ಶಿವಣ್ಣನ ನಂತರ 'ರಾಜಣ್ಣನ ಮಗ'ನಿಗೆ ಸಾಥ್ ನೀಡಿದ ಪುನೀತ್
ಶೀರ್ಷಿಕೆಯಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ರಾಜಣ್ಣನ ಮಗ ಚಿತ್ರಕ್ಕೆ ದೊಡ್ಮನೆ ಮಕ್ಕಳು ಸಾಥ್ ನೀಡ್ತಿದ್ದಾರೆ. ರಾಜಣ್ಣನ ಮಗ ಚಿತ್ರೀಕರಣ ಸ್ಥಳಕ್ಕೆ ಶಿವರಾಜ್ ಕುಮಾರ್ ಭೇಟಿ ನೀಡಿ, ಚಿತ್ರತಂಡಕ್ಕೆ ಶುಭಕೋರಿದ್ದರು.
ಇದೀಗ, ಪುನೀತ್ ರಾಜ್ ಕುಮಾರ್ ರಾಜಣ್ಣನ ಮಗನಿಗೆ ಜೊತೆಯಾಗಿದ್ದಾರೆ. ರಾಜಣ್ಣನ ಮಗ ಚಿತ್ರದ ಹಾಡೊಂದನ್ನ ಪವರ್ ಸ್ಟಾರ್ ಬಿಡುಗಡೆ ಮಾಡಿದ್ದಾರೆ.
ಅಪ್ಪನ ಕುರಿತು ಮೂಡಿಬಂದಿರುವ 'ಕೋಟಿ ಕೋಟಿ ಜನುಮ......' ಎಂಬ ಅದ್ಭುತ ಸಾಲುಗಳನ್ನ ಹೊಂದಿರುವ ಭಾವನಾತ್ಮಕ ಗೀತೆಯನ್ನ ಅಪ್ಪು ರಿಲೀಸ್ ಮಾಡಿದ್ದಾರೆ.

'ಚೌಕ' ಚಿತ್ರದ ಅಪ್ಪ 'ಐ ಲವ್ ಯೂ' ನಂತರ ಬಹುಶಃ ಈ ಹಾಡು ಪ್ರೇಕ್ಷಕರ ಮನಮುಟ್ಟಬಹುದು. ಅಷ್ಟರ ಮಟ್ಟಿಗೆ ಚೆನ್ನಾಗಿದೆ. ಅಂದ್ಹಾಗೆ, ಈ ಹಾಡನ್ನ ಬರೆದಿರುವುದು ಕೆ ಕಲ್ಯಾಣ್. ರವಿಬಸ್ರೂರು ಅವರ ಸಂಗೀತವಿದ್ದು, ವಿಜಯ ಪ್ರಕಾಶ್ ಕಂಠದಲ್ಲಿ ಮೂಡಿಬಂದಿರುವುದು ಹಾಡಿಗೆ ಮತ್ತಷ್ಟ ಜೀವ ಬಂದಿದೆ.
ಇನ್ನುಳಿದಂತೆ ರಾಜಣ್ಣನ ಮಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಹಿಂದಿಯಲ್ಲಿ 1 ಕೋಟಿಗೆ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಕೋಲಾರ್ ಸೀನು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಹರೀಶ್ ಜಲಗೆರೆ ನಾಯಕನಾಗಿ ಅಭಿನಯಿಸಿದ್ದಾರೆ. ಹರೀಶ್ ಗೆ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ.


Click it and Unblock the Notifications