For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಮುನ್ನವೇ ಇತಿಹಾಸ ಸೃಷ್ಟಿಸಿದ 'ಚಕ್ರವ್ಯೂಹ'

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ಬಿಡುಗಡೆಗೆ ಮುನ್ನವೇ ದಾಖಲೆ ನಿರ್ಮಿಸಿದೆ.

  ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದ ವಿತರಣಾ ಹಕ್ಕು ಮತ್ತು ಆಡಿಯೋ ಹಕ್ಕು ಈಗಾಗಲೇ ದಾಖಲೆ ಬೆಲೆಗೆ ಮಾರಾಟವಾಗಿದೆ. ಅದೂ ಬರೋಬ್ಬರಿ 14 ಕೋಟಿ ರೂಪಾಯಿಗೆ ಮಾರಾಟವಾಗಿದೆ.[ದಾಖಲೆ ಬೆಲೆಗೆ 'ಚಕ್ರವ್ಯೂಹ' ವಿತರಣಾ ಹಕ್ಕು ಸೇಲ್!]

  ಈಗಾಗಲೇ 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ. ಇದೀಗ ಚಿತ್ರ ಕೊನೆಯ ಹಂತದಲ್ಲಿರುವಾಗಲೇ ಚಿತ್ರದ ವಿತರಣಾ ಹಕ್ಕು ಮತ್ತು ಆಡಿಯೋ ಹಕ್ಕು ಇಡೀ ಕರ್ನಾಟಕದಾದ್ಯಂತ ಎಲ್ಲಾ ಏರಿಯಾಗಳಲ್ಲಿ ದಾಖಲೆ ಬೆಲೆಗೆ ಸೇಲ್ ಆಗಿದೆ.

  ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ 'ಚಕ್ರವ್ಯೂಹ' ಚಿತ್ರದ ವಿತರಣಾ ಹಕ್ಕು ಮತ್ತು ಆಡಿಯೋ ಹಕ್ಕು ಎಷ್ಟಕ್ಕೆ ಮಾರಾಟ ಆಗಿದೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ಚಿತ್ರದ ವಿತರಣಾ ಹಕ್ಕು:

  ಚಿತ್ರದ ವಿತರಣಾ ಹಕ್ಕು:

  ಗಾಂಧಿನಗರದಲ್ಲಿ ದೊರಕಿರುವ ಮೂಲ ಮಾಹಿತಿ ಪ್ರಕಾರ ಸುಮಾರು 7.20 ಕೋಟಿ ರೂಪಾಯಿಗಳಿಗೆ 'ಚಕ್ರವ್ಯೂಹ' ಚಿತ್ರದ ವಿತರಣಾ ಹಕ್ಕು ಮಾರಾಟವಾಗಿದೆ. ಅಂದಹಾಗೆ ಪವರ್ ಸ್ಟಾರ್ ಪುನೀತ್ ಅವರ ಸಿನಿ ಜರ್ನಿಯಲ್ಲಿ ಇದು ಹೊಸ ರೆಕಾರ್ಡ್.[ಅಪ್ಪು ಸಿನಿಮಾದಲ್ಲಿ ಯಂಗ್ ಟೈಗರ್ ಜೂ.ಎನ್.ಟಿ.ಆರ್.?]

  ಸ್ಯಾಟಲೈಟ್ ಮತ್ತು ಆಡಿಯೋ ಹಕ್ಕು

  ಸ್ಯಾಟಲೈಟ್ ಮತ್ತು ಆಡಿಯೋ ಹಕ್ಕು

  'ಚಕ್ರವ್ಯೂಹ' ಸಿನಿಮಾ ಬಿಡುಗಡೆಗೆ ಮುನ್ನವೇ ಆತ್ಮವಿಶ್ವಾಸ ಇರುವ ವಿತರಕರು ಈಗಾಗಲೇ ಸ್ಯಾಟಲೈಟ್ ಹಕ್ಕು ಮತ್ತು ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ.

