾ ಬಡವ ರಾಸ್ಕಲ್

  ಸ್ಯಾಂಡಲ್ ವುಡ್ ನ 'ಬಡವ ರಾಸ್ಕಲ್' ಡಾಲಿ ಧನಂಜಯ್ ಸ್ಯಾಂಡಲ್ ವುಡ್ ನ 'ಬಡವ ರಾಸ್ಕಲ್' ಡಾಲಿ ಧನಂಜಯ್

  ಇಷ್ಟು ದಿನ ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಶಂಕರ್ ಗುರು ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಡೈರೆಕ್ಟರ್ ಆಗುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಶಂಕರ್ ಗುರು ಅವರಿಗೆ ಮೊದಲ ಸಿನಿಮಾ ನಿರ್ದೇಶನ ಚಿತ್ರ ಆಗಲಿದೆ.

  ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿರುವ ಧನಂಜಯ್ ಅವರು ಪುನೀತ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅವರ 'ಪೊಗರು' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ 'ಸಲಗ' ಚಿತ್ರದಲ್ಲೂ ಡಾಲಿ ಅಭಿನಯಿಸಿದ್ದಾರೆ.

  ಇದೆಲ್ಲದರ ಜೊತೆಗೆ ದುನಿಯಾ ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಾಯಕನಾಗಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಮೊದಲು ತೆರೆಗೆ ಬರಲಿದೆ ಎಂಬ ನಿರೀಕ್ಷೆ ಇದೆ.

  English summary
  Kannada actor Puneeth Rajkumar launches the first look of Badava Rascal starring Dhananjaya in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X