For Quick Alerts
  ALLOW NOTIFICATIONS  
  For Daily Alerts

  ಹೊಸ ಲುಕ್ ನಲ್ಲಿ ಪುನೀತ್ ರಾಜ್ ಕುಮಾರ್: ಗಡ್ಡ ತೆಗೆದು ಮೀಸೆಯಲ್ಲಿ ಕಾಣಿಸಿಕೊಂಡ ಅಪ್ಪು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ಲುಕ್ ನಲ್ಲಿ ದರ್ಶನ ನೀಡಿದ್ದಾರೆ. ಲಾಕ್ ಡೌನ್ ನಲ್ಲಿ ಉದ್ದ ಗಡ್ಡ, ಮೀಸೆ ಬಿಟ್ಟಿದ್ದ ಅಪ್ಪು ಈಗ ಗಡ್ಡ ತೆಗೆದು ಮೀಸೆ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆವರೆಗೂ ಪುನೀತ್ ಗಡ್ಡದ ಗೆಟಪ್ ನಲ್ಲಿದ್ದರು. ಇದೀಗ ಗಡ್ಡ ಶೇವ್ ಮಾಡಿ ಮೀಸೆ ಮಾತ್ರ ಬಿಟ್ಟಿದ್ದಾರೆ.

  ಮೀಸೆ ಲುಕ್ ನಲ್ಲಿ ಪುನೀತ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ಹೊಸ ಅವತಾರ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಉದ್ದ ಮೀಸೆ ಲುಕ್ ನಲ್ಲಿ ಪುನೀತ್ ಕಾಣಿಸಿಕೊಳ್ಳುವುದು ಅಪರೂಪ. ಇತ್ತೀಚಿಗೆ 'ಮಾಯಾಬಜಾರ್' ಚಿತ್ರದ ಹಾಡಿನಲ್ಲಿ ಅಪ್ಪು ಮೀಸೆ ಗೆಟಪ್ ನಲ್ಲಿ ಮಿಂಚಿದ್ದರು. ರೆಟ್ರೋ ಸ್ಟೈಲ್ ನಲ್ಲಿ ಪುನೀತ್ ಎಂಟ್ರಿ ಕೊಟ್ಟಿದ್ದರು.

  ಪುನೀತ್ ರಾಜ್‌ಕುಮಾರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಅವಕಾಶಪುನೀತ್ ರಾಜ್‌ಕುಮಾರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಅವಕಾಶ

  ಇದೀಗ ಮತ್ತೆ ಮೀಸೆ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಈ ಲುಕ್ ಜೇಮ್ಸ್ ಅಥವಾ ಯುವರತ್ನ ಸಿನಿಮಾಗೆ ಇರಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಪುನೀತ್ ಯುವರತ್ನ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಹೈ ವೋಲ್ಟೇಜ್ ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ. ಕೊನೆಯ ಹಂತದ ಚಿತ್ರೀಕರಣಲ್ಲಿ ನಿರತರಾಗಿದ್ದಾರೆ.

  ಜೊತೆಗೆ ಜೇಮ್ಸ್ ಸಿನಿಮಾದ ಚಿತ್ರೀಕರಣ ಸಹ ಶುರುವಾಗುತ್ತಿದೆ. ಹಾಗಾಗಿ ಇದು ಈ ಲುಕ್ ಜೇಮ್ಸ್ ಸಿನಿಮಾದ ಅಥವಾ ಯುವರತ್ನ ಚಿತ್ರದ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಪುನೀತ್ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  800 movie : ಸಿನಿಮಾ ಆಗ್ತಿದೆ Muttiah Muralitharan ಜೀವನ | Filmibeat Kannada

  ಇತ್ತೀಚಿಗಷ್ಟೆ ಪುನೀತ್ ಗೋವಾದಲ್ಲಿ ದಾಡಿ ಬಿಟ್ಟಿರುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆಗಲೇ ಗಡ್ಡ ಶೇವ್ ಮಾಡಿದ್ದಾರೆ. ಪುನೀತ್ ಹೊಸ ಲುಕ್ ಸಿನಿಮಾಗಿ ಮಾಡಿಸಿದ್ದಾರಾ ಅಥವಾ ಲುಕ್ ಟೆಸ್ಟ್ ಎನ್ನುವುದು ಕಾದುನೋಡಬೇಕು.

  English summary
  Puneeth Rajkumar new Mustache look viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X