For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಪವರ್ ಸ್ಟಾರ್ 'ಚಕ್ರವ್ಯೂಹ'

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 2016ರ ಬಹುನಿರೀಕ್ಷಿತ ಸಿನಿಮಾ 'ಚಕ್ರವ್ಯೂಹ' ಬಿಡುಗಡೆ ಹಂತದಲ್ಲಿದ್ದು, ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

  ಮಾರ್ಚ್ 12 ರಂದು ಚಕ್ರವ್ಯೂಹ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಭರ್ಜರಿಯಾಗಿ ನಡೆಯಲಿದೆ. ಇಡೀ ಕರ್ನಾಟಕದಾದ್ಯಂತ ಸುಮಾರು 500 ಚಿತ್ರಮಂದಿರಗಳಲ್ಲಿ, ಸಿನಿಮಾ ಅದ್ದೂರಿಯಾಗಿ ತೆರೆ ಕಾಣಲಿದೆ.[ಪುನೀತ್ ಕಟ್ಟಾ ಅಭಿಮಾನಿಗಳಿಗೆ 'ಕಿಚ್ಚು' ಹಚ್ಚಿಸುವ ಸುದ್ದಿ ಇದು!]

  ತೆಲುಗು ನಟ ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ ಆರ್ ಹಾಡಿರುವ 'ಗೆಳೆಯಾ ಗೆಳೆಯಾ' ಹಾಡು ಈಗಾಗಲೇ ಬಿಡುಗಡೆ ಆಗಿದ್ದು ಎಲ್ಲಾ ಕಡೆ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಜೊತೆಗೆ ಸಿನಿಮಾ ಬಿಡುಗಡೆಗೆ ಮೊದಲೇ ಚಿತ್ರದ ವಿತರಣಾ ಹಕ್ಕು ಭಾರಿ ಮೊತ್ತಕ್ಕೆ ಸೇಲ್ ಆಗಿದ್ದು ಈ ಚಿತ್ರದ ವಿಶೇಷ.

  ಎನ್.ಟಿ.ಆರ್ ಮಾತ್ರವಲ್ಲದೇ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ ಅವರು ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಈ ಚಿತ್ರದ ರೋಮ್ಯಾಂಟಿಕ್ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.

  ಮುಂಬೈ, ದೆಹಲಿ, ಹೈದರಾಬಾದ್, ಪುಣೆ, ಚೆನ್ನೈ ನಲ್ಲಿ ಸುಮಾರು 25 ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು, ವಿದೇಶದ ಸಿಂಗಪೂರ್, ಆಸ್ಟ್ರೇಲಿಯಾ, ಯುಎಇ, ಇಂಗ್ಲೇಡ್, ನ್ಯೂಜಿಲ್ಯಾಂಡ್, ಜಪಾನ್, ಯುಎಸ್ಎ, ಸೌತ್ ಆಫ್ರಿಕಾ, ಜರ್ಮನಿ, ಹಾಂಗ್ ಕಾಂಗ್, ಮಲೇಷ್ಯಾ ಮುಂತಾದೆಡೆ ಸುಮಾರು 50 ಸ್ಕ್ರೀನ್ ಗಳಲ್ಲಿ ಏಕಕಾಲದಲ್ಲಿ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.[ಪವರ್ ಸ್ಟಾರ್-ಡಿಂಪಲ್ ಕ್ವೀನ್ ರಚಿತಾದು ಕ್ಯೂಟ್ ಜೋಡಿ ಅಲ್ವಾ]

  ತಮಿಳು ಖ್ಯಾತ ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಅರುಣ್ ವಿಜಯ್ ಅವರು ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ. ನಿರ್ಮಾಪಕ ಎನ್.ಕೆ ಲೋಹಿತ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  ಮಾರ್ಚ್ 17 ರಂದು ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅದೇ ದಿನ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಇನ್ನು ಮಾರ್ಚ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  English summary
  Puneeth Rajkumar's most expected movie 'Chakravyuha' to release worldwide on March 25th. Directed by M Saravanan & produced by NK Lohith. Kannada Actor Puneeth Rajkumar, Kannada Actress Rachita Ram in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X