ಅಪ್ಪುಗಾಗಿ ಸಿನಿಮಾ: ಕನಸಾಗೇ ಉಳಿಯಿತು ಮಂಸೋರೆ, ಟಿ.ಕೆ. ದಯಾನಂದ್ Mission

ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ಪವರ್‌ ಸ್ಟಾರ್‌ ಅನ್ನುವ ಹೆಸರು ಸುಮ್ಮನೆ ಬಂದಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದ್ದಾರೆ ಎಂದರೆ ಪಕ್ಕದಲ್ಲಿರುವವರಿಗೆ ಪವರ್‌ ಬಂದು ಬಿಡತ್ತೆ ಅಂತ ಹೇಳಬಹುದು. ಇನ್ನು ಪುನೀತ್‌ಗಾಗಿ ಸಿನಿಮಾ ಮಾಡಬೇಕು ಅಂತ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಕನಸು ಕಟ್ಟಿರುತ್ತಾರೆ. ಕಥೆಗಾರರು ಅವರಿಗಾಗಿ ತೆರೆ ಮರೆಯಲ್ಲಿಯೇ ಕಥೆಗಳನ್ನು ಬರೆಯುತ್ತಿರುತ್ತಾರೆ. ಆದ್ರೆ ಕನ್ನಡದ ಸೂಪರ್ ಸ್ಟಾರ್ ಆಗಿದ್ದ ಪುನೀತ್‌ಗೆ ಸಿನಿಮಾ ಮಾಡಬೇಕು ಅಂದ್ರೆ ಅದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಅವರು ಅಷ್ಟು ಬ್ಯುಸಿಯಾಗಿ ಇರುತ್ತಾ ಇದ್ದರು. ಜೊತೆಗೆ ಪುನೀತ್‌ಗೆ ತಕ್ಕನಾದ ಸಿನಿಮಾ ಮಾಡೋದು ಕೂಡ ಒಂದು ಚಾಲೆಂಜ್. ಅಂತ ಕನಸು ಕಟ್ಟಿಕೊಂಡಿದ್ದ ತಂಡಗಳಲ್ಲಿ "ಮಿಷನ್ ಕೊಲಂಬಸ್" ಚಿತ್ರತಂಡ ಕೂಡ ಒಂದು.

ಮಿಷನ್ ಕೊಲಂಬಸ್ ಚಿತ್ರದ ಪೋಸ್ಟರ್ ಸದ್ಯ ರಿಲೀಸ್ ಆಗಿದೆ. ಈ ಪೋಸ್ಟರ್ ನೋಡಿದ್ರೇನೇ ವಿಭಿನ್ನ ಅನ್ನುವ ಪದಕ್ಕೆ ಅರ್ಥ ಬಂದಂತಿದೆ ಎನಿಸುತ್ತೆ . ಈ ಪೋಸ್ಟರ್ನಲ್ಲಿ ಅಪ್ಪು ಹಿಂದೆಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿಯ ಕೂದಲು ಬಿಳಿಯ ಗಡ್ಡದೊಂದಿಗೆ ರಗಡ್‌ ಕಿಲ್ಲಿಂಗ್‌ನಲ್ಲಿ ಪುನೀತ್‌ ಕಾಣಿಸಿಕೊಂಡಿದ್ದಾರೆ. ಅಪ್ಪುವನ್ನು ಈ ರೀತಿಯಾಗಿ ಊಹಿಸಿಕೊಳ್ಳುವುದು ಕೂಡ ಒಂದು ರೀತಿಯ ವಿಭಿನ್ನ ಯೋಚನೆ. ಈ ಪೋಸ್ಟರನ್ನು ನೋಡಿದ ಕೂಡಲೆ ಎಂಥವರಿಗೂ ಅಪ್ಪು ಲುಕ್ ಇಷ್ಟ ಆಗಿ ಬಿಡುತ್ತೆ.

