ನಿರ್ಲಕ್ಷ್ಯ ಮಾಡಿರುವ 'ಕಹಿ ಸತ್ಯ' ಹೇಳುತ್ತಿದ್ದಾರೆ ಪುನೀತ್ ರಾಜ್ ಕುಮಾರ್

By Pavithra

Recommended Video

ಕಹಿ ಸತ್ಯ ಹೇಳುತ್ತಿದ್ದಾರೆ ಪುನೀತ್ ರಾಜಕುಮಾರ್ | Filmibeat Kannada

ಕಲಾವಿದ ಅಂದರೆ ಕೇವಲ ನಟನಾಗಿ ಉಳಿದುಕೊಳ್ಳಬಾರದು.ಬೇರೆ ಕ್ಷೇತ್ರಗಳಲ್ಲಿಯೂ ತಮ್ಮ ಸೇವೆ ಸಲ್ಲಿಸಬೇಕು ಎನ್ನುವುದನ್ನ ತೋರಿಸಿಕೊಟ್ಟ ನಟ ಡಾ ರಾಜ್ ಕುಮಾರ್. ಅದೇ ಹಾದಿಯಲ್ಲಿ ಅವರ ಪುತ್ರ ಪುನೀತ್ ರಾಜ್ ಕುಮಾರ್ ಕೂಡ ಸಾಗುತ್ತಿದ್ದಾರೆ. ಸಿನಿಮಾ ಅಭಿನಯದ ಜೊತೆಯಲ್ಲಿ ನಿರ್ಮಾಣ, ಗಾಯನ, ಸಮಾಜ ಸೇವೆ ಹೀಗೆ ಸಾಕಷ್ಟು ವಿಭಾಗಗಳಲ್ಲಿ ಪುನೀತ್ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರವನ್ನ ಹೊರತು ಪಡಿಸಿದಂತೆ .ಸರ್ಕಾರದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಅಪ್ಪು ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಅಮೋಲಿ' ಶೀರ್ಷಿಕೆಯ ಸಾಕ್ಷ್ಯಚಿತ್ರಕ್ಕೆ ಧ್ವನಿಯಾಗಿದ್ದಾರೆ.

29 ನಿಮಿಷವಿರುವ ಈ ಸಾಕ್ಷ್ಯಚಿತ್ರ ರಾಷ್ಟ್ರಪ್ರಶಸ್ತಿ ವಿಜೇತರಾದ ಜಾಸ್ಮಿನ್ ಮತ್ತು ಅವಿನಾಶ್ ರಾಯ್ ನಿರ್ದೇಶನ ಮಾಡಿದ್ದಾರೆ. ಭಾರತದಲ್ಲಿ ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಕುರಿತಾದ ಕಥೆ ಇದಾಗಿದ್ದು ಕಾಣೆಯಾದವರು ಎಲ್ಲಿ ಹೋಗುತ್ತಾರೆ? ಅವರಿಗೆ ಏನಾಗುತ್ತದೆ ಎನ್ನುವ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನ ಈ ಮೂಲಕ ಮಾಡಲಾಗಿದೆ. ಸಾಕ್ಷ್ಯಚಿತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕಹಿ ಸತ್ಯ ಹೇಳುತ್ತಿದ್ದಾರೆ ಪುನೀತ್

ಕಹಿ ಸತ್ಯ ಹೇಳುತ್ತಿದ್ದಾರೆ ಪುನೀತ್

ರಾಷ್ಟ್ರಪ್ರಶಸ್ತಿ ವಿಜೇತರಾದ ಜಾಸ್ಮಿನ್ ಮತ್ತು ಅವಿನಾಶ್ ರಾಯ್ ನಿರ್ದೇಶನ ಮಾಡಿರುವ ‘ಅಮೋಲಿ' ಸಾಕ್ಷ್ಯಾಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಭಾರತದಲ್ಲಿ ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಸಾಕ್ಷ್ಯಾಚಿತ್ರ ಇದಾಗಿದೆ.

