For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಮಡದಿಗೆ ದುಬಾರಿ ಲ್ಯಾಂಬೋರ್ಗಿನಿ ಕಾರ್ ಗಿಫ್ಟ್ ಮಾಡಿದ ಪುನೀತ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ. ನಿನ್ನೆ ನೀಲಿ ಬಣ್ಣದ ಲ್ಯಾಂಬೋರ್ಗಿನಿಯನ್ನು ಕೊಂಡುಕೊಂಡ ಅಪ್ಪು ಪ್ರೀತಿಯ ಮಡದಿ ಅಶ್ವಿನಿ ಅವರಿಗೆ ಉಡುಗೊರೆಯಾಗಿ ನೀಡಿ ಮಹಿಳಾ ದಿನಾಚರಣೆಯ ಸರ್ಪ್ರೈಸ್ ಕೊಟ್ಟಿದ್ದಾರೆ.

  ಸುಮಾರು 5 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಕಾರು ಇದಾಗಿದೆ. ಅಪ್ಪು ಮನೆಗೆ ಆಗಮಿಸಿದ ಈ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಣ್ಣು ಕುಕ್ಕುವಂತಿದೆ. ರಾಜಕುಮಾರನ ಮನೆಗೆ ಲ್ಯಾಂಬೋರ್ಗಿನಿ ಎಂಟ್ರಿಯಾಗುತ್ತಿದ್ದಂತೆ, ಅಪ್ಪು ಹೊಸ ಕಾರನ್ನು ಏರಿ ಜಾಲಿ ರೈಡ್ ಮಾಡಿದ್ರು. ಇನ್ನು ಪುನೀತ್ ಅಭಿಮಾನಿಗಳು ಹೊಸ ಕಾರಿನ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

  'ನಟ ಸಾರ್ವಭೌಮ' ಸಕ್ಸಸ್ ಟೂರ್ : ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು'ನಟ ಸಾರ್ವಭೌಮ' ಸಕ್ಸಸ್ ಟೂರ್ : ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು

  ಒಂದೆಡೆ ಪುನೀತ್ ನಟನೆಯ 'ನಟಸಾರ್ವಭೌಮ' ಸೂಪರ್ ಹಿಟ್ ಆಗಿದೆ. ಇತ್ತ ಪುನೀತ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಒಟ್ನಲ್ಲಿ ಈ ವರ್ಷ ಡಬಲ್ ಖುಷಿಯಲ್ಲಿದ್ದಾರೆ ಪವರ್ ಸ್ಟಾರ್.

  ಅಂದಹಾಗೆ, ಪವರ್ ಸ್ಟಾರ್ ಪುನೀತ್ ಗೆ ಕಾರ್ ಕ್ರೇಜ್ ಬಾಲ್ಯದಿಂದನೂ ಇದೆ, ಅಪ್ಪು ಸಾಕಷ್ಟು ಐಶಾರಾಮಿ ಕಾರುಗಳ ಒಡೆಯನಾಗಿದ್ದಾರೆ. ಈಗಾಗಲೇ ಅವರ ಬಳಿ ಆಡಿ, ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳಿವೆ. ಅಷ್ಟೆಯಲ್ಲ ದುಬಾರಿ ಬೈಕ್ ಗಳು ಸಹ ಪುನೀತ್ ಬಳಿ ಇದೆ. ಈಗ ಲ್ಯಾಂಬೋರ್ಗಿನಿ ಸೇರ್ಪಡೆಯಾಗಿದೆ.

  'ನಟಸಾರ್ವಭೌಮ'ನ ಪಾಲಿಗೆ ನಿಜವಾದ ವಿಲನ್ ಆದ ತಮಿಳು ರಾಕರ್ಸ್'ನಟಸಾರ್ವಭೌಮ'ನ ಪಾಲಿಗೆ ನಿಜವಾದ ವಿಲನ್ ಆದ ತಮಿಳು ರಾಕರ್ಸ್

  ಇತ್ತೀಚಿಗೆಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಬಾರಿ ಲ್ಯಾಂಬೋರ್ಗಿನಿಯನ್ನು ಖರೀದಿ ಮಾಡಿದ್ರು. ಈಗ ಪವರ್ ಸ್ಟಾರ್ ಪುನೀತ್ ಲ್ಯಾಂಬೋರ್ಗಿನಿಯ ಒಡೆಯನಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಲ್ಯಾಂಬೋರ್ಗಿನಿ ಕಾರಿನ ಕ್ರೇಜ್ ಹೆಚ್ಚಾಗುತ್ತಿದೆ.

  English summary
  Kannada actor Puneeth Rajkumar purchased new Lamborghini blue color car yesterday. Puneeth has gifted Lamborghini Urus to his wife on women's day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X