twitter
    For Quick Alerts
    ALLOW NOTIFICATIONS  
    For Daily Alerts

    ಗಂಧದ ಗುಡಿ: ಅಮೋಘ ವರ್ಷ ಬಳಿ ಪುನೀತ್ ಮಾಡಿಕೊಂಡಿದ್ದರು ಒಂದು ಮನವಿ

    |

    ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಟ್ರಾವೆಲ್ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಟ್ರೇಲರ್ ಬಹುವಾಗಿ ಗಮನ ಸೆಳಯುತ್ತಿದೆ. ಪುನೀತ್ ಹಾಗೂ ಅಮೋಘ ವರ್ಷನ ಶ್ರಮ ಟ್ರೇಲರ್‌ನಲ್ಲಿ ಕಾಣುತ್ತಿದೆ.

    ಟ್ರೇಲರ್ ಬಿಡುಗಡೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅಮೋಘ ವರ್ಷ 'ಗಂಧದ ಗುಡಿ' ಪ್ರಾಜೆಕ್ಟ್‌ ಬಗ್ಗೆ, ಅದರ ಚಿತ್ರೀಕರಣದ ಬಗ್ಗೆ ಹಾಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ''ಗಂಧದ ಗುಡಿ' ಬಗ್ಗೆ ಪುನೀತ್‌ಗೆ ಅಪಾರ ನಿರೀಕ್ಷೆ ಇತ್ತು. ಇದನ್ನು ಚೆನ್ನಾಗಿ ಮಾಡಬೇಕು ಎಂಬುದರ ಜೊತೆಗೆ ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವೂ ಇತ್ತು. 'ಗಂಧದ ಗುಡಿ' ಸ್ನೇಹಿತರಿಬ್ಬರು ತಮಗೆ ಇಷ್ಟವಾದ ಕಾರ್ಯವನ್ನು ಮಾಡಲು ಒಟ್ಟಿಗೆ ಹೊರಟಂತೆ ಇತ್ತು. ಅವರಿಗೆ ಪ್ರವಾಸ, ತಿಂಡಿ ಊಟ, ಜನಗಳ ಜೊತೆ ಬೆರೆಯುವುದು ಇಷ್ಟ. ನನಗೂ ಅದೇ ಇಷ್ಟ. ಹಾಗಾಗಿ ಇಬ್ಬರೂ ಟ್ರಾವೆಲ್ ಡಾಕ್ಯುಮೆಂಟರಿ ಮಾಡಿದೆವು'' ಎಂದಿದ್ದಾರೆ ಅಮೋಘ ವರ್ಷ.

    ಒಂದು ವರ್ಷಗಳ ಕಾಲ ಚಿತ್ರೀಕರಣ

    ಒಂದು ವರ್ಷಗಳ ಕಾಲ ಚಿತ್ರೀಕರಣ

    'ಗಂಧದ ಗುಡಿ'ಯನ್ನು ಒಂದು ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿದೆ. 'ಗಂಧದ ಗುಡಿ' ಚಿತ್ರೀಕರಣಕ್ಕಾಗಿ ರಾಜ್ಯದ ಬಹುತೇಕ ಎಲ್ಲ ಭಾಗಗಳಿಗೆ ಪುನೀತ್, ಅಮೋಘ ವರ್ಷ ಹಾಗೂ ಇಡೀಯ ಚಿತ್ರತಂಡ ಪ್ರವಾಸ ಮಾಡಿದೆ. ಸಮುದ್ರದ ಆಳದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಕ್ಯಾಮೆರಾ ಇಲ್ಲದೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಪುನೀತ್ ಇಲ್ಲಿ ತಾವು ತಾವಾಗಿದ್ದಾರೆ.

    ಮನವಿ ಮಾಡಿಕೊಂಡಿದ್ದರು ಪುನೀತ್ ರಾಜ್‌ಕುಮಾರ್

    ಮನವಿ ಮಾಡಿಕೊಂಡಿದ್ದರು ಪುನೀತ್ ರಾಜ್‌ಕುಮಾರ್

    ಪುನೀತ್ ಬಗ್ಗೆ ಮಾತನಾಡಿದ ಅಮೋಘ ವರ್ಷ, ''ನಾವು ಈ ಪ್ರಾಜೆಕ್ಟ್‌ನ ಟೈಟಲ್ ಕಾರ್ಡ ಅನ್ನು ಪುನೀತ್‌ಗೆ ಕಳಿಸಿಕೊಟ್ಟಾಗ. ಅವರು ಮರಳಿ ಕರೆ ಮಾಡಿ, ನನ್ನದೊಂದು ಸಣ್ಣ ಮನವಿ ಇದೆ. ಈ ಟೈಟಲ್‌ ಕಾರ್ಡ್‌ನಲ್ಲಿ ನನ್ನ ಹೆಸರಿನ ಪಕ್ಕ ಇರುವ 'ಪವರ್‌ ಸ್ಟಾರ್' ಅನ್ನು ತೆಗೆದು ಬಿಡಿ ಎಂದು ಕೇಳಿದರು. 'ಗಂಧದ ಗುಡಿ'ಯಲ್ಲಿ ನಾನು ನಾನಾಗಿ ಅಷ್ಟೆ ಇದ್ದೇನೆ. ಇಲ್ಲಿ ನಾನು ಹೀರೋ ಅಲ್ಲ. ಹಾಗಾಗಿ ಪವರ್‌ ಸ್ಟಾರ್ ಬೇಡ ಎಂದು ಮನವಿ ಮಾಡಿದರು. ಅದು ಅವರ ಸರಳತೆಗೆ ಸಾಕ್ಷಿ'' ಎಂದರು.

