»   » 'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವೇನು?

'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವೇನು?

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾದ ಟೈಟಲ್ ಲಾಂಚ್ ಆಗಿತ್ತು. ಪೋಸ್ಟರ್ ಗಳಲ್ಲಿ ಥೇಟ್ 'ಕಸ್ತೂರಿ ನಿವಾಸ' ಚಿತ್ರದಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಕಾಣಿಸಿಕೊಂಡಂತೆ ಕಪ್ಪು ಬಣ್ಣದ ಸೂಟ್ ತೊಟ್ಟು, ಹೆಗಲ ಮೇಲೆ ಪರಿವಾಳ ಕೂರಿಸಿಕೊಂಡು, ಅಪ್ಪು ಪೋಸ್ ಕೊಟ್ಟಿದ್ದರು.

'ರಾಜಕುಮಾರ' ಚಿತ್ರದ ಈ ಪೋಸ್ಟರ್ ಗಳನ್ನ ನೋಡಿ, ಸಿನಿಮಾದಲ್ಲಿ 'ಕಸ್ತೂರಿ ನಿವಾಸ' ಕಂಪು ಇರಬಹುದು ಅಂತ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆ ಲೆಕ್ಕಾಚಾರ ಈಗ ನಿಜವಾಗಿದೆ. 'ರಾಜಕುಮಾರ' ಚಿತ್ರದಲ್ಲಿ ಅಪ್ಪು ಪಾತ್ರ ಬಹಿರಂಗವಾಗಿದೆ. [ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಪ್ರೀತಿಯ ಕಾಣಿಕೆ]

puneeth rajkumar

'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮೌಲ್ಯಗಳಿಗೆ ಬೆಲೆ ಕೊಡುವ ವ್ಯಕ್ತಿ. ತುಂಬಾ ಮೆಚ್ಯೂರ್ಡ್ ಪಾತ್ರ ಇದಾಗಿದ್ದು, ಅವರ ಉದಾರ ಮನೋಭಾವದಿಂದ ಎಲ್ಲರಿಂದಲೂ 'ರಾಜಕುಮಾರ' ಅಂತ ಕರೆಯಿಸಿಕೊಳ್ಳುತ್ತಾರಂತೆ.

'ಕಸ್ತೂರಿ ನಿವಾಸ' ಚಿತ್ರದ ಶೇಡ್ ಗಳು ಈ ಸಿನಿಮಾದಲ್ಲಿ ಅಲ್ಲಲ್ಲಿ ಕಾಣಬಹುದು. ಅಷ್ಟುಬಿಟ್ಟರೆ 'ಕಸ್ತೂರಿ ನಿವಾಸ'ಕ್ಕೂ 'ರಾಜಕುಮಾರ'ಗೂ ಸಂಬಂಧ ಇಲ್ಲ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ 'ನಾಗರಹಾವು' ಸಿನಿಮಾದ 'ರಾಮಾಚಾರಿ' ಫ್ಯಾನ್ ಆಗಿ ಯಶ್ ಅಭಿನಯಿಸಿದ್ದರು. [ಕಸ್ತೂರಿ ನಿವಾಸ ಗೆಟಪ್ ನಲ್ಲಿ ಪುನೀತ್ 'ರಾಜಕುಮಾರ']

puneeth rajkumar

ಇದೇ ಫಾರ್ಮುಲಾ 'ರಾಜಕುಮಾರ' ಚಿತ್ರದಲ್ಲೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅನುಸರಿಸಿರುವಂತೆ ಭಾಸವಾಗುತ್ತೆ. ಆದ್ರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಶುರುವಾಗುವ ಮೊದಲೇ 'ರಾಜಕುಮಾರ' ಕಥೆ ರೆಡಿಮಾಡಿದ್ದರಂತೆ ನಿರ್ದೇಶಕರು.

'ರಾಜಕುಮಾರ' ಒನ್ ಲೈನ್ ಸ್ಟೋರಿ ಕೇಳಿ ಅಪ್ಪು ಹಿಂದುಮುಂದು ನೋಡದೆ ಒಪ್ಪಿಕೊಂಡಿದ್ದಾರೆ. ಈಗ ಚಿತ್ರಕಥೆಯನ್ನ ತಿದ್ದಿ-ತೀಡುವ ಕೆಲಸದಲ್ಲಿ ಸಂತೋಷ್ ಆನಂದ್ ರಾಮ್ ತೊಡಗಿದ್ದಾರೆ. ಆಕ್ಟೋಬರ್ ನಲ್ಲಿ ಶೂಟಿಂಗ್ ಶುರುವಾಗಲಿದೆ. (ಏಜೆನ್ಸೀಸ್)

English summary
Power Star Puneeth Rajkumar's role in 'Rajakumara' is revealed. According to the latest reports, Puneeth Rajkumar character would resemble Dr.Rajkumar's role in 'Kasthuri Nivasa'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada