ಲೀಕ್ ಆಯ್ತು 'ಅಂಜನಿಪುತ್ರ' : ಬಿಟ್ಟಿಯಾಗಿ ಓಡ್ತಿದೆ ಪುನೀತ್ ಸಿನಿಮಾ !

By Naveen

Recommended Video

ಅಂಜನೀಪುತ್ರ ಸಿನಿಮಾ ಫೇಸ್ ಬುಕ್ ನಲ್ಲಿ ಲೀಕ್ | Filmibeat Kannada

ಪ್ರತಿವಾರ ರಿಲೀಸ್ ಆಗುವ ಕನ್ನಡ ಸಿನಿಮಾಗಳಿಗೆ ಪೈರಸಿ ಸಮಸ್ಯೆ ಕಾಡುತ್ತಿದೆ. 'ತಾರಕ್', 'ಭರ್ಜರಿ', 'ಕಾಲೇಜ್ ಕುಮಾರ್' ನಂತರ ಈಗ ನಟ ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಸಿನಿಮಾಗೆ ಕೂಡ ಅದೇ ಸಮಸ್ಯೆ ಎದುರಾಗಿದೆ.

ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಸಿನಿಮಾ ನಿನ್ನೆ ರಾಜ್ಯಾದಂತ್ಯ ರಿಲೀಸ್ ಆಗಿದೆ. ಸಿನಿಮಾಗೆ ದೊಡ್ಡ ಕ್ರೇಜ್ ಇದ್ದು ಎಷ್ಟೊ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯೇ ಸಿನಿಮಾದ ಪ್ರದರ್ಶನ ಶುರುವಾಗಿತ್ತು. 'ರಾಜಕುಮಾರ' ನಂತರ ಮತ್ತೆ ಪುನೀತ್ ನೋಡಿ ಜನ ಖುಷಿ ಆಗಿದ್ದರು. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಕಂಡ ಚಿತ್ರತಂಡ ಸಮಾಧಾನವಾಗಿತ್ತು. ಆದರೆ ಈಗ 'ಅಂಜನಿಪುತ್ರ' ಪೈರಸಿ ಆಗಿದೆ. ಸಿನಿಮಾದ ಅನೇಕ ಪ್ರಮುಖ ದೃಶ್ಯಗಳು ಈಗ ಲೀಕ್ ಆಗಿದೆ. ಮುಂದೆ ಓದಿ....

ಸಾಮಾಜಿಕ ಜಾಲತಾಣಗಳಲ್ಲಿ

ಸಾಮಾಜಿಕ ಜಾಲತಾಣಗಳಲ್ಲಿ

'ಅಂಜನಿಪುತ್ರ' ಸಿನಿಮಾದ ಪ್ರಮುಖ ದೃಶ್ಯಗಳು ಈಗ ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ.

ಬಿಟ್ಟಿ ಪ್ರದರ್ಶನ

ಬಿಟ್ಟಿ ಪ್ರದರ್ಶನ

ನಾಲ್ಕುದು ಯೂಟ್ಯೂಬ್ ಚಾನೆಲ್ ಗಳಲ್ಲಿ 'ಅಂಜನಿಪುತ್ರ' ಸಿನಿಮಾದ ಪ್ರಮುಖ ದೃಶ್ಯಗಳ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಸಾವಿರಾರು ಜನ ಇಲ್ಲಿಯೇ ಬಿಟ್ಟಿಯಾಗಿ ಸಿನಿಮಾ ನೋಡುತ್ತಿದ್ದಾರೆ.

ಕಿಡಿಗೇಡಿಗಳ ಕೃತ್ಯ

ಕಿಡಿಗೇಡಿಗಳ ಕೃತ್ಯ

ನಿನ್ನೆ 'ಅಂಜನಿಪುತ್ರ' ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಹೋದ ಕಿಡಿಗೇಡಿಗಳು ಸುಮ್ಮನೆ ಇರದೇ ವಿಡಿಯೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅನೇಕ ದೃಶ್ಯಗಳು

ಅನೇಕ ದೃಶ್ಯಗಳು

'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ಇಂಟ್ರೊಡಕ್ಷನ್ ಸೀನ್, ಪುನೀತ್ ಮತ್ತು ರಶ್ಮಿಕಾ ನಡುವಿನ ದೃಶ್ಯಗಳು ಹಾಗೂ ಧರ್ಮಣ್ಣ ಅವರ ಕಾಮಿಡಿ ದೃಶ್ಯಗಳು ಸೇರಿದಂತೆ ಅನೇಕ ದೃಶ್ಯಗಳು ಈಗ ಲೀಕ್ ಆಗಿದೆ.

'ಕಾಲೇಜ್ ಕುಮಾರ್' ಸಿನಿಮಾ

'ಕಾಲೇಜ್ ಕುಮಾರ್' ಸಿನಿಮಾ

ಇತ್ತೀಚಿಗಷ್ಟೆ 'ಕಾಲೇಜ್ ಕುಮಾರ್' ಸಿನಿಮಾಗೆ ಕೂಡ ಪೈರಸಿ ಸಮಸ್ಯೆ ಎದುರಾಗಿತ್ತು. ಚಿತ್ರದ ಸಂಪೂರ್ಣ ಕಾಪಿ ಆನ್ ಲೈನ್ ನಲ್ಲಿ ಬಂದುಬಿಟ್ಟಿತ್ತು.

'ಭರ್ಜರಿ, ತಾರಕ್ ಚಿತ್ರಗಳು

'ಭರ್ಜರಿ, ತಾರಕ್ ಚಿತ್ರಗಳು

ಈ ಹಿಂದೆ ಧ್ರುವ ಸರ್ಜಾ ನಟನೆಯ 'ಭರ್ಜರಿ' ಮತ್ತು ದರ್ಶನ್ ನಟನೆಯ 'ತಾರಕ್' ಸಿನಿಮಾಗಳ ಪ್ರದರ್ಶನದ ವೇಳೆ ಕೂಡ ಕಿಡಿಗೇಡಿಗಳು ಫೇಸ್ ಬುಕ್ ಲೈವ್ ಮಾಡಿದ್ದರು.

'ಅಂಜನಿಪುತ್ರ' ಚಿತ್ರದ ಬಗ್ಗೆ

'ಅಂಜನಿಪುತ್ರ' ಚಿತ್ರದ ಬಗ್ಗೆ

'ಅಂಜನಿಪುತ್ರ' ಸಿನಿಮಾ ನಿನ್ನೆ ರಾಜ್ಯಾದಂತ್ಯ ರಿಲೀಸ್ ಆಗಿತ್ತು. ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಟಿಸಿದ್ದರು. ಹರ್ಷ ನಿರ್ದೇಶನ ಮತ್ತು ರವಿಬಸೂರ್ ಸಂಗೀತ ಚಿತ್ರಕ್ಕೆ ಇದೆ.

More from Filmibeat

English summary
After 'College Kumar' movie Now Kananda actor Puneeth Rajkumar's starrer Kannada movie 'Anjaniputra' leaked in online. The movie released Yesterday (December 21st) and it was directed by A.Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X