ಪ್ರತಿ 8 ನಿಮಿಷಕ್ಕೆ ಒಬ್ಬ ಬಾಲಕಿ ಕಾಣೆ

ಪ್ರತಿ 8 ನಿಮಿಷಕ್ಕೆ ಒಬ್ಬ ಬಾಲಕಿ ಕಾಣೆ

‘ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಬಾಲಕಿ ಕಾಣೆಯಾಗುತ್ತಾಳೆ. ಇಲ್ಲಿಯವರೆಗೆ ಅಂದಾಜು 36 ಲಕ್ಷ ಮಕ್ಕಳನ್ನು ಮನೆಯವರಿಗೆ ತಿಳಿಯದಂತೆ ಕರೆದುಕೊಂಡಿ ಹೋಗಿ ವೈಶ್ಯಾವಾಟಿಕೆಗೆ ತಳ್ಳಲಾಗಿದೆ' ನಮ್ಮ ಮುಂದೆ ಇರುವ ನಮ್ಮ ಮಕ್ಕಳು ಸುರಕ್ಷಿತ ಎಂದು ತಿಳಿದುಕೊಂಡು ಇಂತಹ ದೊಡ್ಡ ಸಮಸ್ಯೆಯನ್ನು ನಾವು ನಿರ್ಲಕ್ಷ್ಯ ಮಾಡಿದ್ದೇವೆ ಎನ್ನುವುದು ಆಶ್ಚರ್ಯಕರ.

ಸ್ಟಾರ್ ನಟರ ಧ್ವನಿಯಲ್ಲಿ 'ಅಮೋಲಿ'

ಸ್ಟಾರ್ ನಟರ ಧ್ವನಿಯಲ್ಲಿ 'ಅಮೋಲಿ'

'ಅಮೋಲಿ' ಸಾಕ್ಷ್ಯಚಿತ್ರ ಕನ್ನಡ ಮಾತ್ರವಲ್ಲದೆ, ಹಿಂದಿ, ಇಂಗ್ಲಿಷ್, ತಮಿಳು ಮತ್ತು ಬಂಗಾಲಿ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಹಿಂದಿಯಲ್ಲಿ ರಾಜ್​ಕುಮಾರ್ ರಾವ್, ಇಂಗ್ಲಿಷ್​ನಲ್ಲಿ ವಿದ್ಯಾಬಾಲನ್, ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಬಂಗಾಲಿಯಲ್ಲಿ ಜಿಶು ಸೇನ್​ಗುಪ್ತ ಧ್ವನಿ ನೀಡಿದ್ದಾರೆ. ಈ ಚಿತ್ರಕ್ಕೆ ಕಲ್ಚರ್ ಮಷೀನ್ ಬಂಡವಾಳ ಹೂಡಿದೆ. ಕನ್ನಡದಲ್ಲಿ ಪಿಆರ್​ಕೆ ಆಡಿಯೋ ಸಂಸ್ಥೆಯಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗಿದೆ.

ನಾಲ್ಕು ಮಕ್ಕಳ ಜೀವನ ಕಥೆ

ನಾಲ್ಕು ಮಕ್ಕಳ ಜೀವನ ಕಥೆ

ಅಮೋಲಿ ಸಾಕ್ಷ್ಯಾಚಿತ್ರದಲ್ಲಿ ನಾಲ್ಕು ಕಾಣೆಯಾಗಿರುವ ಬಾಲಕಿಯರ ನೈಜ ಕಥೆಯನ್ನ ಬಿಚ್ಚಿಡಲಾಗಿದೆ. ಆದರೆ ಇದು ಕೇವಲ ಈ ನಾಲ್ಕು ಜನರ ವ್ಯಥೆ ಮಾತ್ರವಲ್ಲ ದೇಶದಲ್ಲಿ ಇಂತಹ ಸಾಕಷ್ಟು ಹೆಣ್ಣು ಮಕ್ಕಳು ಈ ಜಾಲದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

More from Filmibeat

English summary
Culture Machine in association with PRK Audio Presents 'Amoli' - Priceless. A powerful documentary film on the shocking truths about the lesser known business of child sex trade in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X