For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅವರ 'ಚಕ್ರವ್ಯೂಹ' ಬಿಡುಗಡೆ ಮುಂದಕ್ಕೆ ಹೋಗಿದ್ದೇಕೆ?

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಭಿನಯಿಸಿರುವ 'ಚಕ್ರವ್ಯೂಹ' ಸಿನಿಮಾ ಇದೇ ವಾರ (ಏಪ್ರಿಲ್ 22) ತೆರೆ ಕಾಣಲಿದೆ ಅಂತ ಖುದ್ದು ನಿರ್ಮಾಪಕ ಲೋಹಿತ್ ಅವರೇ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದರು.

  ಆದರೆ ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ ಈ ಸಿನಿಮಾ ಈ ವಾರ ತೆರೆಕಾಣುತ್ತಿಲ್ಲ. ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿದೆ.[ವಾವ್.! 'ಚಕ್ರವ್ಯೂಹ' ಬಿಡುಗಡೆ ದಿನಾಂಕ ಪಕ್ಕಾ ಆಯ್ತು]

  ಅಷ್ಟಕ್ಕೂ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರೋದು ಯಾಕೆ ಅಂದರೆ ಯಾರ ಬಳಿಯೂ ಸರಿಯಾದ ಉತ್ತರ ಇಲ್ಲ, ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಬಾಕಿ ಇದೆ ಅಂತ ಕೆಲವರು ಅಂದರೆ ಇನ್ನೂ ಕೆಲವರು ಚಿತ್ರಕ್ಕೆ ಸೆನ್ಸಾರ್ ಆಗಿಲ್ಲ ಅಂತ ಸುದ್ದಿ ಹಬ್ಬಿಸಿದ್ದಾರೆ.

  ಏಪ್ರಿಲ್ 24 ರಂದು ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಅದಕ್ಕೆ ಎರಡು ದಿನಕ್ಕೆ ಮುಂಚೆ ಸಿನಿಮಾ ಬಿಡುಗಡೆ ಮಾಡಲು ಈ ಮೊದಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ ಇದೀಗ ಪ್ಲ್ಯಾನ್ ಪೂರ್ತಿ ಚೇಂಜ್ ಆಗಿದೆ.[ಪುನೀತ್ ಅಭಿಮಾನಿಗಳ, ಅಭಿಮಾನಕ್ಕೆ ಕಿಚ್ಚು ಹಚ್ಚೋ ಸುದ್ದಿ]

  ಇನ್ನು ಸಿನಿಮಾ ಒಂದು ವಾರ ಮುಂದಕ್ಕೆ ಹೋಗಿರುವುದರ ಬಗ್ಗೆ ನಿರ್ಮಾಪಕ ಲೋಹಿತ್ ಅವರು ಏನಂತಾರೆ ಅನ್ನೋದನ್ನ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  ಏಪ್ರಿಲ್ 29ಕ್ಕೆ ಬಿಡುಗಡೆ

  ಏಪ್ರಿಲ್ 29ಕ್ಕೆ ಬಿಡುಗಡೆ

  ಏಪ್ರಿಲ್ 22ರ ಬದ್ಲಾಗಿ ಏಪ್ರಿಲ್ 29ಕ್ಕೆ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿರುವ ಚಿತ್ರತಂಡ ರಾಜ್ಯ ಸೇರಿದಂತೆ ದೇಶ-ವಿದೇಶದಲ್ಲೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.[ಡಿಂಪಲ್ ಕ್ವೀನ್ ರಚಿತಾ ಅವರಿಗೆ ನಿಂತಲ್ಲಿ ನಿಲ್ಲಲಾಗುತ್ತಿಲ್ಲವಂತೆ]

  ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರದಲ್ಲಿ

  ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರದಲ್ಲಿ

  ಕರ್ನಾಟಕದಲ್ಲಿ ಸುಮಾರು 250 ಚಿತ್ರಮಂದಿರಗಳಲ್ಲಿ 'ಚಕ್ರವ್ಯೂಹ' ಸಿನಿಮಾ ಬಿಡುಗಡೆ ಆಗಲಿದೆ. ಜೊತೆಗೆ ಮುಂದಿನ ವಾರ ಚಿತ್ರಮಂದಿರಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

  ನಿರ್ಮಾಪಕ ಲೋಹಿತ್ ಏನಂತಾರೆ?

