For Quick Alerts
  ALLOW NOTIFICATIONS  
  For Daily Alerts

  ಇಂದು 'ಅಪ್ಪು' ಜನ್ಮದಿನ: ಪವರ್ ಸ್ಟಾರ್ ನಾಯಕರಾಗಿ 18 ವರ್ಷ

  |

  ಹುಟ್ಟಿದ ವರ್ಷವೇ ಸಿನಿಮಾದಲ್ಲಿ ಕಾಣಿಸಿಕೊಂಡ ಅಪರೂಪದ ಅವಕಾಶ ಪಡೆದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. 1976ರಲ್ಲಿ ತೆರೆಕಂಡ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಅವರು ಪುಟಾಣಿ ಮಗುವಾಗಿ ಕಾಣಿಸಿಕೊಂಡಿದ್ದರು. ನಂತರ ಸುಮಾರು 13 ಸಿನಿಮಾಗಳಲ್ಲಿ ಬಾಲನಟನಾಗಿ ಖ್ಯಾತಿ ಗಳಿಸಿದ್ದರು. 'ಪರಶುರಾಮ' ಅವರು ಕೊನೆಯದಾಗಿ ಬಾಲನಟನಾಗಿ ಕಾಣಿಸಿಕೊಂಡ ಚಿತ್ರ.

  ಅಣ್ಣಾವ್ರು ಒಂದು ಯುನಿವರ್ಸಿಟಿ ಇದಂತೆ . ರಾಜ್ ಕುಮಾರ ಬಗ್ಗೆ ಡಾಲಿ ಮಾತು.

  'ಪರಶುರಾಮ' ಚಿತ್ರದ ಬಳಿಕ ಚಿತ್ರರಂಗದಿಂದ ಮರೆಯಾಗಿದ್ದ ಪುನೀತ್ 13 ವರ್ಷದ ಬಳಿಕ ನಾಯಕ ನಟರಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟರು. 2002ರಲ್ಲಿ ತೆರೆ ಕಂಡ 'ಅಪ್ಪು' ಚಿತ್ರ, ಕನ್ನಡ ಸಿನಿಮಾರಂಗಕ್ಕೆ ಪವರ್ ಸ್ಟಾರ್‌ರನ್ನು ಪರಿಚಯಿಸಿತು. ಅಲ್ಲಿಂದ 18 ವರ್ಷಗಳಲ್ಲಿ ಪುನೀತ್ ನಿರಂತರವಾಗಿ ಅಭಿಮಾನಿಗಳನ್ನು ರಂಜಿಸುತ್ತಾ, ತಮ್ಮ ಸಾಮಾಜಿಕ ಕಾರ್ಯಗಳಿಂದ ರಾಜ್ ಕುಮಾರ್ ನೆರಳಿನಲ್ಲಿ ಸಾಗುತ್ತಾ ಮಾದರಿಯಾಗುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಅಂದರೆ ಅವರ 'ಅಪ್ಪು' ಚಿತ್ರದ ಹುಟ್ಟು ಹಬ್ಬ. ಮುಂದೆ ಓದಿ...

  2002ರಲ್ಲಿ ಬಿಡುಗಡೆ

  2002ರಲ್ಲಿ ಬಿಡುಗಡೆ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಟನಾಗಿ ಮರು ಪ್ರವೇಶ ಪಡೆದು ಏಪ್ರಿಲ್ 26, 2020ಕ್ಕೆ ಭರ್ತಿ 18 ವರ್ಷ. ಪುನೀತ್ ಮೊದಲ ಬಾರಿ ನಾಯಕರಾಗಿ ನಟಿಸಿದ್ದ 'ಅಪ್ಪು' 2002ರ ಏಪ್ರಿಲ್ 26ರಂದು ಬಿಡುಗಡೆಯಾಗಿತ್ತು.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ವಿಶೇಷ ದಿನ: ಯಾಕೆ?ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ವಿಶೇಷ ದಿನ: ಯಾಕೆ?

  ಪುರಿ ಜಗನ್ನಾಥ್ ನಿರ್ದೇಶನ

  ಪುರಿ ಜಗನ್ನಾಥ್ ನಿರ್ದೇಶನ

  ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, 'ಅಪ್ಪು' ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ನಾಯಕ ನಟರನ್ನಾಗಿ ಪರಿಚಯಿಸಿದ್ದರು. ಇದೇ ಚಿತ್ರದ ಮೂಲಕ ನಟಿ ರಕ್ಷಿತಾ ಎಂಬ ತಾರೆ ಕೂಡ ಚಿತ್ರರಂಗಕ್ಕೆ ಪರಿಚಯವಾದರು. ಶ್ರೀನಿವಾಸಮೂರ್ತಿ, ಸುಮಿತ್ರಾ, ಅಶೋಕ್, ಸತ್ಯಜಿತ್, ಅವಿನಾಶ್ ಮುಂತಾದವರು ನಟಿಸಿದ್ದ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿತ್ತು.

