»   » ವಾವ್.! 'ಚಕ್ರವ್ಯೂಹ' ಬಿಡುಗಡೆ ದಿನಾಂಕ ಪಕ್ಕಾ ಆಯ್ತು

ವಾವ್.! 'ಚಕ್ರವ್ಯೂಹ' ಬಿಡುಗಡೆ ದಿನಾಂಕ ಪಕ್ಕಾ ಆಯ್ತು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳೇ ಹಬ್ಬ ಆಚರಿಸಲು ತಯಾರಿ ನಡೆಸಿ. ಇದ್ಯಾಕಪ್ಪಾ ಹೀಗಂತೀದ್ದಾರೆ ಅನ್ಕೊಂಡ್ರ. ಯಾಕೆಂದ್ರೆ, ಅಪ್ಪು ಅವರ ಬಹುನಿರೀಕ್ಷಿತ 'ಚಕ್ರವ್ಯೂಹ' ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.

ಹೌದು ಏಪ್ರಿಲ್ 22 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಚಕ್ರವ್ಯೂಹ' ಸಿನಿಮಾ ಇಡೀ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಅದ್ದೂರಿಯಾಗಿ ತೆರೆ ಕಾಣುತ್ತಿದೆ.['ಚಕ್ರವ್ಯೂಹ' ಟ್ರೈಲರ್ ನಲ್ಲಿರುವ 10 ಕುತೂಹಲಕಾರಿ ಅಂಶಗಳು]


Puneeth Rajkumar's 'Chakravyuha' releasing on April 22nd

ಬಿಡುಗಡೆ ದಿನಾಂಕವನ್ನು ಖುದ್ದು ನಿರ್ಮಾಪಕ ಎನ್. ಕೆ ಲೋಹಿತ್ ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಚಿತ್ರಕ್ಕೆ ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿದ್ದು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಡಿಂಪಲ್ ಕ್ವೀನ್ ರಚಿತಾ ಅವರಿಗೆ ನಿಂತಲ್ಲಿ ನಿಲ್ಲಲಾಗುತ್ತಿಲ್ಲವಂತೆ]ಈಗಾಗಲೇ ಚಿತ್ರದ ಹಾಡುಗಳು ಮಾರ್ಕೆಟ್ ನಲ್ಲಿ ಹಿಟ್ ಆಗಿದ್ದು, ಟ್ರೈಲರ್ ನೋಡಿದ ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಚಿತ್ರದ ಬಿಡುಗಡೆಗೆ ಕಾತರದಿಂದ ಕಾದಿದ್ದಾರೆ.['ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?]


ಈ ಮೊದಲು ಯುಗಾದಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಅಂತ ಊರೆಲ್ಲಾ ಸುದ್ದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಏಪ್ರಿಲ್ 22 ರಂದು ಸಿನಿಮಾ ತೆರೆ ಕಾಣಲಿದೆ.[ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಪವರ್ ಸ್ಟಾರ್ 'ಚಕ್ರವ್ಯೂಹ']


'ಚಕ್ರವ್ಯೂಹ' ಚಿತ್ರದ ಫೊಟೋ ಆಲ್ಬಂ ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ...


-
-
-
-
-
-
-
-
-
-
-
-
-
-
-
-

English summary
Puneeth Rajkumar's most expected movie Chakravyuha will release on April 22. Producer NK Lohith makes an official announcement on Twitter. Kannada Actor Puneeth Rajkumar, Kannada Actress Rachita Ram in the lead role. The movie is directed by M Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada