ಚಿಕ್ಕಪ್ಪನ ಜೊತೆಗೆ ವಿನಯ್, ಯುವ ಭರ್ಜರಿ ವರ್ಕೌಟ್; ಇಲ್ಲಿದೆ ನೋಡಿ ಅಪರೂಪದ ವಿಡಿಯೋ

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ದೂರಾಗಿ 4 ವರ್ಷ ಕಳೆದಿದೆ. ಅಭಿಮಾನಿಗಳು ಇಂದಿಗೂ ಅಪ್ಪು ನೆನಪಿನಲ್ಲೇ ದಿನಗಳನ್ನೂ ದೂಡುತ್ತಿದ್ದಾರೆ. ಪುಣ್ಯಸ್ಮರಣೆಯಂದು ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ದೊಡ್ಮನೆ ಸದಸ್ಯರು ಅಪ್ಪು ಸಮಾಧಿಗೆ ತೆರೆಳಿ ಪೂಜೆ ಸಲ್ಲಿಸಿದ್ದಾರೆ.

ಚಿಕ್ಕಪ್ಪನ ನೆನಪಿನಲ್ಲಿ ಯುವ ರಾಜ್‌ಕುಮಾರ್ ಹಾಗೂ ವಿಜಯ್ ರಾಜ್‌ಕುಮಾರ್ ಸ್ಪೆಷಲ್ ವೀಡಿಯೋ ಹಂಚಿಕೊಂಡಿದ್ದಾರೆ. ಮೂವರು ಸೇರಿ ಮನೆ ಮೇಲೆ ಟೆರೆಸ್‌ನಲ್ಲಿ ವರ್ಕೌಟ್ ಮಾಡಿರುವುದನ್ನು ನೋಡಬಹುದು. ಪುನೀತ್ ಫಿಟ್‌ನೆಸ್ ಫ್ರೀಕ್ ಆಗಿದ್ದರು. ಸಿನಿಮಾ ಇರಲಿ ಇಲ್ಲದೇ ಇರಲಿ ಸದಾ ಕಸರತ್ತು ಮಾಡಿ ದೇಹ ದಂಡಿಸುತ್ತಿದ್ದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ವರ್ಕೌಟ್ ಮಾಡಿದ ವೀಡಿಯೋಗಳನ್ನು ಹಂಚಿಕೊಂಡು ವ್ಯಾಯಾಮ ಮಾಡಲು ಎಲ್ಲರನ್ನು ಹುರಿದುಂಬಿಸುತ್ತಿದ್ದರು.

Puneeth Rajkumar Remembered with Emotional Workout Video Shared by Yuva and Vinay

ಓವರ್ ಹೆಡ್ ಬರ್ಪಿ, ಸೂಪರ್ ಮ್ಯಾನ್ ಬರ್ಪಿ, ಜಂಪಿಂಗ್ ಟೋ ಟಚಿಂಗ್ ಬರ್ಪಿಯ ಕರಾತಮತ್ತು ತೋರಿಸುವ ಅಪ್ಪು ವರ್ಕೌಟ್ ವೀಡಿಯೋಗಳು ಸಖತ್ ವೈರಲ್ ಆಗಿದ್ದು ಗೊತ್ತೇಯಿದೆ. ಹೃದಯಾಘಾತವಾದ ದಿನ ಕೂಡ ಪಾರ್ಕ್‌ನಲ್ಲಿ ವಾಕಿಂಗ್ ಮಾಡಿ ಬಂದಿದ್ದರು. ಸದ್ಯ ವಿನಯ್, ಯುವ ಹಂಚಿಕೊಂಡಿರುವ ವೀಡಿಯೋದಲ್ಲಿ ಯಾವುದೇ ವ್ಯಾಮಾಮದ ಸಲಕರಣೆಗಳಿಲ್ಲದೇ ಮೂವರು ಕಸರತ್ತು ಮಾಡಿರುವುದನ್ನು ನೋಡಬಹುದು.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಹೀಗೆ ಮೂವರು ವರ್ಕ್‌ಔಟ್ ಮಾಡಿರುವಂತೆ ಕಾಣ್ತಿದೆ. ಅಪ್ಪು ಮಾತನಾಡಿ "ಎಲ್ಲರೂ ಮನೆಯಲ್ಲೇ ಕೂತಿದ್ದೀವಿ. ಊಟ ಮಾಡ್ತಿರ್ತೀವಿ. ಬೇರೆ ಏನೂ ಕೆಲಸಗಳಿಲ್ಲ. ಹಾಗಾಗಿ ಒಂದು ಮ್ಯಾಟ್ ಅಥವಾ ಜಮಕಾನ ಇದ್ದರೂ ವಾರ್ಮ್‌ಅಪ್ ವ್ಯಾಯಾಮ ಮಾಡೋಣ. ನನ್ನೊಟ್ಟಿಗೆ ಯುವ, ವಿನಯ್ ಜೊತೆಗೂ ವರ್ಕೌಟ್ ಮಾಡ್ತೀನಿ" ಎಂದು ಹೇಳಿ ವ್ಯಾಯಾಮ ಮಾಡಲು ಆರಂಭಿಸಿದ್ದಾರೆ.

