»   » ಪುನೀತ್ ಗೆ ಸಿಕ್ಕಾಪಟ್ಟೆ ಇಷ್ಟವಾದ ಈ 'Rap' ಸಾಂಗ್ ಯಾವುದು?

ಪುನೀತ್ ಗೆ ಸಿಕ್ಕಾಪಟ್ಟೆ ಇಷ್ಟವಾದ ಈ 'Rap' ಸಾಂಗ್ ಯಾವುದು?

Written By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹಾಡುವುದು ಅಂದ್ರೆ ಇಷ್ಟ. ಅದೇ ರೀತಿ ಹಾಡುಗಳನ್ನ ಕೇಳುವುದು ಅಂದ್ರೂ ತುಂಬಾ ಇಷ್ಟ. ಈಗ ಲೇಟೆಸ್ಟ್ ಆಗಿ ಪುನೀತ್ ಹಾಡೊಂದನ್ನ ಕೇಳಿ ಸಿಕ್ಕಾಪಟ್ಟೆ ಫಿದಾ ಆಗ್ಬಿಟ್ಟಿದ್ದಾರೆ.

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಹಾಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿರುವ ಹಾಡು ಯಾವುದೋ ಸಿನಿಮಾಗೆ ಸಂಬಂಧಪಟ್ಟಿದ್ದಲ್ಲ. 'ಪವರ್ ಸ್ಟಾರ್' ಮನಸ್ಸನ್ನ ಗೆದ್ದ ಈ ಹಾಡು 'Rap' ಸಾಂಗ್. 'Rap' ಗಾಯಕ ಅಲೋಕ್ ಹಾಡಿರುವ 'ಡೇಜಾವೋ' ಸಾಂಗ್.[ಕನ್ನಡಕ್ಕೆ ರ‌್ಯಾಪ್ ಕಲಾವಿದ ಬಾಬಾ ಸೆಹಗಲ್]

'ಆಲ್ ಓಕೆ' ಖ್ಯಾತಿಯ ಅಲೋಕ್ ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ, ನಿರ್ದೇಶನ ಮಾಡಿ, ಅಭಿನಯಿಸಿದ್ದಾರೆ. ಫೆಬ್ರವರಿ 22 ರಂದು ಈ ಹಾಡನ್ನ ಯ್ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ.['ಕನೆಕ್ಷನ್'ನಲ್ಲಿ ಕನೆಕ್ಟ್ ಆದ ಗಾನ ಕೋಗಿಲೆಗಳು & ಕಿರುತೆರೆ ಹಕ್ಕಿಗಳು]

ಈಗ ಈ ಹಾಡನ್ನ ಪುನೀತ್ ಕೇಳಿ, ಎಂಜಾಯ್ ಮಾಡಿದ್ದಲ್ಲದೇ, ತಮ್ಮ ಅಭಿಮಾನಿಗಳಿಗೂ ಕೇಳುವಂತೆ ಕರೆಕೊಟ್ಟಿದ್ದಾರೆ.(ಪುನೀತ್ ಮಾತನಾಡಿರುವ ವಿಡಿಯೋ ನೋಡಿ)

English summary
Kannada Actor Puneeth Rajkumar Likes 'Deja vu' Rap Song. The Song Composed by 'ALL OK' Fame Alok.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada