twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್: ಪುನೀತ್ ರಾಜ್ ಕುಮಾರ್ ವಿರೋಧ

    |

    ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚಿತ್ರಮಂದಿರಗಳಿಗೆ ನೀಡಲಾಗಿದ್ದ 100 ಪರ್ಸೆಂಟ್ ಆಸನ ಭರ್ತಿ ಆದೇಶವನ್ನು ಹಿಂಪಡೆಯಲಾಗಿದೆ. ಇಂದಿನಿಂದ ಜಾರಿ ಬರುವಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 50 ಪರ್ಸೆಂಟ್ ನಿಯಮ ಪಾಲಿಸಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಿದೆ.

    ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ರಾಜ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್ ಲೈವ್ ಬಂದಿದ್ದ ಪವರ್ ಸ್ಟಾರ್ ''ಸರ್ಕಾರ ಈ ನಿರ್ಧಾರ ಮಾಡಿದ್ದು ತಪ್ಪು, ಚಿತ್ರರಂಗಕ್ಕೆ ಈ ಆದೇಶದಿಂದ ತೊಂದರೆಯಾಗಲಿದೆ. ನಮಗೆ 100 ಪರ್ಸೆಂಟ್ ಅವಕಾಶ ಬೇಕು'' ಎಂದು ಆಗ್ರಹಿಸಿದ್ದಾರೆ.

    ಸರ್ಕಾರದ ಹೊಸ ಮಾರ್ಗಸೂಚಿಯಂತೆ ಬಿಬಿಎಂಪಿ ವ್ಯಾಪ್ತಿಯ ಚಿತ್ರಮಂದಿರಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಚಿತ್ರಮಂದಿರಗಳು, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಧಾರಾವಾಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್‌ಗೆ ಇಳಿಕೆ ಮಾಡಲಾಗಿದೆ. ಮುಂದೆ ಓದಿ...

    ತುಂಬಾ ಅನ್ಯಾಯವಾಗುತ್ತೆ

    ತುಂಬಾ ಅನ್ಯಾಯವಾಗುತ್ತೆ

    ''ಜನರು ಎಲ್ಲ ಕಡೆಯೂ ಮುಂಜಾಗ್ರತೆ ವಹಿಸಿ ಸಿನಿಮಾ ನೋಡ್ತಿದ್ದಾರೆ. ಎಲ್ಲರು ನಿಯಮ ಪಾಲನೆ ಮಾಡ್ತಿದ್ದಾರೆ. ಹಾಗಾಗಿ, 50 ಪರ್ಸೆಂಟ್ ನಿರ್ಧಾರ ಸರಿಯಲ್ಲ. ನಮಗೆ ತುಂಬಾ ಅನ್ಯಾಯವಾಗುತ್ತೆ'' ಎಂದು ಪುನೀತ್ ಖಂಡಿಸಿದ್ದಾರೆ.

    ನಮಗೆ ಆಘಾತ ಮಾಡಬೇಡಿ

    ನಮಗೆ ಆಘಾತ ಮಾಡಬೇಡಿ

    ಇದೇ ವೇಳೆ ಮಾತನಾಡಿದ ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ''ನಮ್ಮ ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನ ಕಾಣ್ತಿದೆ. ಕುಟುಂಬ ಸಮೇತ ಜನರು ಥಿಯೇಟರ್‌ಗೆ ಬರ್ತಿದ್ದಾರೆ. ಅವರೆಲ್ಲರೂ ಸುರಕ್ಷಿತೆ ವಹಿಸಿದ್ದಾರೆ. ಈಗ ಸರ್ಕಾರ 50 ಪರ್ಸೆಂಟ್ ಮಾಡಿದ್ರೆ ನಮಗೆ ಬಹಳ ದೊಡ್ಡ ನಷ್ಟ ಆಗುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಮಗೆ ಮಾತ್ರ ಏಕೆ ಕಡಿವಾಣ?

    ನಮಗೆ ಮಾತ್ರ ಏಕೆ ಕಡಿವಾಣ?

    ''ಎಲ್ಲ ಕಡೆಯೂ ಜನ ಸೇರುತ್ತಿದ್ದಾರೆ. ಚುನಾವಣೆ ಸಭೆ ನಡೆಯುತ್ತಿದೆ. ಬರಿ ಸಿನಿಮಾ ಥಿಯೇಟರ್‌ಗೆ ಮಾತ್ರ ಕಡಿವಾಣ ಹಾಕಲಾಗುತ್ತಿದೆ. ಇದು ಸೂಕ್ತ ನಿರ್ಧಾರವಲ್ಲ'' ಎಂದು ಸಂತೋಷ್ ಆನಂದ್ ರಾಮ್ ಕಿಡಿಕಾರಿದ್ದಾರೆ.

    Recommended Video

    ಯುವ ರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? | Filmibeat Kannada
    ನಿರ್ಮಾಪಕರು ಎಲ್ಲಿಗೆ ಹೋಗಬೇಕು

    ನಿರ್ಮಾಪಕರು ಎಲ್ಲಿಗೆ ಹೋಗಬೇಕು

    ''ಯಾವುದೇ ಸುಳಿವು ನೀಡದೆ, ನಮಗೆ ಮಾಹಿತಿ ನೀಡದೆ ಏಕಾಏಕಿ ಈ ನಿರ್ಧಾರ ಪ್ರಕಟಿಸಿದರೆ, ನಮ್ಮ ಕಥೆ ಏನಾಗಬೇಕು. ನಿನ್ನೆ ನಮ್ಮ ಸಿನಿಮಾ ಬಿಡುಗಡೆಯಾಗಿದೆ. ನಿರ್ಮಾಪಕರು ಎಲ್ಲಿಗೆ ಹೋಗಬೇಕು. ಸಿನಿಮಾ ನಂಬಿದವರು ಪರಿಸ್ಥಿತಿ ಏನು'' ಎಂದು ನಿರ್ದೇಶಕ ಸಂತೋಷ್ ಅಸಮಾಧಾನಗೊಂಡಿದ್ದಾರೆ.

    English summary
    Karnataka Government announces New Covid guidelines. Theater occupancy reduced to 50% in some districts.
    Saturday, April 3, 2021, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X