ಸಾವು-ಬದುಕಿನ ಹೋರಾಟದಲ್ಲಿರುವ ಕಂದಮ್ಮನ ಆಸೆ ಈಡೇರಿಸಿದ 'ರಾಜಕುಮಾರ'

By Bharath Kumar

''ಪ್ಲೀಸ್ ಅಪ್ಪು ಸರ್ ನಿಮ್ಮನ್ನ ನೋಡ್ಬೇಕು, ಆಸೆ ಆಗ್ತಿದೆ.......'' ಇದು ದಾವಣೆಗೆರೆಯ ಪುಟ್ಟ ಬಾಲಕಿ ಪ್ರೀತಿಯ ಅಭಿಮಾನದ ಕೂಗು. ಬಾಲಕಿ ಪ್ರೀತಿ ಎರಡು ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿದರೆ ಜೀವಂತವಾಗಿಡಬಹುದು. ಆದರೆ ದುಬಾರಿ ಚಿಕಿತ್ಸೆಗೆ ದುಡ್ಡಿಲ್ಲದೆ, ಡಯಾಲಿಸಿಸ್'ಗೂ ದುಡ್ಡಿಲ್ಲದೆ ಪರದಾಡುವಷ್ಟು ಬಡ ಕುಟುಂಬ. ಇಂತಹ ಸ್ಥಿತಿಯಲ್ಲಿರುವ ಪ್ರೀತಿಗೆ ಪುನೀತ್ ರಾಜ್ ಕುಮಾರ್ ಅಂದ್ರೆ ಹುಚ್ಚು ಅಭಿಮಾನ. ಪುನೀತ್ ಅವರನ್ನ ನೋಡಬೇಕು, ಅವರ ಜೊತೆ ಮಾತನಾಡಬೇಕು ಎಂಬ ಮಹಾದಾಸೆ.

ಈ ಆಸೆಯನ್ನ ರಾಜರತ್ನ ಪುನೀತ್ ರಾಜ್ ಕುಮಾರ್ ಈಡೇರಿಸಿದ್ದಾರೆ. ಮುಂದೆ ಓದಿ.....

ಅಭಿಮಾನಿಯ ಆಸೆ ಈಡೇರಿಸಿದ ಅಪ್ಪು!

ಅಭಿಮಾನಿಯ ಆಸೆ ಈಡೇರಿಸಿದ ಅಪ್ಪು!

ಎರಡು ಕಿಡ್ನಿ ವೈಫಲ್ಯದಿಂದ ಬಳುತ್ತಿರುವ ಪ್ರೀತಿಯ ಆಸೆಯನ್ನ ಪುನೀತ್ ರಾಜ್ ಕುಮಾರ್ ನೆರೆವೇರಿಸಿದ್ದಾರೆ. ''ಅಪ್ಪು ಸರ್ ನ ನೋಡ್ಬೇಕು'' ಎಂಬ ಆಸೆಯಿಂದ ಕಾಯುತ್ತಿದ್ದ ಬಾಲಕಿ ಪ್ರೀತಿಯ ಅಭಿಮಾನಕ್ಕೆ ಪುನೀತ್ ಅವರ ಹೃದಯ ಮಿಡಿದಿದೆ. ಪ್ರೀತಿಯನ್ನ ಅಪ್ಪು ಭೇಟಿ ಮಾಡಿದ್ದಾರೆ.

'ಪ್ರೀತಿ'ಯನ್ನ ಭೇಟಿ ಮಾಡಿದ ಪುನೀತ್!

'ಪ್ರೀತಿ'ಯನ್ನ ಭೇಟಿ ಮಾಡಿದ ಪುನೀತ್!

ಪುಟ್ಟ ಬಾಲಕಿ ಪ್ರೀತಿಯ ಅಭಿಮಾನಕ್ಕೆ ಮಿಡಿದ ಪುನೀತ್ ರಾಜ್ ಕುಮಾರ್ ಅವರು, 'ಅಂಜನಿಪುತ್ರ' ಚಿತ್ರದ ಶೂಟಿಂಗ್ ಸ್ಪಾಟ್ ಗೆ ಬಾಲಕಿ ಪ್ರೀತಿಯನ್ನ ಕರೆಸಿಕೊಂಡು ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರೀತಿಯ ಆರೋಗ್ಯ ವೆಚ್ಚವನ್ನ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಪುನೀತ್ ಅಭಿಮಾನಿ 'ಪ್ರೀತಿ' ಯಾರು?

ಪುನೀತ್ ಅಭಿಮಾನಿ 'ಪ್ರೀತಿ' ಯಾರು?

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್​ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಪ್ರೀತಿ ಕಿರಿಯವಳು. ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ. ಚಿಕಿತ್ಸೆಗೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದೆ ಈ ಪುಟ್ಟು ಕಂದಮ್ಮ.

ಪುನೀತ್ ಅಂದ್ರೆ ಅಚ್ಚು-ಮೆಚ್ಚು!

ಪುನೀತ್ ಅಂದ್ರೆ ಅಚ್ಚು-ಮೆಚ್ಚು!

ಪ್ರೀತಿಗೆ ನಟ ಪುನೀತ್ ರಾಜ್ ಕುಮಾರ್ ಅಂದ್ರೆ ಅಚ್ಚು-ಮೆಚ್ಚು. ಪುನೀತ್ ಅವರ ಡ್ಯಾನ್ಸ್, ಅವರ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಪುನೀತ್ ಅವರು ಬಾಲನಟನಾಗಿ ಅಭಿನಯಿಸಿರುವ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿರುವ ಪ್ರೀತಿಗೆ, ಪುನೀತ್ ಅವರನ್ನ ನೋಡಬೇಕು ಎಂಬ ಆಸೆಯಿತ್ತು.

ಅಭಿಮಾನಕ್ಕೆ ಮಿಡಿದಿತ್ತು ಶಿವಣ್ಣನ ಹೃದಯ!

ಅಭಿಮಾನಕ್ಕೆ ಮಿಡಿದಿತ್ತು ಶಿವಣ್ಣನ ಹೃದಯ!

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ ಜಯಕುಮಾರ್ ಎಂಬ ಅಭಿಮಾನಿಯೂ ಶಿವಣ್ಣನನ್ನ ನೋಡಬೇಕು ಎಂದು ಆಸೆಯನ್ನ ವ್ಯಕ್ತಪಡಿಸಿದ್ದರು. ಈ ಅಭಿಮಾನಿಯ ಅಭಿಮಾನಕ್ಕೆ ಮಿಡಿದ ಶಿವಣ್ಣ, ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ಆಂಬುಲೆನ್ಸ್ ಮೂಲಕ ಜಯಕುಮಾರ್ ಅವರನ್ನ ಕರೆಸಿಕೊಂಡು ತಮ್ಮಿಂದ ಆಗುವ ಸಹಾಯವನ್ನ ನಾವು ಮಾಡುತ್ತೇವೆ ಎಂದು ಸಾಂತ್ವನ ಹೇಳಿದ್ದರು.[ಅಭಿಮಾನಿಯ ಅಭಿಮಾನಕ್ಕೆ ಮಿಡಿದ ಶಿವರಾಜ್ ಕುಮಾರ್ ಹೃದಯ]

More from Filmibeat

English summary
Actor Puneeth Rajkumar Meets His Fan Preethi, who is suffering from Kidney failure. Preethi who hails from Davangere, is a die-hard fan of the actor and had announced his desire to meet the actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X