ದುನಿಯಾ ವಿಜಯ್ ಮತ್ತು ಪುನೀತ್ ಸೇರಿ ಕೊಟ್ಟ ಸರ್ಪ್ರೈಸ್ ಏನು ಗೊತ್ತಾ?
Recommended Video
ದುನಿಯಾ ವಿಜಯ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಭೇಟಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿತ್ತು. ಇವರಿಬ್ಬರ ಭೇಟಿ ನೋಡಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು.
ದುನಿಯಾ ವಿಜಯ್ ಅವರ ಚಿತ್ರದಲ್ಲಿ ಅಪ್ಪು ಏನಾದರೂ ನಟಿಸುತ್ತಿದ್ದಾರಾ ಅಥವಾ ಹಾಡು ಏನಾದರೂ ಹಾಡುತ್ತಿರಬಹುದು ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಆದರೆ, ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡಿದರು, ಸರ್ಪ್ರೈಸ್ ನೀಡಿ ಸಮಾಧಾನ ಪಡಿಸಿದರು. ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರದ ಹೊಸ ಪೋಸ್ಟರನ್ನ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ.
ಇಷ್ಟು ದಿನ 'ಸಲಗ' ಮೇಕಿಂಗ್ ಪೋಸ್ಟರ್ ಗಳಿಂದ ಭಾರಿ ಸದ್ದು ಮಾಡಿದೆ. ಈಗ ಅಧಿಕೃತವಾಗಿ ಸಲಗ ಚಿತ್ರದ ಲುಕ್ ಬಹಿರಂಗವಾಗಿದೆ. ದುನಿಯಾ ವಿಜಯ್ ಕೈಯಲ್ಲಿ ಲಾಂಗ್ ಹಿಡಿದು ಕೂತಿರುವ ಫೋಟೋ ಗೆಟಪ್ ರಗಡ್ ಆಗಿದೆ.
ಕೆಪಿ ಶ್ರೀಕಾಂತ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ದುನಿಯಾ ವಿಜಯ್ ನಟಿಸುತ್ತಿದ್ದು, ಧನಂಜಯ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ನಾಯಕಿಯಾಗಿ ಬಣ್ಣ ಹಚ್ಚಿಸಿದ್ದಾರೆ.


Click it and Unblock the Notifications











