ಶಿವಣ್ಣನ 123ನೇ ಸಿನಿಮಾದ ಹೆಸರು ಅನಾವರಣಗೊಳಿಸಿದ ಪುನೀತ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸುತ್ತಿರುವ 123ನೇ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹೋದರ ಅಭಿನಯಿಸಿರುವ ಚಿತ್ರದ ಹೆಸರು ರಿಲೀಸ್ ಮಾಡಿದ್ದು, ಚಿತ್ರಕ್ಕೆ 'ಬೈರಾಗಿ' ಎಂದು ಹೆಸರಿಡಲಾಗಿದೆ.
ಜುಲೈ 12ಕ್ಕೆ ಕರುನಾಡ ಚಿತ್ರವರ್ತಿಯ ಹುಟ್ಟುಹಬ್ಬದ ಹಿನ್ನೆಲೆ ಶಿವಣ್ಣನ ಸಿನಿಮಾ ಶೀರ್ಷಿಕೆ ಬಿಡುಗಡೆಗೊಳಿಸಲಾಗಿದೆ. ಟೈಟಲ್ ಜೊತೆಗೆ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಹ್ಯಾಟ್ರಿಕ್ ಹೀರೋ ಫ್ಯಾನ್ಸ್ ಖುಷ್ ಆಗಿದ್ದಾರೆ.
ಇನ್ನುಳಿದಂತೆ ಈ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶನ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಬ್ರೇಕ್ ತೆಗೆದುಕೊಂಡಿದ್ದ ಚಿತ್ರತಂಡ ಮತ್ತೆ ಶೂಟಿಂಗ್ ಶುರು ಮಾಡಿದೆ.

ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ನಿರ್ದೇಶಕ ಈಗ ಕೊನೆಯ ಹಂತದ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಕೆಲವು ಆಕ್ಷನ್ ದೃಶ್ಯಗಳು ಹಾಗೂ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಇದು ಕೊನೆಯ ಶೆಡ್ಯೂಲ್ ಎಂದು ಸ್ವತಃ ವಿಜಯ್ ಮಿಲ್ಟನ್ ಹೇಳಿದ್ದರು.
ಶಿವರಾಜ್ ಕುಮಾರ್, ಡಾಲಿ ಧನಂಜಯ್ ಜೊತೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೃಷ್ಣ ಸಮರ್ಥ್ ಬಂಡವಾಳ ಹಾಕಿದ್ದಾರೆ. ಅನೂಪ್ ಸೀಳಿನ್ ಸಂಗೀತ ಒಳಗೊಂಡಿದೆ.


Click it and Unblock the Notifications











