ಸತ್ಯ ಪ್ರಕಾಶ್ 'ಮ್ಯಾನ್ ಆಫ್ ದಿ ಮ್ಯಾಚ್'ಗೆ ಸಿಕ್ತು ಮತ್ತಷ್ಟು 'ಪವರ್'
'ರಾಮಾ ರಾಮಾ ರೇ...' ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಸಾರಥ್ಯದಲ್ಲಿ ಹೊಸ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್' ಮೂಡಿಬರುತ್ತಿದೆ. ಈ ಸಿನಿಮಾ ಅನೌನ್ಸ್ ಮಾಡಿ ತಿಂಗಳಾಗಿತ್ತು. ಇದೀಗ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಸತ್ಯ ಪ್ರಕಾಶ್ ಹೊಸ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾಥ್ ಸಿಕ್ಕಿದೆ.
Recommended Video
'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಸಂಸ್ಥೆ ನಿರ್ಮಾಣ ಮಾಡಲು ಮುಂದಾಗಿದೆ. ವಿಭಿನ್ನ ಮತ್ತು ವಿನೂತನ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಪಿ ಆರ್ ಕೆ ಸಂಸ್ಥೆ ಇದೀಗ ಸತ್ಯ ಪ್ರಕಾಶ್ ಸಿನಿಮಾಗೆ ಸಾಥ್ ನೀಡಿರುವುದು ಚಿತ್ರಕ್ಕೆ ಮತ್ತಷ್ಟು ಬಲ ಬಂದಿದೆ. ಕಥೆ ಕೇಳಿ ಇಂಪ್ರೆಸ್ ಆದ ಅಪ್ಪು ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರಿದ್ದಾರೆ.
'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರೀಕರಣ ಏಪ್ರಿಲ್ ನಲ್ಲೇ ಪ್ರಾರಂಭವಾಗಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರೀಕರಣ ಸೆಟ್ ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಸತ್ಯ ಪ್ರಕಾಶ್ ಮತ್ತು ತಂಡದ ಜೊತೆ ಕೆಲ ಸಮಯ ಕಳೆದು ಅಲ್ಲಿಂದ ಹೊರಟು ಹೋಗಿದ್ದಾರೆ. ಸತ್ಯ ಪ್ರಕಾಶ್ ಒಂದಲ್ಲ ಎರಡಲ್ಲ ಸಿನಿಮಾ ಬಳಿಕ ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಇಬ್ಬರ ಹೊಸ ಸಿನಿಮಾ ಇನ್ನೇನು ಸೆಟ್ಟೇರಲಿದೆ ಎಂದು ಅಂದುಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದ್ದು ಸದ್ಯ 'ಮ್ಯಾನ್ ಆಫ್ ದಿ ಮ್ಯಾಚ್' ಕೈಗೆತ್ತಿಕೊಂಡಿದ್ದಾರೆ.

ಅಂದಹಾಗೆ 'ಮ್ಯಾನ್ ಆಫ್ ದಿ ಮ್ಯಾನ್' ಚಿತ್ರದಲ್ಲಿ 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ಮತ್ತು ಧರ್ಮಣ್ಣ ನಟಿಸುತ್ತಿದ್ದಾರೆ. ಉಳಿದಂತೆ ಎಲ್ಲಾ ಹೊಸಬರು. ಈಗಾಗಲೇ ಎರಡು ಸಿನಿಮಾಗಳ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮನಗೆದ್ದಿರುವ ಸತ್ಯ ಪ್ರಕಾಶ್ ಅವರ 'ಮ್ಯಾನ್ ಆಫ್ ದಿ ಮ್ಯಾಚ್' ಕೂಡ ಕುತೂಹಲ ಮೂಡಿಸಿದೆ.


Click it and Unblock the Notifications