    ''ನನ್ನಂಥಹಾ ಸಾಮಾನ್ಯನೊಂದಿಗೆ ಒಂದು ವರ್ಷ ಕಳೆದರು''

    ''ನನ್ನಂಥಹಾ ಸಾಮಾನ್ಯನೊಂದಿಗೆ ಒಂದು ವರ್ಷ ಕಳೆದರು''

    ''ಎಲ್ಲೋ ಇದ್ದ ನನ್ನನ್ನು ಕರೆಸಿ ನನ್ನೊಂದಿಗೆ ಚರ್ಚೆ ಮಾಡಿ ಹೀಗೆ ಮಾಡೋಣ ಎಂದು ಹುರಿದುಂಬಿಸಿ, ನನ್ನೊಂದಿಗೆ ಒಂದು ವರ್ಷ ಸಮಯವನ್ನು ಪುನೀತ್ ಕಳೆದರು. ಅವರ ಸರಳೆತೆಗೆ ಏನೆನ್ನಬೇಕೋ ಕಾಣೆ. ಅವರೊಂದಿಗೆ ಒಂದು ಚಿತ್ರಕ್ಕೆ ಜನ ವರ್ಷಗಟ್ಟಲೆ ಕಾಯುತ್ತಾರೆ. ಆದರೆ ನನ್ನಂಥಹಾ ಸಾಮಾನ್ಯನೊಂದಿಗೆ ಪುನೀತ್ ಒಂದು ವರ್ಷ ಕಳೆದರು. ಅವರೊಂದಿಗೆ ಒಂದು ವರ್ಷದಲ್ಲಿ ತಾನೊಬ್ಬ ಸ್ಟಾರ್ ಎಂಬುದನ್ನು ಅವರು ಒಂದು ದಿನವೂ ತೋರ್ಗೊಡಲಿಲ್ಲ. ನೆಲದಲ್ಲಿ ಕುಳಿತ ಊಟ ಮಾಡುವವರು, ಟೆಂಟ್‌ ನಲ್ಲಿ ಬೇಕಾದರೂ ಮಲಗುತ್ತಿದ್ದರು'' ಎಂದರು ಅಮೋಘ ವರ್ಷ.

    ''ಹಲವು ಸಂದೇಶ, ಭಾವುಕ ಅಂಶಗಳು ಸಿನಿಮಾದಲ್ಲಿವೆ''

    ''ಹಲವು ಸಂದೇಶ, ಭಾವುಕ ಅಂಶಗಳು ಸಿನಿಮಾದಲ್ಲಿವೆ''

    'ಗಂಧದ ಗುಡಿ' ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ಅಮೋಘ ವರ್ಷ, ''ಪ್ರಾಜೆಕ್ಟ್‌ನ ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನೂ ನಡೆಯುತ್ತಿದೆ ಹಾಗಾಗಿ ಈಗಲೇ ಸಿನಿಮಾದ ಅವಧಿ ಎಷ್ಟು ಎಂಬುದನ್ನೆಲ್ಲ ಹೇಳಲು ಸಾಧ್ಯವಿಲ್ಲ. ಆದರೆ ಈ ಸಿನಿಮಾವನ್ನು ಬಹಳ ಭಿನ್ನವಾಗಿ ನಾವು ಮಾಡಿದ್ದೇವೆ. ಸಿನಿಮಾದಲ್ಲಿ ಹಲವು ಕತೆಗಳಿವೆ, ಹಲವು ಸಂದೇಶಗಳಿವೆ, ಹಲವು ಭಾವುಕ ಸನ್ನಿವೇಶಗಳಿವೆ, ಹಾಡುಗಳು ಸಹ ಇವೆ. ಸಿನಿಮಾವನ್ನು ನಾಡಿನ ಶಾಲೆ ಮಕ್ಕಳಿಂದ ಹಿಡಿದು ಎಲ್ಲರೂ ನೋಡಬೇಕು ಹಾಗೆ ತಯಾರು ಮಾಡುತ್ತಿದ್ದೇವೆ. ಸಿನಿಮಾ ಹೀಗೆಯೇ ಇರುತ್ತದೆ ಎಂದು ನಾನು ಈಗಲೇ ಹೇಳಲಾಗುವುದಿಲ್ಲ'' ಎಂದರು ಅಮೋಘವರ್ಷ.

    English summary
    Puneeth Rajkumar requested Amogha Varsha to remove power star tile from Gandhada Gudi title card.
    Monday, December 6, 2021, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X