twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ರಾಜ್‌ಕುಮಾರ್ ಸ್ಪೂರ್ತಿ: ಮೈಸೂರಲ್ಲಿ ಹೆಚ್ಚಾಯಿತು ನೇತ್ರದಾನಿಗಳ ಸಂಖ್ಯೆ

    By ಮೈಸೂರು ಪ್ರತಿನಿಧಿ
    |

    ಪುನೀತ್ ಇಂದು ಜಗತ್ತಿನಲ್ಲಿ ಇಲ್ಲವಾದರೂ ಅವರ ದೆಸೆಯಿಂದ ಹಲವರು ಇಂದು ಜಗತ್ತನ್ನು ನೋಡುವಂತಾಗಿದೆ. ಪುನೀತ್ ರಾಜ್‌ಕುಮಾರ್ ದಾನ ಮಾಡಿದ ಕಣ್ಣುಗಳಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಿದ್ದಾರೆ ನಾರಾಯಣ ನೇತ್ರಾಲಯದ ವೈದ್ಯರು.

    ಪುನೀತ್ ಸ್ವತಃ ನೇತ್ರದಾನ ಮಾಡಿದ್ದರಲ್ಲದೆ, ಅವರು ಕಾಲವಾದ ಮೇಲೆ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಾವಿರಾರು ಮಂದಿ ನೇತ್ರದಾನ ಮಾಡಿದರು. ಪುನೀತ್ ಕಾಲವಾಗಿ ವರ್ಷವಾಗುತ್ತಾ ಬಂದಿದ್ದರೂ ನೇತ್ರದಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ ಬದಲಿಗೆ ಹೆಚ್ಚುತ್ತಲೇ ಸಾಗುತ್ತಿದೆ.

    ಡಾ.ರಾಜ್‌ ಅಭಿಮಾನಿಗಳನ್ನು ದೇವರು ಅಂದ್ರು: ದರ್ಶನ್, ಸುದೀಪ್, ಅಪ್ಪು ಕೊಟ್ಟ ಸ್ಥಾನವೇನು?ಡಾ.ರಾಜ್‌ ಅಭಿಮಾನಿಗಳನ್ನು ದೇವರು ಅಂದ್ರು: ದರ್ಶನ್, ಸುದೀಪ್, ಅಪ್ಪು ಕೊಟ್ಟ ಸ್ಥಾನವೇನು?

    ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಮೈಸೂರಿನಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಆ ಮೂಲಕ ಹಲವರು ಅಂಧರ ಬದುಕಿನಲ್ಲಿ ಬೆಳಕು ನೀಡುತ್ತಿದ್ದಾರೆ.

    ಜಿಲ್ಲೆಯ ಮಾಹಿತಿ ಪ್ರಕಾರ ಕಳೆದ ಏಳು ತಿಂಗಳಲ್ಲಿ 3,200 ಕ್ಕೂ ಹೆಚ್ಚು ಮಂದಿ ಕಣ್ಣಿನ ದಾನ ಮಾಡಲಿಚ್ಚಿಸಿ ಒಪ್ಪಿಗೆ ಪತ್ರ ನೀಡಿದ್ದಾರೆ. ಎಂಟು ತಿಂಗಳಲ್ಲಿ 88 ಮಂದಿ ಮೃತಪಟ್ಟವರ ನೇತ್ರಗಳನ್ನು ಅವರ ಕುಟುಂಬದವರು ದಾನ ಮಾಡಿ ನೂರಾರು ಮಂದಿಗೆ ಬೆಳಕಾಗಿದ್ದಾರೆ. ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಮರಣ ಹೊಂದಿದವರ ಕಣ್ಣು (ಅಯ್ ಬಾಲ್) ದಾನ ಮಾಡುವ ಪ್ರಮಾಣ ಹೆಚ್ಚಾಗಿದೆ.

