For Quick Alerts
  ALLOW NOTIFICATIONS  
  For Daily Alerts

  ಪ್ರತಿಷ್ಠಾಪನೆಯಾಗಲಿದೆ 21 ಅಡಿಯ ಬೃಹತ್ 'ಅಪ್ಪು' ಪ್ರತಿಮೆ!; ಯಾವ ನಗರದಲ್ಲಿ? ಇಲ್ಲಿದೆ ಮಾಹಿತಿ

  |

  ಪುನೀತ್ ರಾಜ್ ಕುಮಾರ್ ಅಗಲಿಕೆಯ ನಂತರ ಅವರ ಅಭಿಮಾನಿಗಳು ಅವರನ್ನು ನಾನಾ ರೀತಿಯ ಒಳ್ಳೆಯ ಕೆಲಸಗಳ ಮೂಲಕ ತಮ್ಮ ನಡುವೆಯೇ ಜೀವಂತವಾಗಿರಿಸಿಕೊಂಡಿದ್ದಾರೆ.

  ಈಗಾಗಲೇ ರಾಜ್ಯದ ಹಲವು ನಗರಗಳ ವೃತ್ತಗಳು ಹಾಗೂ ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ. ರಾಜ್ಯದ ವಿವಿಧ ಕಡೆ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಗಳನ್ನು ಸ್ಥಾಪಿಸಲಾಗುತ್ತಿದೆ.

  ದಸರಾ ಪುಷ್ಪೋತ್ಸವದಲ್ಲಿ ಪುನೀತ್ ರಾಜ್‌ಕುಮಾರ್ದಸರಾ ಪುಷ್ಪೋತ್ಸವದಲ್ಲಿ ಪುನೀತ್ ರಾಜ್‌ಕುಮಾರ್

  ಹೀಗೆ ರಾಜ್ಯದ ವಿವಿಧೆಡೆ ಅಪ್ಪು ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದ್ದರೂ ಸಹ ಅತಿ ಹೆಚ್ಚಾಗಿ ಸದ್ದು ಮಾಡಿದ್ದು ಹೊಸಪೇಟೆಯ ಅಪ್ಪು ಪ್ರತಿಮೆ. ಹೌದು, ಇತ್ತೀಚೆಗಷ್ಟೇ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ದೊಡ್ಡ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ಸೇರಿದ್ದರು. ಹೀಗೆ ಬಹಳ ವಿಜೃಂಭಣೆಯಿಂದ ಹೊಸಪೇಟೆಯ ಅಪ್ಪು ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು ಹಾಗೂ ಈ ಪ್ರತಿಮೆಯನ್ನು ನೋಡಲು ಇಂದಿಗೂ ಸಹ ಹಲವಾರು ಅಭಿಮಾನಿಗಳು ಹೊಸಪೇಟೆಗೆ ಆಗಮಿಸುತ್ತಲೇ ಇದ್ದಾರೆ. ಇದೀಗ ಇದೇ ರೀತಿ ಸದ್ದು ಮಾಡಲಿರುವ ಮತ್ತೊಂದು ಅಪ್ಪು ಪ್ರತಿಮೆ ನಿರ್ಮಾಣವಾಗಿದ್ದು, ಈ ಪ್ರತಿಮೆ 21 ಅಡಿ ಎತ್ತರವಿದೆ ಎನ್ನಲಾಗಿದೆ. ಈ ಬೃಹತ್ ಪ್ರತಿಮೆ ಎಲ್ಲಿ ತಯಾರಾಗುತ್ತಿದೆ ಹಾಗೂ ಯಾವ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

   ಈ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ 21 ಅಡಿಯ ಅಪ್ಪು ಪ್ರತಿಮೆ

  ಈ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ 21 ಅಡಿಯ ಅಪ್ಪು ಪ್ರತಿಮೆ

  21 ಅಡಿಯ ಪುನೀತ್ ರಾಜ್ ಕುಮಾರ್ ಪ್ರತಿಮೆ ಬಳ್ಳಾರಿ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಸದ್ಯ ಈ ಬೃಹತ್ ಪ್ರತಿಮೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಎಂಬ ನಗರದಲ್ಲಿ ತಯಾರಾಗುತ್ತಿದ್ದು, ಈ ಬೃಹತ್ ಪ್ರತಿಮೆಯ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಪ್ಪು ಅವರ ನೆಚ್ಚಿನ ಊರಾದ ಬಳ್ಳಾರಿಯಲ್ಲಿ ಪ್ರತಿಮೆ ಸ್ಥಾಪನೆಗೊಳ್ಳುವುದರಿಂದ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇಳೆ ಬೃಹತ್ ಜನಸ್ತೋಮ ಸೇರುವುದು ಖಚಿತ.

   ಈ ಹಿಂದೆಯೇ ಘೋಷಿಸಿದ್ರು ಶ್ರೀರಾಮುಲು

  ಈ ಹಿಂದೆಯೇ ಘೋಷಿಸಿದ್ರು ಶ್ರೀರಾಮುಲು

  ಈ ಹಿಂದೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜಕಾರಣಿ ಶ್ರೀರಾಮುಲು ಬಳ್ಳಾರಿ ನಗರದಲ್ಲಿ ಪುನೀತ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದೇವೆ ಎಂದು ಘೋಷಿಸಿದ್ದರು. ಹಾಗೂ ಇತ್ತೀಚೆಗಷ್ಟೇ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು ಅಪ್ಪು ಅವರ 21 ಅಡಿಯ ಪ್ರತಿಮೆ ಸಿದ್ಧಗೊಳ್ಳುತ್ತಿದ್ದು ಶೀಘ್ರದಲ್ಲಿಯೇ ಪ್ರತಿಷ್ಠಾಪನೆಯಾಗಲಿದೆ ಎಂದಿದ್ದರು.

   ದಾಖಲೆ ಬರೆಯಲಿದೆ ಈ ಪ್ರತಿಮೆ

  ದಾಖಲೆ ಬರೆಯಲಿದೆ ಈ ಪ್ರತಿಮೆ

  ಪುನೀತ್ ರಾಜ್ ಕುಮಾರ್ ಅವರ 21 ಅಡಿ ಎತ್ತರದ ಈ ಪ್ರತಿಮೆ ದಾಖಲೆ ಬರೆಯಲಿದೆ. ಅತಿ ಎತ್ತರದ ನಟನ ಪ್ರತಿಮೆ ಎಂಬ ಕೀರ್ತಿಗೆ ಒಳಗಾಗಲಿದೆ ಈ ಪ್ರತಿಮೆ. ಹೌದು, ಇದುವರೆಗೂ ಯಾವುದೇ ಚಲನಚಿತ್ರ ನಟನ ಪ್ರತಿಮೆಯನ್ನು ಕೂಡ ಇಷ್ಟು ಎತ್ತರದಲ್ಲಿ ನಿರ್ಮಿಸಲಾಗಿಲ್ಲ. ಈ ಮೂಲಕ ಅಪ್ಪು ಮತ್ತೊಂದು ದಾಖಲೆಗೆ ಪಾತ್ರರಾಗಲಿದ್ದಾರೆ.

  English summary
  Late actor Puneeth Rajkumar's 21 feet statue to be placed in Ballari
  Monday, September 26, 2022, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X