ವಿಕ್ರಮ..ರಣವಿಕ್ರಮ ಐಪಿಎಸ್ ಪವರ್ ಫುಲ್ ಸ್ಟಾರ್ಟ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು (ಮಾ.17) ಮೂವತ್ತೊಂಬ್ಬತ್ತನೇ ಹುಟ್ಟುಹಬ್ಬದ ಸಂಭ್ರಮ. ಇಂದು ಮುಂಜಾನೆ ಆರುಗಂಟೆಗೆ ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ್ದರು. ತಮ್ಮ ಪ್ರೀತಿಯ ಅಪ್ಪು ನಿರೀಕ್ಷೆಯಲ್ಲಿ ಕಾತುರದಿಂದ ಕಾದು ಕುಳಿತಿದ್ದರು.
ಕಂಠೀರವ ಸ್ಟುಡಿಯೋದಲ್ಲಿನ ಡಾ.ರಾಜ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಪುನೀತ್ ಬಳಿಕ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದರು. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಪುನೀತ್ ಅಭಿಮಾನಿಗಳು ಕೇಕ್, ಹಾಲು ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮಿಸಿದರು. [ಪುನೀತ್ ಇಂಟರೆಸ್ಟಿಂಗ್ ಸಂಗತಿಗಳು]
ಇದೇ ಸಂದರ್ಭದಲ್ಲಿ ಪುನೀತ್ ಅವರ ಮುಂದಿನ ಬಹುನಿರೀಕ್ಷಿತ ಮಹತ್ವಾಕಾಂಕ್ಷಿ ಚಿತ್ರ 'ಧೀರ ರಣ ವಿಕ್ರಮ' ಸೆಟ್ಟೇರಿತು. ಸಾಧಾರಣವಾಗಿ ಪುನೀತ್ ಚಿತ್ರಗಳಿಗೆ ಕ್ಲಾಪ್ ಮಾಡುತ್ತಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಈ ಬಾರಿ ಗೈರು ಹಾಜರಾಗಿದ್ದರು.

ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರಕ್ಕೆ ಚಾಲನೆ
ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ 'ಧೀರ ರಣ ವಿಕ್ರಮ' ಚಿತ್ರಕ್ಕೆ ಚಾಲನೆ ನೀಡಲಾಯಿತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಪವನ್ ಒಡೆಯರ್ ಮಾಡುತ್ತಿದ್ದಾರೆ.

ಖಾಕಿ ಖದರ್ ನಲ್ಲಿ ಮಿಂಚಿದ ಪುನೀತ್
ಇದೇ ಮೊದಲ ಬಾರಿಗೆ ಖಾಕಿ ಖದರ್ ನಲ್ಲಿ ಪುನೀತ್ ಮಿಂಚಲಿದ್ದಾರೆ. ಚಿತ್ರದ ಆರಂಭಿಕ ಶಾಟ್ ನಲ್ಲೇ ಅವರು ಖಾಕಿ ತೊಟ್ಟು ತಮ್ಮ ಪವರ್ ತೋರಿಸಿದ್ದಾರೆ. ಇದನ್ನು ಕಣ್ಣಾರೆ ಕಂಡ ಅಭಿಮಾನಿಗಳು ಥ್ರಿಲ್ ಆದರು.

ಪಾರ್ವತಮ್ಮ, ರಾಘಣ್ಣ ಇನ್ನಷ್ಟು ಮೆರುಗು
ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರಾಘವೇಂದ್ರ ರಾಜ್ ಕುಮಾರ್ ಅವರು ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡು ಇನ್ನಷ್ಟು ಮೆರುಗು ತಂದರು.

ವಿಕ್ರಮ.. ರಣವಿಕ್ರಮ ಐಪಿಎಸ್
ಪವರ್ ಸ್ಟಾರ್ 'ರಣ ವಿಕ್ರಮ' ಸಿನಿಮಾದಲ್ಲಿ ಪವರ್ ಫುಲ್ ಪೊಲೀಸ್ ಆಫೀಸರ್. ಸಿನಿಮಾದಲ್ಲಿ 'ವಿಕ್ರಮ.. ರಣವಿಕ್ರಮ ಐಪಿಎಸ್' ಅನ್ನೋ ಪವರ್ ಫುಲ್ ಡೈಲಾಗ್ ಹೊಡೆದ್ರೂ ಅಚ್ಚರಿಯಿಲ್ಲ.

ಪುನೀತ್ ಮೊದಲ ಬಾರಿಗೆ ಖಡಕ್ ಪೊಲೀಸ್ ಆಫೀಸರ್
ಇಲ್ಲಿಯವರೆಗೂ ಪವರ್ ಸ್ಟಾರ್ ಎಂತಹಾ ಪಾತ್ರಗಳನ್ನ ಮಾಡಿದ್ರೂ ಲೀಲಾಜಾಲವಾದ ಅಭಿನಯ ನೀಡಿರೋ ನಟ. ಆದ್ರೆ ಪುನೀತ್ ಮೊದಲ ಬಾರಿಗೆ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡ್ತಿದ್ದಾರೆ.

ರಣ ವಿಕ್ರಮ ತಾಂತ್ರಿಕ ಬಳಗ ಹೀಗಿದೆ
ರಣ ವಿಕ್ರಮ ಚಿತ್ರವನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ನಲ್ಲಿ ಜಯಣ್ಣ ಭೋಗೇಂದ್ರ ನಿರ್ಮಿಸುತ್ತಿದ್ದಾರೆ. ವೈದಿ ಎಸ್ ಅವರ ಛಾಯಾಗ್ರಹಣ, ಸಂಗೀತ ವಿ ಹರಿಕೃಷ್ಣ, ರವಿವರ್ಮ ಅವರ ಸ್ಟಂಟ್ಸ್, ಮುರಳಿ ಅವರ ನೃತ್ಯ ನಿರ್ದೇಶನ ಇದೆ.


Click it and Unblock the Notifications