ಪುನೀತ್ ರಾಜಕುಮಾರ್ ಅವರನ್ನು ರೂಪದಲ್ಲಿ ಕೂಡ ನೋಡಬಹುದು ಎಂದು ಯೋಚನೆ ಮಾಡಿದ್ದು ಕಥೆಗಾರ ಟಿ.ಕೆ ದಯಾನಂದ್. ನಿರ್ದೇಶಕ ಮನ್ಸೋರೆ ಮತ್ತು ವೀರೇಂದ್ರ. ಹೀಗೊಂದು ಕಥೆಯನ್ನ ರೆಡಿಮಾಡಿ ಪೋಸ್ಟರ್ ಜೊತೆಗೆ ಚಿತ್ರತಂಡ ಪುನೀತ್‌ ರಾಜ್‌ಕುಮಾರ್‌ ಮುಂದೆ ಹಾಜರಾಗಿತ್ತು. 2016ರಲ್ಲಿ ಈ ಕಥೆಯನ್ನು ಚಿತ್ರತಂಡ ಅಪ್ಪುಗೆ ಒಪ್ಪಿಸಿತ್ತು. ಆದರೆ ಆಗ ಅಪ್ಪು Busy ಇದ್ದ ಕಾರಣ ಸಿನಿಮಾ ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ನಂತರ ಆ್ಯಕ್ಟ್ 1978 ಚಿತ್ರ ಬಂದಾಗ ಆ ಸಿನಿಮಾ ನೋಡಿ ಮೆಚ್ಚಿಕೊಂಡು ಅಪ್ಪು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಈ ಮಿಷನ್ ಕೊಲಂಬಸ್ ಸಿನಿಮಾವನ್ನು ಮಾಡುವುದಾಗಿಯೂ ಭರವಸೆಯನ್ನು ನೀಡಿದ್ದರು. ಸದ್ಯಕ್ಕೆ ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳನ್ನು ಮುಗಿಸಿ ನಂತರ ಮಿಷನ್ ಕೊಲಂಬಸ್ ಚಿತ್ರವನ್ನು ಕೈಗೆತ್ತಿಕೊಳ್ಳುವ ಯೋಚನೆಯಲ್ಲಿದ್ದರು.

Puneeth Rajkumar New Look In Mission Columbus Movie

ಇದೇ ಮಾತನ್ನು ಚಿತ್ರತಂಡಕ್ಕೂ ಅಪ್ಪು ಹೇಳಿದರು. ಮುಂದೊಂದು ದಿನ ಈ ಚಿತ್ರವನ್ನು ಮಾಡೋಣ ಎನ್ನುವ ಭರವಸೆಯನ್ನು ಪುನೀತ್ ರಾಜಕುಮಾರ್ ಚಿತ್ರತಂಡಕ್ಕೆ ನೀಡಿದ್ದರಂತೆ. ಚಿತ್ರತಂಡ ಕೂಡ ಬೇರೆ ಸಿನಿಮಾಗಳ ಕೆಲಸದಲ್ಲಿ ನಿರತರಾಗಿದ್ದು, ಈ ಚಿತ್ರದ ತಯಾರಿಗಳನ್ನು ಮಾಡಿಕೊಂಡಿತ್ತು. ಈ ರೀತಿಯಾಗಿ ಪುನೀತ್ ಅವರನ್ನು ತೆರೆಮೇಲೆ ತರಬೇಕು ಅನ್ನುವ ಅಗಾಧವಾದ ಕನಸನ್ನು ಕಟ್ಟಿಕೊಂಡಿತ್ತು ಚಿತ್ರತಂಡ. ಆದರೀಗ ಈ ಕನಸು ಕೇವಲ ಕನಸಾಗಿಯೇ ಉಳಿದು ಹೋಗಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ ನಿರ್ದೇಶಕ ಮಂಸೋರೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಪೋಸ್ಟರ್ ಬಗ್ಗೆ ಹೇಳೋದಾದರೆ ಅಪ್ಪುವನ್ನು ಲುಕ್‌ನಲ್ಲಿ ನೋಡಬೇಕು ಎಂದು ಕನಸು ಕಟ್ಟಿದಂತಹ ಚಿತ್ರತಂಡ ಈ ಪೋಸ್ಟರ್‌ಗಾಗಿ ಸಾಕಷ್ಟು ಪ್ರಯತ್ನ ಮಾಡಿತ್ತು. ನಂತರ ಈ ಒಂದು ಪೋಸ್ಟರ್ ಮೂಡಿಬಂದಿದೆ. ಸಹಾಯಕ ನಿರ್ದೇಶಕ ಸರವಣನ್ ಈ ಪೋಸ್ಟರನ್ನು ಡಿಸೈನ್ ಮಾಡಿದ್ದಾರೆ. ಸುಮಾರು ಹತ್ತರಿಂದ ಹದಿನೈದು ಸ್ಕೆಚ್‌ಗಳನ್ನು ತಯಾರಿಸಿದ್ದು. 15 ಸ್ಕೆಚ್‌ ಬಳಿಕ ಈ ಪೋಸ್ಟರ್‌ ಮೂಡಿ ಬಂದಿದೆ.

More from Filmibeat

English summary
Puneeth Rajkumar New Look In Mission Columbus Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X