    2021ರ ಅಕ್ಟೋಬರ್‌ನಲ್ಲಿ ಮೃತಪಟ್ಟ 14, ಡಿಸೆಂಬರ್‌ನಲ್ಲಿ 16, 2022ರ ಜನವರಿಯಲ್ಲಿ 12, ೆಬ್ರವರಿಯಲ್ಲಿ 10, ಮಾರ್ಚ್‌ನಲ್ಲಿ 16, ಏಪ್ರಿಲ್‌ನಲ್ಲಿ 6, ಮೇ ತಿಂಗಳಲ್ಲಿ 6 ಹಾಗೂ ಜೂನ್‌ನಲ್ಲಿ 8 ಮಂದಿಯ ನೇತ್ರಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಕಣ್ಣಿನ ದೃಷ್ಟಿ ಸಂಪೂರ್ಣ ನಷ್ಟವಾಗಿದೆ ಎಂದು ಕಂಡುಬಂದ ಮೊದಲು ನೋಂದಾಯಿಸಿಕೊಂಡಿರುವ ಲಾನುಭವಿಗಳಿಗೆ ಜೋಡಣೆ ಮಾಡಲಾಗಿದೆ. ಉಳಿದವು, ಅಗತ್ಯವಿರುವ ಸರಕಾರಿ ಆಸತ್ರೆಗಳಿಗೆ ಕಳುಹಿಸಿ ಅಲ್ಲಿ ಅಗತ್ಯವಿರುವವರಿಗೆ ಅಳವಡಿಸಲಾಗುತ್ತಿದೆ.

    ಯಾರು ಬೇಕಾದರು ನೇತ್ರದಾನಕ್ಕೆ ನೊಂದಾಯಿಸಿಕೊಳ್ಳಬಹುದು

    ಯಾರು ಬೇಕಾದರು ನೇತ್ರದಾನಕ್ಕೆ ನೊಂದಾಯಿಸಿಕೊಳ್ಳಬಹುದು

    ಮೊದಲೇ ಕಣ್ಣಿನ ದಾನ ಮಾಡಲು ನೋಂದಣಿ ಮಾಡಿದ್ದವರು ಮೃತಪಟ್ಟಲ್ಲಿ 8 ಗಂಟೆಯೊಳಗಾಗಿ ಕಣ್ಣುಗಳನ್ನು ಸಂಗ್ರಹಿಸಲಾಗುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆ ಹಾಗೂ ಯಾವುದೇ ಇನ್ನಿತರ ಸೋಂಕು ಇದ್ದವರನ್ನು ಹೊರತುಪಡಿಸಿ ಉಳಿದಂತೆ ಎಲ್ಲ ವಯಸ್ಸಿನ ನೋಂದಾಯಿತ ಮೃತ ಪಟ್ಟವರ ದೇಹದಿಂದ ಕಣ್ಣುಗಳನ್ನು ಸಂಗ್ರಹಿಸಲಾಗುವುದು. ಕಣ್ಣುಗಳ ದಾನ ಮಾಡಲು ಬಯಸುವ ಕುಟುಂಬದವರು ಕೆ.ಆರ್.ಆಸ್ಪತ್ರೆ ನೇತ್ರ ಭಂಡಾರದ ನೇತ್ರಾಧಿಕಾರಿ ಡಾ.ಚಂದ್ರಕಲಾ ಅವರನ್ನು ಸಂಪರ್ಕಿಸಬಹುದು.

    ಪುನೀತ್ ಸ್ಪೂರ್ತಿಯಿಂದ ನೇತ್ರದಾನ ಕ್ರಾಂತಿ

    ಪುನೀತ್ ಸ್ಪೂರ್ತಿಯಿಂದ ನೇತ್ರದಾನ ಕ್ರಾಂತಿ

    ''ಎಂಟು ತಿಂಗಳ ಹಿಂದೆ ನಡೆದ ಪುನೀತ್ ರಾಜ್‌ಕುಮಾರ್ (2021ರ ಅಕ್ಟೋಬರ್) ಅವರ ಕಣ್ಣು ದಾನದಿಂದ ನಾಲ್ಕು ಮಂದಿಗೆ ದೃಷ್ಟಿ ಬಂದಿತ್ತು. ಈ ಸೇವಾ ಕಾರ್ಯ ನಿಜಕ್ಕೂ ಸಾರ್ವಜನಿಕರ ಕಣ್ಣು ತೆರೆಸಿದೆ. ಇತ್ತೀಚೆಗೆ ಮೃತಪಟ್ಟವರ ಕಡೆಯವರು ಕಣ್ಣುದಾನ ಮಾಡಲು ಹೆಚ್ಚಾಗಿ ಮುಂದೆ ಬರುತ್ತಿದ್ದಾರೆ. ಹೀಗಾಗಿ ಕಳೆದ 8 ತಿಂಗಳಲ್ಲಿ ಹೆಚ್ಚುವರಿಯಾಗಿ ನೂರಾರು ಮಂದಿಗೆ ದೃಷ್ಟಿ ನೀಡಲು ಸಾಧ್ಯವಾಗಿದೆ'' ಎಂದು ಕೆ.ಆರ್.ಆಸ್ಪತ್ರೆ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಕೆ.ಸತೀಶ್ ತಿಳಿಸಿದರು.

