For Quick Alerts
  ALLOW NOTIFICATIONS  
  For Daily Alerts

  ಛೆ.. ಈ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ!

  |

  ಪವರ್ ಸ್ಟಾರ್‌ ರಾಜ್‌ಕುಮಾರ್ ದೈಹಿಕವಾಗಿ ನಮ್ಮೊಡನೆ ಇಲ್ಲದೇ ಇದ್ದರೂ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಬದಲು ಅಪ್ಪು ಹೀರೊ ಆಗಿ ನಟಿಸ್ಬೇಕಿತ್ತಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದೊಂದೇ ಅಲ್ಲ ಈ ಹಿಂದೆ ಇಂತಹ ಹಲವು ಸಿನಿಮಾಗಳಲ್ಲಿ ಅಪ್ಪು ನಟಿಸುವುದು ಸಾಧ್ಯವಾಗಿರಲಿಲ್ಲ.

  ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಋಣ ಇರಬೇಕು ಎನ್ನುತ್ತಾರೆ. ಚಿತ್ರರಂಗದಲ್ಲಿ ಸಿನಿಮಾ ಅನೌನ್ಸ್ ಆಗುವುದು, ಅರ್ಧಕ್ಕೆ ನಿಂತು ಹೋಗುವುದು, ಯಾರೋ ನಟಿಸಬೇಕಿದ್ದ ಸಿನಿಮಾದಲ್ಲಿ ಮತ್ಯಾರೋ ನಟಿಸುವುದು ಹೊಸದೇನು ಅಲ್ಲ. ಪುನೀತ್ ರಾಜ್‌ಕುಮಾರ್‌ಗೂ ಕೂಡ ಇದೇ ರೀತಿ ಸಾಕಷ್ಟು ಸಿನಿಮಾಗಳು ಕೈತಪ್ಪಿದೆ. ಈ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸ್ತಿದ್ದಾರೆ. ಸದ್ಯ ಅಪ್ಪು ನಟನೆಯ 'ಲಕ್ಕಿಮ್ಯಾನ್' ಸಿನಿಮಾ ಈಗಲೂ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

  'ಕಾಂತಾರ' ಸಿನಿಮಾದಲ್ಲಿ ನಟಿಸಬೇಕಿತ್ತು ಪುನೀತ್ ರಾಜ್‌ಕುಮಾರ್!'ಕಾಂತಾರ' ಸಿನಿಮಾದಲ್ಲಿ ನಟಿಸಬೇಕಿತ್ತು ಪುನೀತ್ ರಾಜ್‌ಕುಮಾರ್!

  ಅಭಿಮಾನಿಗಳ ಪ್ರೀತಿಯ ಅಪ್ಪು ಸಿನಿಮಾ ಮಾಡದೇ ಬಿಟ್ಟ ಸಿನಿಮಾಗಳ ಲಿಸ್ಟ್ ದೊಡ್ಡದಿದೆ. ಅದರಲ್ಲಿ ಕೆಲವು ಅನೌನ್ಸ್ ಆದರೆ ಮತ್ತೆ ಕೆಲವು ಮಾತುಕತೆ ಹಂತದಲ್ಲೇ ನಿಂತು ಹೋಗಿತ್ತು.

   ಶೂಟಿಂಗ್ ಶುರುವಾಗಿ ನಿಂತಿದ್ದ 'ಮಯೂರ'

  ಶೂಟಿಂಗ್ ಶುರುವಾಗಿ ನಿಂತಿದ್ದ 'ಮಯೂರ'

  ಪುನೀತ್‌ ರಾಜ್‌ಕುಮಾರ್ ನಟಿಸಬೇಕಿದ್ದ ಕೆಲ ಸಿನಿಮಾಗಳು ಅನೌನ್ಸ್ ಆಗಿ ನಿಂತು ಹೋದರೆ, ಮುಹೂರ್ತ ಮಾಡಿ ನಿಂತು ಹೋಗಿದ್ದ ಸಿನಿಮಾ 'ಮಯೂರ'. ಹೌದು ತೆಲುಗು ನಿರ್ದೇಶಕ ಶೋಭನ್ ನಿರ್ದೇಶನದಲ್ಲಿ 'ಮಯೂರ' ಎನ್ನುವ ಸಿನಿಮಾ ಶುರುವಾಗಿತ್ತು. ತೆಲುಗಿನಲ್ಲಿ 'ಬಾಬಿ', 'ವರ್ಷಂ' ಹಾಗೂ 'ಚಂಟಿ' ಸಿನಿಮಾಗಳನ್ನು ನಿರ್ದೇಶಿಸಿದ್ದ ಶೋಭನ್, ಅಪ್ಪುಗಾಗಿ ಒಂದೊಳ್ಲೆ ಸಬ್ಜೆಕ್ಟ್ ಮಾಡಿದ್ದರು. ಚಿತ್ರದಲ್ಲಿಅಪ್ಪು ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಬೇಕಿತ್ತು. ಮುಹೂರ್ತ ಮಾಡಿ ಮೂರ್ನಾಲ್ಕು ದಿನ ಶೂಟಿಂಗ್ ನಂತರ ಶೋಭನ್ ಕೊನೆಯುಸಿರೆಳೆದಿದ್ದರು. ಹಾಗಾಗಿ ಆ ಸಿನಿಮಾ ನಿಂತು ಹೋಗಿತ್ತು. ಕೆ.ಪಿ ಶ್ರೀಕಾಂತ್ ಹಾಗೂ ಆರ್‌. ವಿಜಯ್‌ಕುಮಾರ್ ಸಿನಿಮಾ ನಿರ್ಮಿಸುತ್ತಿದ್ದರು.

