For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್-ಡಿಂಪಲ್ ಕ್ವೀನ್ ರಚಿತಾದು ಕ್ಯೂಟ್ ಜೋಡಿ ಅಲ್ವಾ

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿರುವ 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ.

  ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಚಿತ್ರವನ್ನು ಮಾರ್ಚ್ 17 ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ.[ಪವರ್ ಸ್ಟಾರ್ ಅಪ್ಪು ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಉಡುಗೊರೆ]

  ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರದ ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದೀಗ ಚಿತ್ರದ ಹಾಡಿನ ಶೂಟಿಂಗ್ ನಲ್ಲಿ ತೆಗೆದ ಫೊಟೋ ಒಂದು ಲೀಕ್ ಆಗಿದ್ದು, ಚಿತ್ರದಲ್ಲಿ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಮತ್ತು ಅಪ್ಪು ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.['ರಾಜಕುಮಾರ'ನ ಜೊತೆ ಡ್ಯುಯೆಟ್ ಹಾಡೋ ರಾಣಿ ಯಾರು ಗೊತ್ತಾ?]

  ಸದ್ಯಕ್ಕೆ ಈ ಕ್ಯೂಟ್ ಜೋಡಿಗಳ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಲೈಕ್ ಗಳ ಸುರಿಮಳೆ ಸುರಿಸುತ್ತಿದ್ದಾರೆ. ಪಕ್ಕನೆ ಈ ಚಿತ್ರವನ್ನು ನೋಡುತ್ತಿದ್ದರೆ, ಪುನೀತ್ ಅವರು ರಚಿತಾ ಅವರಿಗೆ, ಅಲೆಲೆ...ಗುಳಿಕೆನ್ನೆ ಸುಂದರಿಯೇ..ನಿನ್ನ ಕೆನ್ನೆ ನಾನು ಮುಟ್ಟಲೇ..ಎಂದು ಹಾಡುತ್ತಿರುವಂತಿದೆ.

  ಅಂದಹಾಗೆ ಇವರಿಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಸಖತ್ತಾಗಿ ವರ್ಕೌಟ್ ಆಗಿದೆ ಎಂಬುದನ್ನು ಈ ಚಿತ್ರ ನೋಡುತ್ತಿದ್ದಂತೆ ಗೆಸ್ ಮಾಡಬಹುದು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ಅವರ ಗುಳಿಕೆನ್ನೆಯನ್ನು ಮುಟ್ಟಲು ಪವರ್ ಸ್ಟಾರ್ ಪ್ರಯತ್ನಿಸಿರುವುದು ತುಂಬಾ ಮುದ್ದು ಮುದ್ದಾಗಿ ಮೂಡಿಬಂದಿದೆ.[ಪೋರ್ಚುಗಲ್ ಗೆ ಹಾರಿದ ಪುನೀತ್-ರಚಿತಾ ರಾಮ್! ]

  ಅದೇನೇ ಇರಲಿ ದಕ್ಷಿಣ ಭಾರತದಿಂದ ಖ್ಯಾತ ತಾರೆಯರನ್ನು ಕರೆತಂದು ಈ ಚಿತ್ರಕ್ಕೆ ಹಾಡಿಸಿರುವ ಚಿತ್ರತಂಡ ಚಿತ್ರದ ಬಗ್ಗೆ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ. ಒಟ್ನಲ್ಲಿ ಅಭಿಮಾನಿಗಳು ಈ ಬಿಗ್ ಸಿನಿಮಾ ಬಿಡುಗಡೆಯಾಗುವುದನ್ನೇ ಕಾತರದಿಂದ ಕಾಯುತ್ತಿರುವುದಂತೂ ಸತ್ಯ.

  English summary
  Puneeth Rajkumar & Rachita Ram starring upcoming movie 'Chakravyuha' is getting more interesting with each passing day! The movie is directed by Tamil director M Saravanan is slated to release for Appu's birthday on March 17. A brand new cute picture of actors Puneeth & Rachita has been released and it has gone viral on the social networking sites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X