ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಸಾವಿನಲ್ಲೂ ಪುನೀತ್ ರಾಜ್‌ಕುಮಾರ್ ಸಾರ್ಥಕತೆಯನ್ನು ಮೆರೆದಿದ್ದಾರೆ. ಅಪ್ಪು ನೇತ್ರವನ್ನು ದಾನ ಮಾಡಲಾಗಿದೆ. ಅಪ್ಪು ಇಲ್ಲ ಅನ್ನೋ ನೋವಿನ ನಡುವೆಯೂ ರಾಜ್‌ಕುಟುಂಬ ಮಾತ್ರ ತಮ್ಮ ಕರ್ತವ್ಯ ಮರೆತಿಲ್ಲ. ಅಪ್ಪನ ಮಾತನ್ನು ತಪ್ಪದೇ ಪಾಲಿಸಿದ್ದಾರೆ. ಕರುಳು ಹಿಂಡೋ ಕಷ್ಟದಲ್ಲೂ ಕೊಟ್ಟ ಮಾತನ್ನು ಮರೆಯದೇ ಪಾಲಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನ ಮಾಡಲಾಗಿದೆ.
ಡಾ. ರಾಜ್‌ಕುಮಾರ್ ಕುಟುಂಬ ನೇತ್ರದಾನಕ್ಕೆ ಆದ್ಯತೆ ನೀಡಿತ್ತು. ಇನ್ನೂ ಡಾ.ರಾಜ್‌ಕುಮಾರ್ ಅವರ ಹೆಸರಲ್ಲಿ ನೇತ್ರ ಬ್ಯಾಂಕ್ ಇದೆ. ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿದ್ದರು, ನಂತರ ಪಾರ್ವತಮ್ಮ ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿದ್ದರು. ಈಗ ಅಪ್ಪ, ಅಮ್ಮನ ದಾರಿಯಲ್ಲಿ ಅಪ್ಪು ಸಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೇತ್ರಗಳನ್ನು ದಾನ ಮಾಡಲಾಗಿದೆ. ಸಂಕಷ್ಟದ ಮಧ್ಯೆಯೂ ರಾಜ್‌ಕುಟುಂಬ ತಮ್ಮ ಕರ್ತವ್ಯವನ್ನು ಪಾಲಿಸಿದೆ.

ಅಪ್ಪು ಹೋದ ಕೂಡಲೆ ಮೊದಲು ತಾವು ಮಾಡಬೇಕಾದ ಕರ್ತವ್ಯವನ್ನು ಪಾಲಿಸಿದ್ದಾರೆ. ನೇತ್ರದಾನವನ್ನು ಮಾಡಬೇಕು ಎಂದು ವೈದ್ಯರ ಬಳಿ ಹೇಳಿ ಮೊದಲು ಆ ಕೆಲಸ ಮಾಡಿಸಲಾಗಿದೆ. ಇನ್ನೂ ನೇತ್ರಾಲಯ ವೈದ್ಯರು ಕೂಡ ಈ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಅಪ್ಪು ಮರಣದ ಬಳಿಕ ಕೆಲವೇ ಹೊತ್ತಲ್ಲಿ ನೇತ್ರದಾನದ ಕಾರ್ಯ ಮುಗಿದಿದೆ. ಇನ್ನು ಎರಡು ದಿನಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕಣ್ಣು ಟ್ರ್ಯಾನ್ಸ್ ಪ್ಲ್ಯಾಂಟ್ ಮಾಡಲಾಗುತ್ತದೆ. ಪುನೀತ್ ರಾಜ್‌ಕುಮಾರ್ ಕಣ್ಣುಗಳಿಂದ ಬೆಳಕು ಪಡೆಯುವವರು ನಿಜಕ್ಕೂ ಪುಣ್ಯವಂತರು. ಈ ಕಷ್ಟ ಕಾಲದಲ್ಲಿ ಯಾರ ಇಂಥ ವಿಚಾರಗಳ ಬಗ್ಗೆ ತಲೆಕೊಡುವುದಿಲ್ಲ. ಆದರೆ ಈ ಸಂದರ್ಭದಲ್ಲೂ ತಮ್ಮ ಕರ್ತವ್ಯ ಮರೆಯದೆ ಪಾಲಿಸಿದ್ದಾರೆ.
ಪುನೀತ್ ಅಕಾಲಿಕ ಮರಣ ಎಲ್ಲರಿಗೂ ಶಾಕ್ ಕೊಟ್ಟಿದೆ. ಪುನೀತ್ ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಇಷ್ಟ ಆಗ್ತಿದ್ದ ವ್ಯಕ್ತಿ. ಹಾಗಾಗಿಯೇ ಈ ಸುದ್ದಿಯನ್ನು ಕೇಳಿ ಕರುನಾಡೆ ಕಣ್ಣೀರು ಹಾಕುತ್ತಿದೆ.


Click it and Unblock the Notifications