   ಭಟ್ಟರ ಜೊತೆ 'ಲಗೋರಿ' ಆಡಬೇಕಿತ್ತು ಅಪ್ಪು!

  ಭಟ್ಟರ ಜೊತೆ 'ಲಗೋರಿ' ಆಡಬೇಕಿತ್ತು ಅಪ್ಪು!

  ಯೋಗರಾಜ್‌ ಭಟ್‌ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ 'ಪರಮಾತ್ಮ' ಸಿನಿಮಾ ಮೂಡಿ ಬಂದಿದ್ದು ಗೊತ್ತೇಯಿದೆ. ಆದರೆ ಇದ್ದಕ್ಕೂ ಮೊದಲು 2008ರಲ್ಲಿ 'ಲಗೋರಿ' ಅನ್ನುವ ಮತ್ತೊಂದು ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಈ ಚಿತ್ರವನ್ನು ಮಾಡಲು ರಾಘಣ್ಣ ಹಾಗೂ ಪುನೀತ್ ಒಪ್ಪಿದ್ದರು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಆದ್ರೆ, ಆಮೇಲೆ ಏನಾಯ್ತೋ ಸಿನಿಮಾ ಸೆಟ್ಟೇರಲಿಲ್ಲ.

  ಒಂದು ತಿಂಗಳಿಗೂ ಮುನ್ನವೇ ಅಪ್ಪು ಅಭಿಮಾನಿಗಳಿಂದ 'ಗಂಧದ ಗುಡಿ' ಸಂಭ್ರಮ!ಒಂದು ತಿಂಗಳಿಗೂ ಮುನ್ನವೇ ಅಪ್ಪು ಅಭಿಮಾನಿಗಳಿಂದ 'ಗಂಧದ ಗುಡಿ' ಸಂಭ್ರಮ!

   ಅಪ್ಪು ಕೈಗೆ 'ಕಂಟ್ರಿ ಪಿಸ್ತೂಲ್' ಕೊಡಬೇಕಿದ್ದ ಸೂರಿ!

  ಅಪ್ಪು ಕೈಗೆ 'ಕಂಟ್ರಿ ಪಿಸ್ತೂಲ್' ಕೊಡಬೇಕಿದ್ದ ಸೂರಿ!

  ಸೂರಿ ಹಾಗೂ ಅಪ್ಪು ಜೋಡಿಯ 'ಜಾಕಿ' ಹಾಗೂ 'ಅಣ್ಣಾ ಬಾಂಡ್' ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಆದರೆ 2015ರಲ್ಲಿ 'ಕೆಂಡಸಂಪಿಗೆ' ಸಿನಿಮಾ ಸಕ್ಸಸ್ ನಂತರ ಅಪ್ಪು ಜೊತೆ 'ಕಂಟ್ರಿ ಪಿಸ್ತೂಲ್' ಅನ್ನುವ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಬಿಟ್ಟು ಅದೇ ಕಾಂಬಿನೇಷನ್‌ನಲ್ಲಿ 'ದೊಡ್ಮನೆ ಹುಡ್ಗ' ಸಿನಿಮಾ ತೆರೆಗೆ ಬಂದಿತ್ತು. ನಂತರ 'ಕಂಟ್ರಿ ಪಿಸ್ತೂಲ್' ಚಿತ್ರದಲ್ಲಿ ಯಶ್ ನಟಿಸ್ತಾರೆ ಅನ್ನಲಾಗಿತ್ತು. ಆದರೆ ಅದು ನಿಜವಾಗಲಿಲ್ಲ.

   ಗೌತಮ್ ವಾಸುದೇವ್-ವೆಟ್ರಿಮಾರನ್ ಚಿತ್ರಗಳು

  ಗೌತಮ್ ವಾಸುದೇವ್-ವೆಟ್ರಿಮಾರನ್ ಚಿತ್ರಗಳು

  ಪುನೀತ್ ರಾಜ್‌ಕುಮಾರ್ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದರು. ಕಥೆ ಇಷ್ಟವಾದರೇ ಬೇರೆ ಯಾವುದರ ಬಗ್ಗೆಯೂ ಯೋಚಿಸದೇ ನಟಿಸ್ತಿದ್ರು. ತಮಿಳು ನಿರ್ದೇಶಕಕ ಕಥೆಗಳನ್ನು ಕೇಳಿದ್ದರು. ಗೌತಮ್ ವಾಸುದೇವ್ ಮೆನನ್ ಹಾಗೂ ವೆಟ್ರಿಮಾರನ್ ನಿರ್ದೇಶನದ ಸಿನಿಮಾಗಳಲ್ಲಿ ನಟಿಸ್ತಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಆದರೆ ಸಾಧ್ಯವಾಗಿರಲಿಲ್ಲ.

