ಪುನೀತ್ ನಿರ್ಮಾಣದ 'ಲಾ' ಸಿನಿಮಾ ರಿಲೀಸ್ ಗೊಂದಲ: ಒಟಿಟಿಯಲ್ಲಿ ಬಿಡುಗಡೆಯಾಗುತ್ತಾ? ಇಲ್ಲವಾ?

By ಫಿಲ್ಮ್ ಡೆಸ್ಕ್

ಕೊರೊನಾ ವೈರಸ್ ಲಾಕ್ ಡೌನ್ ನಿಂದ ಚಿತ್ರರಂಗದ ಲೆಕ್ಕಾಚಾರವೆ ತಲೆಕೆಳಗಾಗಿದೆ. ರಿಲೀಸ್ ಗೆ ರೆಡಿಯಾಗಿದ್ದ ಅನೇಕ ಸಿನಿಮಾಗಳು ಚಿತ್ರಮಂದಿರದ ಬದಲು ಈಗ ಡಿಜಿಟಲ್ ಫ್ಲಾಟ್ ಫಾರ್ಮ್ ನತ್ತ ಮುಖ ಮಾಡಿವೆ. ಈಗಾಗಲೆ ಹಿಂದಿ ಮತ್ತು ತೆಲುಗಿನಲ್ಲಿ ಕೆಲವು ಸಿನಿಮಾಗಳನ್ನು ಆನ್ ಲೈನ್ ನಲ್ಲಿ ನೇರವಾಗಿ ರಿಲೀಸ್ ಮಾಡಲಾಗಿದೆ.

Recommended Video

ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

ಸದ್ಯ ಕನ್ನಡ ಸಿನಿಮಾ ಲಾ ಸಿನಿಮಾ ಕೂಡ ಒಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಕಳೆದ ಕೆಲವು ದಿನಗಳ ಹಿಂದೆಯೆ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಅನೌನ್ಸ್ ಕೂಡ ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೆ ಅಪ್ ಡೆಟ್ ನೀಡದೆ, ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಸಿನಿಮಾ ರಿಲೀಸ್ ಆಗುತ್ತೋ ,ಇಲ್ಲವೋ ಎನ್ನುವುದೇ ಇನ್ನೂ ಅಧಿಕೃತವಾಗಿಲ್ಲ.

ಜುನ್ 26ಕ್ಕೆ ರಿಲೀಸ್ ಆಗಬೇಕಿತ್ತು

ಜುನ್ 26ಕ್ಕೆ ರಿಲೀಸ್ ಆಗಬೇಕಿತ್ತು

'ಲಾ' ಸಿನಿಮಾ ಜೂನ್ 26ಕ್ಕೆ ರಿಲೀಸ್ ಮಾಡುವುದಾಗಿ ಕೆಲವು ದಿನಗಳ ಹಿಂದೆಯೆ ಅಮೆಜಾನ್ ಪ್ರೈಮ್ ಅನೌನ್ಸ್ ಮಾಡಿತ್ತು. ಆದರೆ ಸಿನಿಮಾ ರಿಲೀಸ್ ಗೆ ಇನ್ನೊಂದೆ ದಿನ ಬಾಕಿ ಇದೆ. ಆದರೂ ಸಿನಿಮಾ ರಿಲೀಸ್ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ. ಚಿತ್ರದ ಪ್ರಮೋಷನ್ ಇರಲಿ ರಿಲೀಸ್ ಆಗುತ್ತೊ, ಇಲ್ಲವೋ ಎನ್ನುವ ಬಗ್ಗೆಯೇ ಮಾಹಿತಿ ನೀಡದೆ ಸಿನಿಪ್ರಿಯರಲ್ಲಿ ಗೊಂದಲ ಮೂಡಿಸಿದ್ದಾರೆ.

ಅಭಿಮಾನಿಗಳ ಪ್ರಶ್ನೆ, ಅಮೆಜಾನ್ ಪ್ರತಿಕ್ರಿಯೆ ಹೀಗಿದೆ

ಅಭಿಮಾನಿಗಳ ಪ್ರಶ್ನೆ, ಅಮೆಜಾನ್ ಪ್ರತಿಕ್ರಿಯೆ ಹೀಗಿದೆ

ಲಾ ಸಿನಿಮಾ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದ ಅಮೆಜಾನ್ ಪ್ರೈಮ್ ಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸಿನಿಮಾ ಜೂನ್ 26ಕ್ಕೆ ರಿಲೀಸ್ ಆಗುತ್ತಾ ಎಂದು ಟ್ವೀಟ್ ಮಾಡಿ ಕೇಳುತ್ತಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ, ಕೊನೆಗೂ ಅಮೆಜಾನ್ ಪ್ರೈಮ್ ಜೂನ್ 26ಕ್ಕೆ ಬಿಡುಗಡೆಯಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದೆ.

