ಪುನೀತ್ ರಾಜ್ ಕುಮಾರ್ ಬಗ್ಗೆ ಸ್ಫೋಟಗೊಂಡ ರೋಚಕ ಸುದ್ದಿ ನಿಜ.?
ಗಾಂಧಿನಗರದಲ್ಲಿ ಪುನೀತ್ ರಾಜ್ ಕುಮಾರ್ ಅಂದ್ರೆ ಹೈ ವೋಲ್ಟೇಜ್ ಕರೆಂಟ್ ಇದ್ದ ಹಾಗೆ. ಯಾಕಂದ್ರೆ, ಮೈನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಅಪ್ಪು ಅಭಿನಯ ಲೀಲಾಜಾಲ. ಇದೇ ಕಾರಣಕ್ಕೆ 'ಪವರ್ ಸ್ಟಾರ್' ಅಂತ ಬಿರುದು ಪಡೆದುಕೊಂಡಿರುವ ಪುನೀತ್, ಆಕ್ಷನ್ ಪ್ರಿಯರ ಪಾಲಿಗೆ ರೋಲ್ ಮಾಡೆಲ್.
ಇದುವರೆಗೂ ಪುನೀತ್ ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲೂ ಸಾಹಸ ದೃಶ್ಯಗಳು ರೋಚಕವಾಗಿ ಮೂಡಿ ಬಂದಿದೆ. ಮೈ ಜುಂ ಎನಿಸುವ ಎಂಥಾ ಕಠಿಣ ಆಕ್ಷನ್ ಸೀಕ್ಷೆನ್ಸ್ ಆಗಿದ್ದರೂ, ಡ್ಯೂಪ್ ಬಳಸದೆ, ನೀರು ಕುಡಿದಷ್ಟೇ ಸಲೀಸಾಗಿ ಮಾಡುವುದರಲ್ಲಿ ಪುನೀತ್ ರಾಜ್ ಕುಮಾರ್ ಎಕ್ಸ್ ಪರ್ಟ್.
ಬಹುಶಃ ಇದಕ್ಕೆ ಇರಬೇಕು ಪುನೀತ್ ರಾಜ್ ಕುಮಾರ್ ರವರ ಎಲ್ಲಾ ಸಿನಿಮಾಗಳಲ್ಲೂ ಸೂಪರ್ ಸ್ಟಂಟ್ ಗಳನ್ನ ಅಭಿಮಾನಿಗಳು ನಿರೀಕ್ಷೆ ಮಾಡುವುದು. ಈಗ ಆಗಿರುವುದು ಸೇಮ್ ಟು ಸೇಮ್ ಇದೇ ರೀತಿ.!
ಅಪ್ಪು ರವರ ಮುಂದಿನ ಸಿನಿಮಾ 'ರಾಜಕುಮಾರ' ಚಿತ್ರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ದೊಡ್ಡ ನಿರೀಕ್ಷೆ ಇದೆ. ಇದರಿಂದಲೇ ಒಂದು ರೋಚಕ ಸುದ್ದಿ ಸ್ಫೋಟಗೊಂಡಿದೆ. ಆ ಸುದ್ದಿ ಏನು.? ಸುದ್ದಿಯ ಹಿಂದಿನ ಸತ್ಯಾಸತ್ಯತೆ ತಿಳಿಸುವ ಪ್ರಯತ್ನ ನಮ್ಮದು.....

'ರಾಜಕುಮಾರ' ಚಿತ್ರದ ಬಗ್ಗೆ ಬ್ರೇಕಿಂಗ್ ನ್ಯೂಸ್.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ಬಹು ನಿರೀಕ್ಷಿತ 'ರಾಜಕುಮಾರ' ಚಿತ್ರದ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....

ಈ ಫೋಟೋ ನೋಡಿ....
ಸದ್ಯ ಗಾಂಧಿನಗರದ ಅಂಗಳದಲ್ಲಿ ಬ್ಲಾಸ್ ಆಗಿರುವ ನ್ಯೂಸ್ ಇದೇ. 'ರಾಜಕುಮಾರ' ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ 'ಬಂಗೀ ಜಂಪ್' ಮಾಡಿದ್ದಾರಂತೆ. [ಆಸ್ಟ್ರೇಲಿಯಾಗೆ ಹಾರಿದ ಪುನೀತ್ ರ 'ರಾಜಕುಮಾರ' ಚಿತ್ರತಂಡ]

ಎಷ್ಟು ಅಡಿ ಎತ್ತರದಿಂದ ಅಂತ ಗೊತ್ತಾ.?
ಬರೋಬ್ಬರಿ 14,000 ಅಡಿಗಳಷ್ಟು ಎತ್ತರದಿಂದ ಬಂಗೀ ಜಂಪ್ ಮಾಡಿದ್ದಾರಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.! [ಪುನೀತ್ ಅವರ 'ರಾಜಕುಮಾರ'ದಲ್ಲಿ ಎರಡು ಕಥೆ ಇದೆಯಂತೆ]

