Puneeth Rajkumar: 'ಮೇ'ನಲ್ಲಿ ತೆರೆಗೆ ಬರಲು ಸಜ್ಜಾಗ್ತಿದೆ ಅಪ್ಪು ಕನಸಿನ ಕೂಸು 'ಗಂಧದ ಗುಡಿ'!

ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ಅಂಗವಾಗಿ 'ಜೇಮ್ಸ್' ಸಿನಿಮಾ ರಿಲೀಸ್ ಆಗಿತ್ತು. ರಿಲೀಸ್ ಆಗಿ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಚಿತ್ರ ಇದು ಎಂದು ಫ್ಯಾನ್ಸ್ ಬೇಸರದ ಜೊತೆ ಜೊತೆಗೆ ಬಹಳ ಅದ್ಧೂರಿಯಾಗಿ ಸಿನಿಮಾವನ್ನು ವೆಲ್ಕಂ ಮಾಡಿದ್ರು. ಹಬ್ಬದ ರೀತಿಯಲ್ಲೆ ಸಂಭ್ರಮ ಸಡಗರದಿಂದ 'ಜೇಮ್ಸ್' ಚಿತ್ರವನ್ನು ಸೆಲೆಬ್ರೆಟ್ ಮಾಡಿದ್ರು. 'ಜೇಮ್ಸ್' ಸಿನಿಮಾದ ಬಳಿಕ ಮುಂದೇನು ಅಂತ ಚಿಂತಿಸುತ್ತಿದ್ದವರಿಗೆ ಉತ್ತರವೇ ಅಪ್ಪು ಕನಸಿನ ಕೂಸು 'ಗಂಧದ ಗುಡಿ'.

Recommended Video

Puneeth Rajkumar | 'ಗಂಧದ ಗುಡಿ' ರಿಲೀಸ್‌ಗೆ ಪಿಆರ್‌ಕೆ ಇಂದ ಬಂತು ಗುಡ್ ನ್ಯೂಸ್ | Gandhada Gudi Release Date

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು. ಇವರ ಕನಸಿನ ಕೂಸು 'ಗಂಧದ ಗುಡಿ'. ಕರ್ನಾಟಕದ ಹಲವು ಸುಂದರ ಪರಿಸರಗಳು, ಕಾಡುಗಳು, ಗುಡ್ಡ, ಬೆಟ್ಟಗಳನ್ನು ಸುತ್ತಿ ಅಲ್ಲಿನ ಸುಂದರ ದೃಶ್ಯಗಳು, ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆಹಿಡಿದು ತಯಾರಿಸಿರುವ ಒಂದು ದೀರ್ಘ ಚಿತ್ರ ಇದು. ಈ ಸಿನಿಮಾದ ಬಗ್ಗೆ ಫ್ಯಾನ್ಸ್ ಇದೀಗ ಕಾತುರರಾಗಿದ್ದು, ಇದನ್ನು ಕೂಡ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಜೊತೆಗೆ 'ಗಂಧದ ಗುಡಿ'ಯ ರಿಲೀಸ್ ಡೇಟ್ ತಿಳಿದುಕೊಳ್ಳುವ ಬಗ್ಗೆ ಉತ್ಸುಕರಾಗಿದ್ದಾರೆ.

ಇದೀಗ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಮೂಲಗಳ ಪ್ರಕಾರ ಈ 'ಗಂಧದ ಗುಡಿ' ಸಿನಿಮಾವು ಮೇ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೌದು 'ಗಂಧದ ಗುಡಿ' ಪುನೀತ್ ರಾಜ್‌ ಕುಮಾರ್‌ ಅವರ ಕನಸಿನ ಕೂಸು. ಬಹಳ ಆಸೆಯಿಂದ, ಇಷ್ಟ ಪಟ್ಟು ನಿಷ್ಠೆಯಿಂದ ಇದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ತನ್ನ ಕನಸನ್ನು ದೊಡ್ಡ ಪರದೆ ಮೇಲೆ ನೋಡುವ ಮುನ್ನವೇ ಎಲ್ಲರನ್ನೂ ಅಗಲಿದ್ದಾರೆ. ಹೀಗಾಗಿ 'ಗಂಧದ ಗುಡಿ'ಯನ್ನು ರಿಲೀಸ್ ಮಾಡಲು ಚಿಂತನೆ ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮೇ ಕೊನೆಯ ವಾರದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

Puneeth Rajkumars dream project Gandhada Gudi planning to release in May

ಪುನೀತ್ ರಾಜ್ ಕುಮಾರ್ 'ಗಂಧದ ಗುಡಿ' ಎಂದು ಹೆಸರನ್ನಿಟ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಚಿತ್ರ ನೈಜವಾಗಿ ಮೂಡಿಬರಬೇಕು ಅಂತ ಎಲ್ಲಿಯೂ ಬಣ್ಣ ಹಚ್ಚದೆ ನೈಜವಾಗಿಯೇ ನಟಿಸಿದ್ದಾರೆ. ಇದಕ್ಕೆ ಅಪ್ಪುಗೆ ಸಾಥ್ ನೀಡಿದವರು ನಿರ್ದೇಶಕ ಅಮೋಘ ವರ್ಷ. ಇನ್ನು ಪುನೀತ್ ನಿಧನದ ಬಳಿಕ 'ಗಂಧದ ಗುಡಿ'ಯ ಕೆಲಸ ನಿಲ್ಲಲಿಲ್ಲ. ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಅಪ್ಪು ಕನಸು ಸಾಕಾರಗೊಳಿಸುತ್ತಿದ್ದಾರೆ.

Puneeth Rajkumars dream project Gandhada Gudi planning to release in May

'ವೈಲ್ಡ್​ ಕರ್ನಾಟಕ' ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜೊತೆ ಸೇರಿ ಪುನೀತ್​ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಸಿದ್ಧಪಡಿಸಲು ಮುಂದಾಗಿದ್ದರು.'ಗಂಧದ ಗುಡಿ' ಸಿನಿಮಾವನ್ನು ರಾಜ್ಯದ ನಾನಾ ಕಡೆಗಳಿಗೆ ಭೇಟಿ ನೀಡಿ ಶೂಟ್​ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್​ ಅನ್ನು ನವೆಂಬರ್​ 1 ಕನ್ನಡ ರಾಜ್ಯೋತ್ಸವದಂದು ರಿಲೀಸ್ ಮಾಡಬೇಕು ಎಂದು ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಈ ಕಾರಣಕ್ಕೆ ಡಿಸೆಂಬರ್​ 6ಕ್ಕೆ ಟೀಸರ್ ರಿಲೀಸ್ ಆಗಿ ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಇದೀಗ 'ಗಂಧದ ಗುಡಿ' ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರಹಾಕಬೇಕಿದೆ.

More from Filmibeat

English summary
Puneeth Rajkumar's dream project 'Gandhada Gudi' planning to release in May. here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X