'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯಲ್ಲಿ ಅಪ್ಪು ಇಷ್ಟಪಟ್ಟ ಅಂಶಗಳಿವು
Recommended Video

'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಚಿತ್ರ ಯಶಸ್ವಿಯಾಗಿ ಮುನ್ನುಗುತ್ತಿದೆ. ಈಗ ಈ ಚಿತ್ರವನ್ನ ನಟ ಪುನೀತ್ ರಾಜ್ ಕುಮಾರ್ ವೀಕ್ಷಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿರುವ ಪುನೀತ್ ''ನಾನು ಕಾರಣಾಂತರಗಳಿಂದ ಈ ಸಿನಿಮಾ ನೋಡಲು ಆಗಿರಲಿಲ್ಲ. ಈಗ ಸಿನಿಮಾ ನೋಡಿದೆ. ಸಿನಿಮಾ ನೋಡಿ ತುಂಬ ಖುಷಿ ಆಯ್ತು. ಚಿತ್ರದಲ್ಲಿ ಅನೇಕ ಅಂಶಗಳು ಇಷ್ಟ ಆಯ್ತು. ಮಕ್ಕಳು, ಅನಂತ್ ನಾಗ್ ಸರ್ ಅದ್ಭುತವಾಗಿ ನಟಿಸಿದ್ದಾರೆ." ಎಂದು ಹೊಗಳಿದ್ದಾರೆ.
ಇಡೀ ಚಿತ್ರದಲ್ಲಿ ಅನೇಕ ಅಂಶಗಳನ್ನು ಮೆಚ್ಚಿಕೊಂಡಿರುವ ಅವರು ಈ ಚಿತ್ರದ ಸ್ಟೈಲ್ ಆಫ್ ಮೇಕಿಂಗ್, ಸಂಗೀತ, ಚಿತ್ರಕಥೆ, ಡೈಲಾಗ್ ಹಾಗೂ ಬಳಸಿರುವ ಕನ್ನಡ ಭಾಷೆಯನ್ನ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಕೆಲಸವನ್ನು ಪುನೀತ್ ಕೊಂಡಾಡಿದ್ದಾರೆ.

ಅಂದಹಾಗೆ, 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಚಿತ್ರ ಕರ್ನಾಟಕ ಮಾತ್ರವಲ್ಲದೆ ಅಂಡಮಾನ್ ನಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಂಡಮಾನ್ ನಲ್ಲಿ ರಿಲೀಸ್ ಆದ ಮೊದಲ ಕನ್ನಡ ಚಿತ್ರ ಇದಾಗಿದೆ.


Click it and Unblock the Notifications