ಅಪಾಯಕಾರಿ ಸ್ಟಂಟ್.!
ಬಂಗೀ ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವವರ ಸುದ್ದಿಗಳನ್ನು ಓದಿದ್ದೇವೆ. ಆದ್ರೆ, ಪ್ರಾಣ ಭಯ ಬಿಟ್ಟು ಬಂಗೀ ಜಂಪ್ ಮಾಡಿರುವ ಪುನೀತ್ ರಾಜ್ ಕುಮಾರ್ ಗೆ ಸಾಹಸ ಪ್ರಿಯರು ಶಿಳ್ಳೆ ಹೊಡೆಯುತ್ತಿದ್ದಾರೆ. [ವಾವ್.! ಮೊದಲ ಹಂತದ ಶೂಟಿಂಗ್ ಮುಗಿಸಿದ ಪುನೀತ್ ರ 'ರಾಜಕುಮಾರ']

ಮೊದಲ ಭಾರತೀಯ ನಟ.!
ಅತಿ ಎತ್ತರದಿಂದ 'ಬಂಗೀ ಜಂಪ್' ಮಾಡಿರುವ ಮೊದಲ ಭಾರತೀಯ ನಟ ಎಂಬ ಖ್ಯಾತಿಗೆ ನಟ ಪುನೀತ್ ರಾಜ್ ಕುಮಾರ್ ಪಾತ್ರವಾಗಿದ್ದಾರಂತೆ.!

ಇದೆಲ್ಲಾ ನಿಜವೇ.?
ಇಷ್ಟೊತ್ತು ಹೇಳಿದ್ದೆಲ್ಲಾ, ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿ ಮಾತ್ರ.! ಸತ್ಯ ಏನಪ್ಪಾ ಅಂದ್ರೆ, ಪುನೀತ್ ರಾಜ್ ಕುಮಾರ್ ಬಂಗೀ ಜಂಪ್ ಮಾಡಿರಬಹುದು. ಆದ್ರೆ, 'ರಾಜಕುಮಾರ' ಚಿತ್ರಕ್ಕೆ ಅಲ್ಲ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟ ಪಡಿಸಿದ್ದಾರೆ.!
''ರಾಜಕುಮಾರ' ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಬಂಗೀ ಜಂಪ್ ಮಾಡಿಲ್ಲ. ಹೀಗಂತ ಯಾರು ಸುಳ್ಳು ಸುದ್ದಿ ಹಬ್ಬಿಸಿದ್ದಾರೋ, ಗೊತ್ತಿಲ್ಲ'' ಅಂತ 'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟವಾಗಿ ಹೇಳಿದ್ದಾರೆ.

ನಿರ್ಮಾಪಕರು ಏನಂತಾರೆ.?
''ಪುನೀತ್ ಮಾಡಿರುವ ಬಂಗೀ ಜಂಪ್ ಫೋಟೋ ಇಟ್ಕೊಂಡು ಕೆಲ ಅಭಿಮಾನಿಗಳು 'ರಾಜಕುಮಾರ' ಚಿತ್ರದ್ದು ಅಂತ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದ್ರೆ, 'ರಾಜಕುಮಾರ' ಚಿತ್ರದಲ್ಲಿ ಅಂತ ಯಾವುದೇ ಸನ್ನಿವೇಶ ಇಲ್ಲ. ಸುಳ್ಳು ಪ್ರಚಾರ ಮಾಡಿ ಜನರ ನಿರೀಕ್ಷೆಗೆ ತಣ್ಣೀರು ಎರಚಬಾರದು'' ಅಂತ 'ರಾಜಕುಮಾರ' ಚಿತ್ರಕ್ಕೆ ಬಂಡವಾಳ ಹಾಕಿರುವ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆಯ ಕಾರ್ತಿಕ್ ಗೌಡ ಹೇಳುತ್ತಾರೆ.

ಪುನೀತ್ ರಾಜ್ ಕುಮಾರ್ ಬಂಗೀ ಜಂಪ್ ಮಾಡಿರುವುದು ನಿಜವೇ.?
ಪುನೀತ್ ರಾಜ್ ಕುಮಾರ್ ಬಂಗೀ ಜಂಪ್ ಮಾಡಿದ್ದಾರಾ.? ಎಲ್ಲಿ.? ಯಾವಾಗ.? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. 'ಬಂಗೀ ಜಂಪ್' ಫೋಟೋ ಹೇಗೆ ಲೀಕ್ ಆಯ್ತೋ...ಅವರ ಅಭಿಮಾನಿಗಳೇ ಬಲ್ಲರು.!

'ರಾಜಕುಮಾರ' ಚಿತ್ರದ ಕುರಿತು....
ಥೇಟ್ 'ಕಸ್ತೂರಿ ನಿವಾಸ' ಚಿತ್ರದಲ್ಲಿನ ಡಾ.ರಾಜ್ ಕುಮಾರ್ ಗೆಟಪ್ ನಲ್ಲಿ ಪುನೀತ್ ಅಭಿನಯಿಸುತ್ತಿರುವ ಸಿನಿಮಾ 'ರಾಜಕುಮಾರ'. ಅಪ್ಪು ಗೆ ಪ್ರಿಯಾ ಆನಂದ್ ಜೋಡಿ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನಿರ್ದೇಶಿಸಿದ್ದ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