  ರೀಮೇಕ್‌ನಲ್ಲಿಯೂ ದಾಖಲೆ ಬರೆದ ಅಪ್ಪು

  ರೀಮೇಕ್‌ನಲ್ಲಿಯೂ ದಾಖಲೆ ಬರೆದ ಅಪ್ಪು

  'ಅಪ್ಪು' ಸಿನಿಮಾ ತೆಲುಗು, ತಮಿಳು, ಬಂಗಾಳಿ ಮತ್ತು ಬಾಂಗ್ಲಾದೇಶ ಬಂಗಾಳಿ ಭಾಷೆಗಳಿಗೆ ರೀಮೇಕ್ ಆಗಿತ್ತು. 1986ರಲ್ಲಿ ಬಿಡುಗಡೆಯಾಗಿದ್ದ ರಾಜ್ ಕುಮಾರ್ ಅವರ 'ಅನುರಾಗ ಅರಳಿತು' ಚಿತ್ರದ ಬಳಿಕ ಬಾಂಗ್ಲಾದೇಶಿ ಬಂಗಾಳಿಗೆ ರೀಮೇಕ್ ಆದ ಮೊದಲ ಚಿತ್ರವಿದು. ಹಾಗೆಯೇ ಸ್ಕೂಲ್ ಮಾಸ್ಟರ್ ಮತ್ತು ಅನುರಾಗ ಅರಳಿತು ಬಳಿಕ ನಾಲ್ಕು ಭಾಷೆಗಳಿಗೆ ರೀಮೇಕ್ ಆಗಿದ್ದ ಮೂರನೇ ಸಿನಿಮಾ.

  ಯುವಕರನ್ನೂ ನಾಚಿಸುತ್ತದೆ ಪುನೀತ್ ರಾಜ್‌ಕುಮಾರ್ ಫಿಟ್ನೆಸ್: ವೈರಲ್ ವಿಡಿಯೋಯುವಕರನ್ನೂ ನಾಚಿಸುತ್ತದೆ ಪುನೀತ್ ರಾಜ್‌ಕುಮಾರ್ ಫಿಟ್ನೆಸ್: ವೈರಲ್ ವಿಡಿಯೋ

  ಅಭಿ ಚಿತ್ರಕ್ಕೆ 17 ವರ್ಷ

  ಅಭಿ ಚಿತ್ರಕ್ಕೆ 17 ವರ್ಷ

  'ಅಪ್ಪು'ಗೆ 18 ತುಂಬಿದ ಈ ದಿನವನ್ನು ಪುನೀತ್ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಡಾ. ರಾಜ್ ಕುಮಾರ್ ಅವರ ಜನ್ಮದಿನವಾದ ನಿನ್ನೆ (ಏಪ್ರಿಲ್ 25), ಪುನೀತ್ ಅವರ ಎರಡನೆಯ ಸಿನಿಮಾ 'ಅಭಿ' ಬಿಡುಗಡೆಯಾಗಿ 17 ವರ್ಷ. ದಿನೇಶ್ ಬಾಬು ನಿರ್ದೇಶನದ ಈ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ 2003ರ ಏಪ್ರಿಲ್ 25ರಂದು ಪರಿಚಯವಾಗಿದ್ದರು.

  ಸಿಕ್ಸ್ ಪ್ಯಾಕ್ ಅಲ್ಲ, ಫ್ಯಾಮಿಲಿ ಪ್ಯಾಕ್ ಮಾಡುತ್ತಿದ್ದಾರೆ ಪವರ್ ಸ್ಟಾರ್ ಪುನೀತ್ಸಿಕ್ಸ್ ಪ್ಯಾಕ್ ಅಲ್ಲ, ಫ್ಯಾಮಿಲಿ ಪ್ಯಾಕ್ ಮಾಡುತ್ತಿದ್ದಾರೆ ಪವರ್ ಸ್ಟಾರ್ ಪುನೀತ್

  English summary
  Power Star Puneeth Rajkumar's first movie as a hero Appu has completed 18 years on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X