ಚಿತ್ರದ ಬಗ್ಗೆ ಇಲ್ಲ ಪ್ರಮೋಷನ್

ಚಿತ್ರದ ಬಗ್ಗೆ ಇಲ್ಲ ಪ್ರಮೋಷನ್

ಲಾ ಸಿನಿಮಾ ರಿಲೀಸ್ ಬಗ್ಗೆ ಎಲ್ಲಿಯೂ ಪ್ರಮೋಷನ್ ಮಾಡಿಲ್ಲ. ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ. ಚಿತ್ರತಂಡ ಆಗಲಿ, ಪ್ರೊಡಕ್ಷನ್ ಹೌಸ್ ಅಥವಾ ಕಲಾವಿದರು ಯಾರು ಸಹ ಸಿನಿಮಾ ರಿಲೀಸ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿಲ್ಲ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

ಪ್ರಜ್ವಲ್ ದೇವರಾಜ್ ಪತ್ನಿ ಅಭಿನಯದ ಸಿನಿಮಾ

ಪ್ರಜ್ವಲ್ ದೇವರಾಜ್ ಪತ್ನಿ ಅಭಿನಯದ ಸಿನಿಮಾ

ಪುನೀತ್ ನಿರ್ಮಾಣ ಸಂಸ್ಥೆಯಿಂದ ಬರ್ತಿರುವ ಮೂರನೆ ಸಿನಿಮಾ ಇದಾಗಿದೆ. ಚಿತ್ರಕ್ಕೆ ರಘು ಸಮರ್ಥ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ರಾಗಿಣಿ ಅಭಿನಯದ ಮೊದಲ ಸಿನಿಮಾ ಇದಾಗಿದೆ.

ಕುತೂಹಲ ಮೂಡಿಸಿರುವ ಸಿನಿಮಾ

ಕುತೂಹಲ ಮೂಡಿಸಿರುವ ಸಿನಿಮಾ

ಲಾ ಹೆಸರೇ ಹೇಳುವ ಹಾಗೆ ಇದು ಕಾನೂನು ಹೋರಾಟದ ಸಿನಿಮಾ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ನಾಯಕಿಯ ಕಾನೂನು ಹೋರಾಟದ ಸುತ್ತ ನಡೆಯುವ ಸಿನಿಮಾ ಇದಾಗಿದೆ. 'ತನಗಾಗಿ ಹೋರಾಟ ಮಾಡುವುದಕ್ಕೆ ಆಕೆಯನ್ನು ಕಾನೂನು ಕೂಡ ತಡೆಯಲಾರದು' ಎನ್ನುವ ಕ್ಯಾಪ್ಷನ್ ಅನ್ನು ಸಿನಿಮಾತಂಡ ನೀಡಿದೆ. ರಾಗಿಣಿ ಅವರ ಮೊದಲ ಸಿನಿಮಾವಾಗುದ್ದು, ಪಿ ಆರ್ ಕೆ ಬ್ಯಾನರ್ ನಿಂದ ಬರ್ತಿರುವ ಸಿನಿಮಾ ಎನ್ನುವ ಕುತೂಹಲ ಒಂದೆಡೆಯಾದರೆ, ಸುಮಾರು ಮೂರು ತಿಂಗಳ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹಾಗಾಗಿ ಪ್ರೇಕ್ಷಕರಲ್ಲಿ ಕುತೂಹಲ ತುಸು ಹೆಚ್ಚೆ ಇದೆ. ಆದರೆ ಈ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ನೀಡದೆ ಗೊಂದಲ ಮೂಡಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ನಿರ್ಮಾಣದ 3ನೇ ಸಿನಿಮಾ

ಪುನೀತ್ ರಾಜ್ ಕುಮಾರ್ ನಿರ್ಮಾಣದ 3ನೇ ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಪಿ ಆರ್ ಕೆ ಬ್ಯಾನರ್ ನಿಂದ ಬರ್ತಿರುವ ಮೂರನೆ ಸಿನಿಮಾ ಇದಾಗಿದೆ. ಈ ಮೊದಲು ಕವಲುದಾರಿ ಮತ್ತು ಮಯಾಬಜಾರ್ ಎರಡೂ ಸಿನಿಮಾಗಳು ಅಪ್ಪು ಬ್ಯಾನರ್ ನಿಂದ ತೆರೆಕಂಡಿವೆ. ವಿಭಿನ್ನ ಮತ್ತು ವಿನೂತನ ವಿಷಯಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ಪಿ ಆರ್ ಕೆ ಬ್ಯಾನರ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ. ಕವಲುದಾರಿ ಮತ್ತು ಮಯಾಬಜಾರ್ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿವೆ.

More from Filmibeat

English summary
Puneeth Rajkumar Production's Law release confusion among fans. This mocie to be released on OTT June 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X