'ಅಂಜನಿಪುತ್ರ' ಸಿನಿಮಾಗೆ ಗಾಂಧಿನಗರದಲ್ಲಿ ಸಿಕ್ಕ ಚಿತ್ರಮಂದಿರ ಯಾವುದು?
ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಡಿಸೆಂಬರ್ 21ಕ್ಕೆ ಗುರುವಾರ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.
ಗಾಂಧಿನಗರದಲ್ಲಿ 'ಅಂಜನಿಪುತ್ರ' ಯಾವ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ ಎನ್ನುವ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಅಂಜನಿಪುತ್ರ' ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ನಿರ್ದೇಶಕ ಹರ್ಷ ಮತ್ತು ಶಿವಣ್ಣ ಕಾಂಬಿನೇಶನ್ ನಲ್ಲಿ ಬಂದಿದ್ದ 'ಭಜರಂಗಿ' ಸಿನಿಮಾ ತ್ರಿವೇಣಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಈಗ 'ಅಂಜನಿಪುತ್ರ' ಕೂಡ ಅದೇ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.

ಅಂದಹಾಗೆ, 'ಅಂಜನಿಪುತ್ರ' ತಮಿಳಿನ 'ಪೂಜೈ' ಚಿತ್ರದ ರಿಮೇಕ್ ಆಗಿದೆ. ನಟಿ ರಮ್ಯ ಕೃಷ್ಣ ಪುನೀತ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಅಂಜನಿಪುತ್ರ' ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ. ರಶ್ಮಿಕಾ ಮಂದಣ್ಣ ಎರಡನೇ ಸಿನಿಮಾ ಇದಾಗಿದೆ. ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಕಿರಿಕ್ ಹುಡುಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











