'ನಾಟಿ ಅಟ್ 40' ಅಪ್ಪುಗೆ ಇದೋ ಇಲ್ಲಿದೆ ಬಿಗ್ ಗಿಫ್ಟ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೆ ಹಾಗೆ. ಒಂಥರಾ ಹೈವೋಲ್ಟೇಜ್ ಕರೆಂಟ್ ಇದ್ಹಾಗೆ. ಅಪ್ಪು ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ 'ಪವರ್' ಅಭಿಮಾನಿಗಳ ಎದೆ ಬಡಿತ ಜೋರಾಗುತ್ತೆ. ವರ್ಷಕ್ಕೆ ಒಂದೇ ಸಿನಿಮಾ ಮಾಡುವ ಅಪ್ಪು ಕಳೆದ ವರ್ಷ 'ಪವರ್ ***' ಚಿತ್ರದ ಮೂಲಕ ಎಲ್ಲರನ್ನ ರಂಜಿಸಿದ್ದರು.
ಈ ವರ್ಷ 'ಮೈತ್ರಿ' ಮೂಲಕ ಖಾತೆ ಓಪನ್ ಮಾಡಿರುವ ಪುನೀತ್ ರಾಜ್ ಕುಮಾರ್ ಸದ್ಯದಲ್ಲೇ ' 'ರಣವಿಕ್ರಮ'ನಾಗಿ ತೆರೆಗೆ ಅಪ್ಪಳಿಸಲಿದ್ದಾರೆ. ಒಂದು ವರ್ಷದಿಂದಲೂ 'ಧೀರ ರಣವಿಕ್ರಮ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಬಾಲಿವುಡ್ ನ ಅದಾ ಶರ್ಮಾ, ವಿಕ್ರಮ್ ಸಿಂಗ್, ಟಾಲಿವುಡ್ ನ ಅಂಜಲಿ ಸೇರಿದಂತೆ 'ಧೀರ ರಣವಿಕ್ರಮ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಪವರ್ ಪಫ್ ಪೊಲೀಸ್ ಅಧಿಕಾರಿಯಾಗಿ ಪುನೀತ್ ಮಿಂಚಿದ್ದಾರೆ. ಎರಡು ವಿಭಿನ್ನ ಶೇಡ್ ಗಳಲ್ಲಿ ಅಪ್ಪು 'ರಣವಿಕ್ರಮ'ನಾಗುವುದಕ್ಕೆ ಕಾರಣ ನಿರ್ದೇಶಕ ಪವನ್ ಒಡೆಯರ್. ['ಧೀರ ರಣವಿಕ್ರಮ'ದ ವಿಲನ್ ಆಗಿ ಬಾಲಿವುಡ್ ವಿಕ್ರಮ್ ಸಿಂಗ್]
ಇತ್ತೀಚೆಗಷ್ಟೇ ಇಟಲಿಯಲ್ಲಿ ಕುಂಬಳಕಾಯಿ ಹೊಡೆದಿರುವ 'ಧೀರ ರಣವಿಕ್ರಮ' ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ಸಮಯದಲ್ಲಿ ನಿರ್ದೇಶಕ ಪವನ್ ಒಡೆಯರ್ ಒಂದು ಸ್ಪೆಷಲ್ ಪ್ಲಾನ್ ಮಾಡಿದ್ದಾರೆ. [ಇಟಲಿ ವಿಮಾನ ಹತ್ತಿದ ಪುನೀತ್ ರಾಜ್ ಕುಮಾರ್]

ಅದೇನಪ್ಪಾ ಅಂದ್ರೆ, ಮುಂದಿನ ತಿಂಗಳು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ 'ಧೀರ ರಣವಿಕ್ರಮ' ಚಿತ್ರವನ್ನ ರಿಲೀಸ್ ಮಾಡುವ ತಯಾರಿಯಲ್ಲಿದ್ದಾರೆ. ಮಾರ್ಚ್ 17 ರಂದು ಪುನೀತ್ ಗೆ 40ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ. ಅಣ್ಣಾವ್ರ ಮಗನ 40ನೇ ಜನ್ಮದಿನಕ್ಕೆ ಮತ್ತಷ್ಟು ಮೆರಗು ನೀಡುವುದಕ್ಕೆ ಮಾರ್ಚ್ 20 ರಂದು 'ಧೀರ ರಣವಿಕ್ರಮ' ಚಿತ್ರವನ್ನ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಪವನ್ ಒಡೆಯರ್ ನಿರ್ಧರಿಸಿದ್ದಾರೆ. [ಗುಂಡಿಗೆ ಗಟ್ಟಿಮಾಡಿಕೊಂಡು ನೋಡಿ 'ರಣವಿಕ್ರಮ' ಟೀಸರ್]
ಎಡಿಟಿಂಗ್, ರೀ ರೆಕಾರ್ಡಿಂಗ್ ಸೇರಿದಂತೆ ತಾಂತ್ರಿಕ ಕೆಲಸ ಇನ್ನೂ ಸಾಕಷ್ಟಿದೆ. ಅವೆಲ್ಲವೂ ನಿಗಧಿತ ಸಮಯದಲ್ಲಿ ಮುಗಿದು ಬೇಗ ಸೆನ್ಸಾರ್ ಆದ್ರೆ, ಮಾರ್ಚ್ 20ಕ್ಕೆ 'ಧೀರ ರಣವಿಕ್ರಮ' ರಿಲೀಸ್ ಆಗಲಿದೆ. ಅಂದ್ಮೇಲೆ, ನಾಟಿ @ 40 ಅಪ್ಪು ಮತ್ತವರ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಕ್ಕಿದ ಹಾಗೆ.


Click it and Unblock the Notifications