    ಅಂಗಾಂಗ ದಾನ ಮಾಡುವವರ ಸಂಖ್ಯೆಯಲ್ಲೂ ಹೆಚ್ಚಳ

    ಅಂಗಾಂಗ ದಾನ ಮಾಡುವವರ ಸಂಖ್ಯೆಯಲ್ಲೂ ಹೆಚ್ಚಳ

    ನಟ ಪುನೀತ್ ರಾಜ್‌ಕುಮಾರ್ ನಿಧನದ ನಂತರ ಅವರ ಕಣ್ಣಿನ ದಾನದಿಂದ ನಾಲ್ಕು ಜನರಿಗೆ ದೃಷ್ಟಿ ಬಂದಿತ್ತು. ಇದರಿಂದ ಸಾಕಷ್ಟು ಮಂದಿ ಅವರ ಅಭಿಮಾನಿಗಳು, ಸಾರ್ವಜನಿಕರು ಸ್ಫೂರ್ತಿಗೊಂಡಿದ್ದಾರೆ. ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಅಂಗಾಂಗಗಳು ಬೇರೆಯವರಿಗೆ ಅನುಕೂಲವಾಗುವುದಾರೆ ಬಳಸಿಕೊಳ್ಳಲಿ ಎಂಬ ಅರಿವು ಮೂಡಿದೆ. ಹೀಗಾಗಿ ಅಂಗಾಂಗ ದಾನ ಮಾಡುವ ಪ್ರಕ್ರಿಯೆ ಹೆಚ್ಚಾಗಿದೆ. ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾಗಿರುವ ಜೀವಸಾರ್ಥಕತೆಯಲ್ಲಿ 2017ರಿಂದ 2021ರ ಅಕ್ಟೋಬರ್‌ವರೆಗೂ 2775 ಮಂದಿ ಅಂಗಾಂಗ ದಾನ ಮಾಡಿದ್ದರು. ಆದರೆ ಅಪ್ಪು ಅಗಲಿಕೆ ಬಳಿಕ ಕೇವಲ ಮೂರು ತಿಂಗಳಲ್ಲಿ 7641 ಮಂದಿ ಅಂಗಾಂಗ ದಾನಕ್ಕೆ ನೊಂದಾವಣಿ ಮಾಡಿಕೊಂಡಿದ್ದರು.

    ಮೂರು ದಶಕದ ನೊಂದಾವಣಿ ನಾಲ್ಕೇ ತಿಂಗಳಲ್ಲಿ!

    ಮೂರು ದಶಕದ ನೊಂದಾವಣಿ ನಾಲ್ಕೇ ತಿಂಗಳಲ್ಲಿ!

    ಪುನೀತ್ ರಾಜ್‌ಕುಮಾರ್ ನಿಧನರಾದ ಬಳಿಕ ಕೇವಲ ನಾಲ್ಕು ತಿಂಗಳಲ್ಲಿ ಇಡೀಯ ರಾಜ್ಯದಲ್ಲಿ ಕೇವಲ ನಾರಾಯಣ ನೇತ್ರಾಲಯ ಒಂದರಲ್ಲಿಯೇ 70,000 ಮಂದಿ ನೇತ್ರದಾನಕ್ಕೆ ನೊಂದಾಯಿಸಿಕೊಂಡಿದ್ದರು. ಮೂರು ದಶಕಗಳಲ್ಲಿ ಆಗದಿದ್ದಷ್ಟು ನೇತ್ರದಾನ ನೊಂದಾವಣಿ ಕೇವಲ ನಾಲ್ಕು ತಿಂಗಳಲ್ಲಿ ಆಗಿಬಿಟ್ಟಿತ್ತು! ನಾರಾಯಣ ನೇತ್ರಾಲಯ ಆಸ್ಪತ್ರೆ ಆರಂಭವಾಗಿನಿಂದಲೂ 28 ವರ್ಷದಲ್ಲಿ 68 ಸಾವಿರ ನೇತ್ರದಾನಕ್ಕೆ ನೊಂದಾವಣಿ ಮಾಡಿಸಿದ್ದರು. ಆದರೆ ಅಪ್ಪು ಅಗಲಿದ ಕೇವಲ ನಾಲ್ಕು ತಿಂಗಳಲ್ಲಿ 70 ಸಾವಿರಕ್ಕೂ ಹೆಚ್ಚು ಮಂದಿ ನೊಂದಾವಣಿ ಮಾಡಿಸಿಕೊಂಡರು.

    English summary
    Puneeth Rajkumar's inspiration eye donation increased in Mysore says Mysore KR Hospital Eye section chief Dr Satish.
    Thursday, July 28, 2022, 21:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X