»   » 'ರಣವಿಕ್ರಮ' ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್

'ರಣವಿಕ್ರಮ' ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್

Posted By: ಜೀವನರಸಿಕ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಹಾಗೂ 2015ರ ಬಹುನಿರಿಕ್ಷಿತ ಸಿನಿಮಾ ಕೂಡ ಆಗಿರೋ ರಣವಿಕ್ರಮದ ಲುಕ್ ಒಂದನ್ನ ನಿರ್ದೇಶಕ ಪವನ್ ಒಡೆಯರ್ ಹರಿಯಬಿಟ್ಟಿದ್ದಾರೆ.

ಪುನೀತ್ ವಿಲನ್ ಗಳನ್ನ ಚೇಸ್ ಮಾಡೋ ಸೀನ್ ನಲ್ಲಿ ತೆಗೆದಿರೋ ಲುಕ್ ನಲ್ಲಿ ಪುನೀತ್ ಅಗ್ರೆಸ್ಸಿವ್ ನೆಸ್ ಎದ್ದು ಕಾಣ್ತಿದೆ. ಇಡೀ ಚಿತ್ರದಲ್ಲಿ ಪವರ್ ಸ್ಟಾರನ್ನ ಈ ಲುಕ್ ಅಷ್ಟೇ ಪವರ್ ಫುಲ್ಲಾಗಿ ತೋರಿಸೋಕೆ ನಿರ್ಧರಿಸಿದ್ದಾರೆ ಪವನ್ ಒಡೆಯರ್. [ಮೆಟ್ರೋ ರೈಲಿನಲ್ಲಿ ಪುನೀತ್ ರಾಜ್ 'ರಣವಿಕ್ರಮ']

Ranavikrama first look

ಪೊಲೀಸ್ ಪಾತ್ರದ ಜೊತೆಗೆ ಫ್ಯಾಮಿಲಿ ಹೀರೋ ಪುನೀತ್ ಸಿನಿಮಾ ಅಂದಮೇಲೆ ಅಲ್ಲೊಂದು ಪ್ಯೂರ್ ಲವ್, ಒಂಚೂರು ಸೆಂಟಿಮೆಂಟ್ ಇರಲೇಬೇಕು. ಅದೆಲ್ಲವನ್ನೂ ಕೊಂಚ ಕೊಂಚ ಬೆರೆಸಿರೋ ಪವನ್ ಒಡೆಯರ್ ಹದವಾದ ಪಾಕ ತಯಾರಿಸ್ತಿದ್ದಾರೆ.

ಅಂದಹಾಗೆ ಪವನ್ ಒಡೆಯರ್ 'ರಣವಿಕ್ರಮ' ಪಾಕ ರೆಡಿಯಾಗೋದು ಹೊಸ ವರ್ಷಕ್ಕೆ. ಪವರ್ ಸ್ಟಾರ್ ಗೆಲ್ಲಿಸಿ ಮತ್ತೊಂದು ಗೆಲುವು ಕೊಡೋಕೆ ಕಾದಿರೋ ಅಭಿಮಾನಿಗಳ ಮುಂದೆ ಪುನೀತ್ ಪೊಲೀಸ್ ಗೆಟಪ್ ನಲ್ಲಿ ಪುನೀತ್ ಹೊಸ ವರ್ಷದ ದಿನವೇ ಕಾಣಿಸಿಕೊಳ್ಳೋ ಲಕ್ಷಣ ಹೆಚ್ಚಾಗಿದೆ ಅಂತಿದೆ ಗಾಂಧಿನಗರ.

English summary
Power Star Puneeth Rajkumar upcoming movie 'Ranavikrama' first look is released by director Pawan Wodeyar. According to Pawan, Puneeth Rajkumar will be seen as a student and a cop in this film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada