'ಗಂಧದ ಗುಡಿ' ಪ್ರೀ ಬುಕಿಂಗ್ ಆರಂಭ, ತಲೆ ಎತ್ತುತ್ತಿವೆ ಅಪ್ಪು ಕಟೌಟ್‌ಗಳು

ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಇನ್ನು ನಾಲ್ಕು ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಈ ಅಪರೂಪದ ಡಾಕ್ಯು-ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ತಯಾರಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೆದಿದ್ದು, ಚಿತ್ರರಂಗದ ದಿಗ್ಗಜರೆಲ್ಲ ಒಟ್ಟು ಸೇರಿ ಅಪ್ಪುವನ್ನು ನೆನಪು ಮಾಡಿಕೊಂಡರಷ್ಟೆ ಅಲ್ಲದೆ, 'ಗಂಧದ ಗುಡಿ' ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯಲೆಂದು ಹಾರೈಸಿದರು.

'ಗಂಧದ ಗುಡಿ' ಸಿನಿಮಾವು ಅಕ್ಟೋಬರ್ 28 ರಂದು ತೆರೆಗೆ ಬರಲಿದ್ದು, ಸಿನಿಮಾಕ್ಕೆ ಪ್ರೀ ಬುಕಿಂಗ್ ಇಂದಿನಿಂದ ಆರಂಭವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಈಗಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

Puneeth Rajkumars Gandhada Gudi Movie Pre Ticket Booking Open

ಪ್ರಸ್ತುತ, ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಪ್ರೀ ಟಿಕೆಟ್ ಬುಕಿಂಗ್ ಮಾತ್ರವೇ ಆರಂಭಗೊಂಡಿದೆ. ಬೆಂಗಳೂರಿನ ಇತರ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ಬುಕಿಂಗ್ ನಾಳೆ (ಅಕ್ಟೋಬರ್ 25)ಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರವು, 'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿರುವ ಕಾರಣ ಟಿಕೆಟ್ ಬೆಲೆ ಬಹಳ ಕಡಿಮೆ ಇರಲಿದೆ. ಈಗ ಪ್ರೀ ಬುಕಿಂಗ್ ಓಪನ್ ಆಗಿರುವ ನರ್ತಕಿ ಚಿತ್ರಮಂದಿರದಲ್ಲಿ 'ಗಂಧದ ಗುಡಿ' ಸಿನಿಮಾದ ಟಿಕೆಟ್ ಬೆಲೆ ಕೇವಲ 100 ರುಪಾಯಿ ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಹ ಇದೇ ಬೆಲೆ ಅಥವಾ ಇದಕ್ಕಿಂತ ತುಸುವಷ್ಟೆ ಹೆಚ್ಚು ಬೆಲೆಗೆ 'ಗಂಧದ ಗುಡಿ' ಸಿನಿಮಾ ವೀಕ್ಷಿಸಬಹುದಾಗಿದೆ.

ನರ್ತಕಿ ಚಿತ್ರಮಂದಿರದ ಬಳಿ ಈಗಾಗಲೇ ಬಹಳ ದೊಡ್ಡದಾಗಿ ಪುನೀತ್ ರಾಜ್‌ಕುಮಾರ್ ಕಟೌಟ್ ನಿರ್ಮಿಸಿ, ಸಿನಿಮಾ ಬಿಡುಗಡೆಗೆ ಕಾಯಲಾಗುತ್ತಿದೆ. ಅಪ್ಪು ಅಭಿಮಾನಿಗಳು, ಬೆಂಗಳೂರು ಮಾತ್ರವೇ ಅಲ್ಲದೆ ರಾಜ್ಯದಾದ್ಯಂತ 'ಗಂಧದ ಗುಡಿ' ಸಿನಿಮಾವನ್ನು ಖುಷಿಯಿಂದ ಸ್ವಾಗತಿಸಲು ತಯಾರಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆ ದಿನದಂದು ಹಮ್ಮಿಕೊಳ್ಳಲಾಗಿದೆ.

'ಗಂಧದ ಗುಡಿ' ಡಾಕ್ಯು ಸಿನಿಮಾವು ಸಾಮಾನ್ಯ ಸಿನಿಮಾ ಅಲ್ಲ. ಇದು ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದು, ಕರ್ನಾಟಕದ ಮೂಲೆ ಮೂಲೆಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು, ಅಲ್ಲಿನ ಜನ-ಜೀವನ, ಸಂಸ್ಕೃತಿಯನ್ನು ಸೆರೆ ಹಿಡಿದು ಅದನ್ನೆಲ್ಲ ಒಟ್ಟು ಮಾಡಿ ಕರ್ನಾಟಕದ ಸೌಂದರ್ಯವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಅಪ್ಪು. ಈ ಸಾಹಸದಲ್ಲಿ ಅವರಿಗೆ ಅಮೋಘವರ್ಷ ಸಹ ಜೊತೆಯಾಗಿದ್ದಾರೆ.

More from Filmibeat

English summary
Puneeth Rajkumar's Gandhada Gudi docu-cinema pre ticket booking open. Movie is releasing on October 28.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X