ಆರಂಭದಲ್ಲಿ ಜಂಪ್ ಮಾಡುವ ಮೂಲಕ ಮೂವರು ವಾರ್ಮ್‌ಅಪ್ ಶುರು ಮಾಡಿದ್ದಾರೆ. ಬಳಿಕ ಸ್ಪಾಟ್ ಜಾಗಿಂಗ್, ನಂತರ ಪುಶ್‌ಅಪ್ಸ್ ಸೇರಿ ಒಂದಷ್ಟು ವ್ಯಾಯಾಮ ಮಾಡಿ ಕೂತು ಸುಧಾರಿಸಿಕೊಂಡಿದ್ದಾರೆ. ಕೊನೆಯಲ್ಲಿ ಒಂದೆರಡು ನಿಮಿಷ ಧ್ಯಾನ ಮಾಡಿದರೆ ಉತ್ತಮ ಎಂದು ಪುನೀತ್ ಹೇಳಿದ್ದಾರೆ. ಎಲ್ಲರೂ ಫಿಟ್ ಆಗಿರಿ ಎಂದು ಮೂವರು ಸಲಹೆ ನೀಡಿದ್ದರು.

ಈ ವೀಡಿಯೋ ಹಂಚಿಕೊಂಡು "ಮರೆತರ ಮರೆಯಲಾಗದ ನೆನಪು .. ತಿಳಿದರೂ ತಿಳಿಯಲಾಗದ ಒಗಟು .. ಹೃದಯಕ್ಕೆ ತಿಳಿಯದ ನೋವು .. ಬರೆದರು ಮುಗಿಸಲಾಗದ ಕವಿತೆ" ಎನ್ನುವ ನಾಗು ಮಹಾರಾಜ್ ಎಂಬುವವರ ಸಾಲುಗಳನ್ನು ಯುವ, ವಿನಯ್ ಕ್ಯಾಪ್ಷನ್ ಆಗಿ ಹಾಕಿದ್ದಾರೆ. ಚಿಕ್ಕಂದಿನಲ್ಲೇ ಚಿತ್ರರಂಗಕ್ಕೆ ಬಂದಿದ್ದ ಅಪ್ಪು 'ಪರಶುರಾಮ್' ಚಿತ್ರದ ಬಳಿಕ ನಟನೆಯಿಂದ ದೂರ ಉಳಿದಿದ್ದರು.

'ಅಪ್ಪು' ಚಿತ್ರದಲ್ಲಿ ನಟಿಸುವ ಮುನ್ನ ಕೊಂಚ ತೂಕ ಹೆಚ್ಚಾಗಿ ದಪ್ಪ ಆಗಿದ್ದರು. ಚಿತ್ರರಂಗಕ್ಕೆ ಬರಬೇಕು ಎಂದು ನಿರ್ಧರಿಸಿದ ಬಳಿಕ ವ್ಯಾಯಾಮ, ಡಯೆಟ್ ಮಾಡಿ ತೂಕ ಇಳಿಸಿದ್ದರು. ಅಪ್ಪು ವೆಂಕಟೇಶ್ ಮಾರ್ಗದರ್ಶನದಲ್ಲಿ ಫಿಟ್ ಅಂಡ್ ಫೈನ್ ಆಗಿದ್ದರು. ಬಳಿಕ ಅದನ್ನು ಮುಂದುವರೆಸುತ್ತಾ ಬಂದಿದ್ದರು. ಭೋಜನ ಪ್ರಿಯರಾಗಿದ್ದ ಪುನೀತ್ ಕೆಲವೊಮ್ಮೆ ಇಷ್ಟಪಟ್ಟಿದ್ದನ್ನು ತಿಂದು ಬಳಿಕ ವ್ಯಾಯಾಮ ಮಾಡಿ ಅದನ್ನು ಕರಗಿಸುತ್ತಿದ್ದರು.

'ಅಣ್ಣಾಬಾಂಡ್' ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಕೂಡ ಮಾಡಿದ್ದರು. ಅಷ್ಟರಮಟ್ಟಿಗೆ ಫಿಟ್‌ನೆಟ್ ಬಗ್ಗೆ ಗಮನ ಹರಿಸುತ್ತಿದ್ದರು. ಇದೇ ಕಾರಣಕ್ಕೆ ಕೆಲವೊಮ್ಮೆ ಕಷ್ಟಪಟ್ಟು ಬಾಯಿ ಕಟ್ಟುತ್ತಿದ್ದರು. ತಮ್ಮ ಸಿನಿಮಾ, ಆದರ್ಶ ವ್ಯಕ್ತಿತ್ವದಿಂದ ಮಾತ್ರವಲ್ಲದೇ ತಮ್ಮ ಫಿಟ್‌ನೆಸ್ ಮೂಲಕ ಕೂಡ ಅಪ್ಪು ಎಲ್ಲರಿಗೂ ಮಾದರಿಯಾಗಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X