  ಪುನೀತ್ ರಾಜ್‌ಕುಮಾರ್ ನಟನೆಯ ಹಳೆ ಸಿನಿಮಾ ನೋಡಲಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ಪುನೀತ್ ರಾಜ್‌ಕುಮಾರ್ ನಟನೆಯ ಹಳೆ ಸಿನಿಮಾ ನೋಡಲಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್

   ಆ ಮೂರು ಚಿತ್ರಗಳು ನಿಂತೇ ಹೋಯ್ತು!

  ಆ ಮೂರು ಚಿತ್ರಗಳು ನಿಂತೇ ಹೋಯ್ತು!

  ಪುನೀತ್‌ ರಾಜ್‌ಕುಮಾರ್ ಎಲ್ಲವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೊರಟುಬಿಟ್ಟರು. ದಿನಕರ್ ತೂಗುದೀಪ್, ಹೆಬ್ಬುಲಿ ಖ್ಯಾತಿಯ ಎಸ್‌. ಕೃಷ್ಣ ಹಾಗೂ ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಸಿನಿಮಾಗಳಲ್ಲಿ ಅಪ್ಪು ನಟಿಸ್ಬೇಕಿತ್ತು. ಈ ಬಗ್ಗೆ ಮಾತುಕತೆ ಮುಗಿದಿತ್ತು. 'ದ್ವಿತ್ವ' ಚಿತ್ರದ ಥೀಮ್ ಪೋಸ್ಟರ್ ಸಹ ರಿಲೀಸ್ ಆಗಿತ್ತು. ಹೊಂಬಾಳೆ ಸಂಸ್ಥೆಯ ಈ ಚಿತ್ರದ ಮುಹೂರ್ತ ಮಾಡಲು ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಅಪ್ಪು ಬಾರದ ಲೋಕಕ್ಕೆ ಹೊರಟುಬಿಟ್ಟರು.

   ಸಾಧ್ಯವಾಗಲಿಲ್ಲ ಅಪ್ಪು- ನೀಲ್ ಸಿನಿಮಾ!

  ಸಾಧ್ಯವಾಗಲಿಲ್ಲ ಅಪ್ಪು- ನೀಲ್ ಸಿನಿಮಾ!

  'ಉಗ್ರಂ' ಸಿನಿಮಾ ಸೂಪರ್ ಹಿಟ್ ಆದಮೇಲೆ ಪ್ರಶಾಂತ್‌ ನೀಲ್ ಒಂದು ಫ್ಯಾಮಿಲಿ ಸಬ್ಜೆಕ್ಟ್ ಮಾಡಿದ್ದರಂತೆ. ಅದರಲ್ಲಿ ಅಪ್ಪು ನಟಿಸ್ಬೇಕಿತ್ತು. ಚಿತ್ರಕ್ಕೆ 'ಆಹ್ವಾನ' ಎನ್ನುವ ಟೈಟಲ್ ಫಿಕ್ಸ್ ಆಗಿತ್ತಂತೆ. ಅಪ್ಪು ಕೂಡ ಕಥೆ ಒಪ್ಪಿದ್ದರಂತೆ. ಆದರೆ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಪುನೀತ್ ಡೇಟ್ಸ್ ಸಿಗದೇ ಆ ಸಿನಿಮಾ ಕೈ ಬಿಟ್ಟು ನೀಲ್ 'KGF' ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು.

   ಅಪ್ಪು ಕಂಬಳ ಓಟ ಮಿಸ್ ಮಾಡಿಕೊಂಡ ಫ್ಯಾನ್ಸ್

  ಅಪ್ಪು ಕಂಬಳ ಓಟ ಮಿಸ್ ಮಾಡಿಕೊಂಡ ಫ್ಯಾನ್ಸ್

  ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವು 'ಕಾಂತಾರ' ಸಿನಿಮಾ ತಿಂಗಳಾಂತ್ಯಕ್ಕೆ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸ್ತಿದೆ. ಆದರೆ ಈ ಚಿತ್ರದಲ್ಲಿ ರಿಷಬ್ ಬದಲು ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತಂತೆ. ಈ ವಿಷಯವನ್ನು ಹೊಂಬಾಳೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ತಿಳಿಸಿದ್ದಾರೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅಪ್ಪು ಸಿನಿಮಾದಿಂದ ಹಿಂದೆ ಸರಿದಿದ್ದರಂತೆ. ಅಪ್ಪು ಚಿತ್ರದಲ್ಲಿ ನಟಿಸಿದ್ದರೆ ಕಂಬಳ ಓಟದ ದೃಶ್ಯ ನೋಡಲು ಮಜಾವಾಗಿ ಇರುತ್ತಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.

  English summary
  Puneeth Rajkumar missed many movies Because of certain reasons. Know More.
  Tuesday, September 20, 2022, 13:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X