ವೇದ ಕೃಷ್ಣಮೂರ್ತಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಪುನೀತ್
ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾದ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದರು. ಮೊದಲ ದಿನವೇ ಸಿನಿಮಾವನ್ನು ನೋಡಿದ ಅವರು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಇದೀಗ ವೇದ ಟ್ವೀಟ್ ಗೆ ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ''ನಟ ಸಾರ್ವಭೌಮ' ಸಿನಿಮಾವನ್ನು ನೋಡಿದ್ದಕ್ಕೆ ಧನ್ಯವಾದ. ನೀವು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದು, ನಮಗೆ ತುಂಬ ಖುಷಿಯಾಯ್ತು'' ಎಂದು ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ದಿನವೇ ಸಿನಿಮಾವನ್ನು ನೋಡಿದ್ದ ವೇದ ''ಇದು ಅದ್ಬುತ ಸಿನಿಮಾ. ಎಲ್ಲರೂ ನೋಡಲೇಬೇಕಾದ ಸಿನಿಮಾ. ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟ ಆಯ್ತು. ಆಲ್ ದಿ ಬೆಸ್ಟ್ ಸರ್. ಈ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯುವ ಹಾಗೆ ಆಗಲಿ'' ಎಂದು ಟ್ವೀಟಗ ಮೂಲಕ ಹಾರೈಸಿದ್ದಾರೆ.
ವೇದ ಕೃಷ್ಣಮೂರ್ತಿ ಸಿನಿಮಾ ನೋಡುತ್ತಿರುವ ವಿಷಯವನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದರು.
ಹೇಗಿದೆ 'ನಟ ಸಾರ್ವಭೌಮ' ಸಿನಿಮಾ ?
ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'.


Click it and Unblock the Notifications