  ನಿರ್ಮಾಪಕ ಲೋಹಿತ್ ಏನಂತಾರೆ?

  ಈ ಬಗ್ಗೆ ನಿರ್ಮಾಪಕ ಲೋಹಿತ್ ಅವರು ಹೇಳುವ ಪ್ರಕಾರ "ವಿದೇಶದಲ್ಲಿ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ಕೆಲವು ದೇಶಗಳಿಂದ 'ಚಕ್ರವ್ಯೂಹ' ಬಿಡುಗಡೆ ಮಾಡಿ ಎಂಬ ಬೇಡಿಕೆ ಬಂದಿದೆ" ಎನ್ನುತ್ತಾರೆ.

  ದೇಶ-ವಿದೇಶದಲ್ಲಿ ರಿಲೀಸ್

  ದೇಶ-ವಿದೇಶದಲ್ಲಿ ರಿಲೀಸ್

  "ಹಲವಾರು ಕಡೆ ಸಿನಿಮಾ ಬಿಡುಗಡೆ ಮಾಡಿ ಎಂಬ ಆಗ್ರಹದ ಮೇರೆಗೆ ದೇಶ-ವಿದೇಶ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಚಕ್ರವ್ಯೂಹ' ಸಿನಿಮಾ ಬಿಡುಗಡೆ ಆಗಲಿದೆ", ಎನ್ನುತ್ತಾರೆ ನಿರ್ಮಾಪಕ ಲೋಹಿತ್.

  ಕೆಲವು ಪ್ಲ್ಯಾನಿಂಗ್ ನಿಂದ ಬಿಡುಗಡೆ ಮುಂದಕ್ಕೆ

  ಕೆಲವು ಪ್ಲ್ಯಾನಿಂಗ್ ನಿಂದ ಬಿಡುಗಡೆ ಮುಂದಕ್ಕೆ

  'ಏಪ್ರಿಲ್ 22ಕ್ಕೆ ತೆರೆ ಕಾಣಬೇಕಿದ್ದ 'ಚಕ್ರವ್ಯೂಹ' ಸಿನಿಮಾ ಕೆಲವಾರು ಪ್ಲ್ಯಾನಿಂಗ್ ನಿಂದಾಗಿ ಒಂದು ವಾರ ಮುಂದಕ್ಕೆ ಹೋಗಿ ಏಪ್ರಿಲ್ 29ಕ್ಕೆ ತೆರೆ ಕಾಣಲಿದೆ' ಎಂದು ನಿರ್ಮಾಪಕರು ತಿಳಿಸಿದ್ದಾರೆ.

  ನೈಜ ಕಥೆ

  ನೈಜ ಕಥೆ

  ನಿರ್ದೇಶಕ ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಸಿನಿಮಾದಲ್ಲಿ ಒಂದು ವಿಶೇಷತೆ ಇದ್ದು, ಭಾರತದಲ್ಲಿ ನಡೆದ ಒಂದು ನೈಜ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಆದ್ದರಿಂದ ಈ ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವಿದೆ ಎನ್ನುತ್ತಾರೆ ನಿರ್ಮಾಪಕ ಲೋಹಿತ್.

  ಲೋಹಿತ್ ಪುನೀತ್ ಅವರ ಅಭಿಮಾನಿಯಂತೆ

  ಲೋಹಿತ್ ಪುನೀತ್ ಅವರ ಅಭಿಮಾನಿಯಂತೆ

  ನಿರ್ಮಾಪಕ ಎನ್.ಕೆ ಲೋಹಿತ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರಿಗಾಗಿ ಒಂದು ಸಿನಿಮಾ ಮಾಡಬೇಕೆಂದು ಅವರಿಗೆ ಮೊದಲಿನಿಂದಲೂ ಆಸೆ ಇತ್ತಂತೆ. ಅದರ ಪ್ರತಿಫಲವಾಗಿ 'ಚಕ್ರವ್ಯೂಹ' ಎಂಬ ಸಿನಿಮಾ ಮೂಡಿಬರುತ್ತಿದೆ.

  English summary
  Director M Saravanan's much awaited Movie 'Chakravyuha' release Postponed. It was previously announced that the movie would be hitting the screens on April 22nd but now as per the latest details it got delayed for One week. And the movie is releasing on April 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X