  ಆಡಿಯೋ ಲಾಂಚ್ ಗೆ ತಮಿಳು ನಟ ಸೂರ್ಯ

  ಆಡಿಯೋ ಲಾಂಚ್ ಗೆ ತಮಿಳು ನಟ ಸೂರ್ಯ

  ತಮಿಳಿನ 'ಎಂಗೇಯುಮ್ ಎಪ್ಪೋದುಮ್' ಖ್ಯಾತಿಯ ನಿರ್ದೇಶಕ ಎಮ್ ಸರವಣನ್ ಅವರು 'ಚಕ್ರವ್ಯೂಹ' ಚಿತ್ರದ ಆಡಿಯೋ ಲಾಂಚ್ ಗೆ ತಮಿಳಿನ 'ಸಿಂಗಂ' ನಟ ಸೂರ್ಯ ಅವರನ್ನು ಆಹ್ವಾನಿಸಿದ್ದಾರೆ.

  ಪುನೀತ್ -ರಚಿತಾ ರಾಮ್ ಜೋಡಿಯ ಮೋಡಿ

  ಪುನೀತ್ -ರಚಿತಾ ರಾಮ್ ಜೋಡಿಯ ಮೋಡಿ

  ಇದೇ ಮೊದಲ ಬಾರಿಗೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ಚಕ್ರವ್ಯೂಹ'ದ ಮೂಲಕ ಒಂದಾಗಿದ್ದು, ಇವರಿಬ್ಬರ ಜೋಡಿ ಸ್ಯಾಂಡಲ್ ವುಡ್ ನ ಮಂದಿಯನ್ನು ಮೋಡಿ ಮಾಡಲಿದ್ದಾರೆ.

  ಜನವರಿ 2016 ಕ್ಕೆ ಚಿತ್ರ ತೆರೆಗೆ

  ಜನವರಿ 2016 ಕ್ಕೆ ಚಿತ್ರ ತೆರೆಗೆ

  ಪುನೀತ್, ರಚಿತಾ ರಾಮ್, ತಮಿಳು ನಟ ಅರುಣ್ ವಿಜಯ್ ಮತ್ತು ಬಹುಭಾಷಾ ನಟ ಅಭಿಮನ್ಯು ಸಿಂಗ್ ನೆಗೆಟಿವ್ ರೋಲ್ ನಲ್ಲಿ ಮಿಂಚಿರುವ 'ಚಕ್ರವ್ಯೂಹ' ಜನವರಿ 2016, ಹೊಸ ವರ್ಷಕ್ಕೆ ಭರ್ಜರಿಯಾಗಿ ತೆರೆ ಕಾಣುತ್ತಿದೆ.

  ಹೊಸ ವರ್ಷಕ್ಕೆ 'ಚಕ್ರವ್ಯೂಹ' ಬ್ಲಾಕ್ ಬಸ್ಟರ್ ಹಿಟ್?

  ಹೊಸ ವರ್ಷಕ್ಕೆ 'ಚಕ್ರವ್ಯೂಹ' ಬ್ಲಾಕ್ ಬಸ್ಟರ್ ಹಿಟ್?

  2015 ರಲ್ಲಿ ಪವರ್ ಸ್ಟಾರ್ ಪುನೀತ್ ಅವರ 'ಮೈತ್ರಿ' ಸಿನಿಮಾ ಪ್ರೇಕ್ಷಕರ ಮನಗೆದ್ದು ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಇದೀಗ 2016 ನಲ್ಲಿ 'ಚಕ್ರವ್ಯೂಹ' ಬಿಗ್ ಒಪನಿಂಗ್ ಪಡೆದುಕೊಳ್ಳುತ್ತಾ ಅಂತ ಕಾದು ನೋಡಬೇಕು.

  English summary
  Puneeth Rajkumar's upcoming movie Chakravyuha makes profit even before the release! The latest reports from Gandhinagara say that, the distribution and audio rights of the movie has already sold out for a whopping amount of 14 Crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X