»   » 'ರಾಜಕುಮಾರ' ನೋಡಿ ಮೆಚ್ಚಿದ ಅಭಿಮಾನಿ ದೇವ್ರುಗಳಿಗೆ 'ದೊಡ್ಮನೆ ಹುಡ್ಗ'ನ ಧನ್ಯವಾದ

'ರಾಜಕುಮಾರ' ನೋಡಿ ಮೆಚ್ಚಿದ ಅಭಿಮಾನಿ ದೇವ್ರುಗಳಿಗೆ 'ದೊಡ್ಮನೆ ಹುಡ್ಗ'ನ ಧನ್ಯವಾದ

Written By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ದೇಶಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು 'ರಾಜಕುಮಾರ'ನನ್ನ ಮೆಚ್ಚಿಕೊಂಡು, ಅಪ್ಪಿಕೊಂಡು ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಾರೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

'ರಾಜಕುಮಾರ' ಚಿತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ಕುಲಕೋಟಿ ಪ್ರೇಕ್ಷಕರು ಅಪ್ಪು ಅವರ ಅಭಿನಯ, ಡ್ಯಾನ್ಸ್, ಫೈಟ್ ಹೀಗೆ ಇಡೀ ಸಿನಿಮಾವನ್ನ ಹಾಡಿ ಹೊಗಳುತ್ತಿದ್ದಾರೆ. ಇಂತಹ ಸಂತಸದಲ್ಲಿದ್ದ ಪುನೀತ್ ರಾಜ್ ಕುಮಾರ್ ಅವರು ಕೂಡ 'ರಾಜಕುಮಾರ' ಚಿತ್ರದ ಯಶಸ್ಸಿನ ನಂತರ ತಮ್ಮ ಮನದಾಳದಲ್ಲಿದ್ದ ಮಾತುಗಳನ್ನ ಮಾಧ್ಯಮದವರು ಮುಂದೆ ಬಿಚ್ಚಿಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಏನ್ ಹೇಳಿದ್ರು ಅಂತ ಮುಂದೆ ಓದಿ......

ಹೆಸರಿಗೆ ತಕ್ಕ ಸಿನಿಮಾ!

''ಹೆಸರಿಗೆ ತಕ್ಕಂತೆ ನಾವು ಸಿನಿಮಾ ಮಾಡಿದ್ದೀವಿ ಅಂತ ನಮಗೆ ಅನಿಸುತ್ತಿದೆ. ಸಿನಿಮಾ ಈ ರೀತಿಯ ಯಶಸ್ಸಿಗೆ ನಮ್ಮ 'ರಾಜಕುಮಾರ' ಟೀಮ್ ತುಂಬ ಕಷ್ಟ ಪಟ್ಟಿದೆ. ನಾನೊಬ್ಬ ಪಾತ್ರಧಾರಿ ಅಷ್ಟೇ. ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಮತ್ತು ಟೆಕ್ನಿಶಿಯನ್ಸ್ ಗೆ ಧನ್ಯವಾದ ಹೇಳುತ್ತೇನೆ''.[ಓದುಗರ ವಿಮರ್ಶೆ: ಏನು ಇಲ್ಲದವರ ಪಾಲಿನ 'ರಾಜಕುಮಾರ'!]

ಅಭಿಮಾನಿಗಳಿಗೆ ಧನ್ಯವಾದ!

''ಸಿನಿಮಾ ಮೆಚ್ಚಿಕೊಂಡ ಮತ್ತು ನಾನು ನಂಬಿರುವಂತಹ ಅಭಿಮಾನಿಗಳಿಗೆ ಧನ್ಯವಾದಗಳು. ಎಷ್ಟೋ ಕಡೆ ತಡರಾತ್ರಿ, ಬೆಳಿಗ್ಗೆ 3 ಗಂಟೆ, 4 ಗಂಟೆಗೆ ಎಲ್ಲ ಶೋ ಶುರುವಾಗಿದೆ. ಈ ಪ್ರೀತಿ ವಿಶ್ವಾಸಕ್ಕೆ ಏನು ಹೇಳ್ಬೇಕು ಎನ್ನುವುದು ಗೊತ್ತಾಗುವುದಿಲ್ಲ. ಅದರ ಪ್ರತಿಫಲ ನಮಗೆ ಈ ಗೆಲವು ಅನ್ಸುತ್ತೆ.['ರಾಜಕುಮಾರ' ನೋಡುವುದಕ್ಕೂ ಮುಂಚೆ ಈ ಸಂಗತಿಗಳನ್ನ ತಿಳಿದುಕೊಳ್ಳಿ!]

ಅಣ್ಣಾವ್ರ ಛಾಯೆ ನನ್ನಲ್ಲಿ ಕಾಣುತ್ತಿದೆ ಅಂದ್ರೆ ಧನ್ಯವಾದಗಳು!

''ನಾನು 'ರಾಜ್ ಕುಮಾರ್' ಅವರ ಮಗನಾಗಿರುವುದ್ರಿಂದ ಕೆಲವೊಂದು ಕಡೆ ಅಣ್ಣಾವ್ರು ಛಾಯೆ ಕಾಣತ್ತೆ. ವ್ಯಕ್ತಿತ್ವ ಎನ್ನುವುದು ಎಲ್ಲಾದ್ರೂ ಕಂಡು ಬಂದರೆ ಅದು ಸಿನಿಮಾಗೋಸ್ಕರ ಮಾಡಿರೋದು. ಅದನ್ನ ನನ್ನಲ್ಲಿ ನೋಡುತ್ತಿದ್ದರಂದ್ರೆ ತುಂಬಾ ತುಂಬಾ ಧನ್ಯವಾದಗಳು''.

ರಾಜ್ ಕುಮಾರ್ ಗೆ ಅವರೇ ಸಾಟಿ!

''ನಾನು ಅಣ್ಣಾವ್ರಷ್ಟು ಒಳ್ಳೆಯವನಲ್ಲ. ರಾಜ್ ಕುಮಾರ್ ಅವರಿಗೆ ಅವರೇ ಸಾಟಿ. ಇದನ್ನ ಎಲ್ಲ ಕಡೆನೂ ಹೇಳುತ್ತಾ ಬರ್ತಿದ್ದೀನಿ. ಎಲ್ಲ ಅಭಿಮಾನಿಗಳಿಗೂ ನನ್ನ ಪ್ರೀತಿಯ ಧನ್ಯವಾದಗಳು.[ತೆರೆ ಹಿಂದಿನ 'ರಾಜಕುಮಾರ'ನಲ್ಲಿ ಕಾಣುತ್ತಾರೆ 'ಡಾ.ರಾಜ್ ಕುಮಾರ್'!]

English summary
Puneeth rajkumar Gives Reaction After Releasing Raajakumara Movie and get huge Response from Audience. Puneeth rajkumar Starrer Raajakumara Movie Released All over India on March 24th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada