ಅಪ್ಪು ಫ್ಯಾನ್ಸ್ ಅಟೆನ್ಷನ್ ಪ್ಲೀಸ್: ಬರ್ತಿದೆ ಬೋಲೋ ಬೋಲೋ 'ಜೇಮ್ಸ್'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಜೇಮ್ಸ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಯುವರತ್ನ ಚಿತ್ರದ ಟಾಕಿ ಭಾಗ ಮುಗಿಸಿರುವ ಅಪ್ಪು ಈಗ ಜೇಮ್ಸ್ ಆಗಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಅಂದ್ಹಾಗೆ ಜೇಮ್ಸ್ ಚಿತ್ರದಿಂದ ಈಗ ಬಿಗ್ ಅಪ್ ಡೇಟ್ ಒಂದು ಹೊರಬಿದ್ದಿದೆ.

ಹೌದು, ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಚಿತ್ರದ ಮೋಷನ್ ಪೋಸ್ಟರ್ ಅಭಿಮಾನಿಗಳ ಮುಂದೆ ಬರಲಿದೆ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೆ ದಿನಗಳು ಭಾಕಿ ಇದೆ.

ಇದೇ ತಿಂಗಳು 17ಕ್ಕೆ ಪವರ್ ಸ್ಟಾರ್ ಹುಟ್ಟುಹಬ್ಬ. ಅವತ್ತು ಅಭಿಮಾನಿಗಳಿಗೆ ಸಾಕಷ್ಟು ಸರ್ಪ್ರೈಸ್ ಗಳು ಕಾದಿವೆ. ಅಂದ್ಹಾಗೆ ಜೇಮ್ಸ್ ಚಿತ್ರದಿಂದ ರಿಲೀಸ್ ಆಗುತ್ತಿರುವ ಮೋಷನ್ ಪೋಸ್ಟರ್ ಬೋಲೋ ಬೋಲೋ ಜೇಮ್ಸ್ ಎನ್ನುವ ಟೈಟಲ್ ಇದೆ. ಏನಿದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Puneeth Rajkumars James Movie Motion Poster Release On March 17

ಜೇಮ್ಸ್ ಅಡ್ಡಾದಿಂದ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಚ್ಚೆ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಈಗಾಗಲೆ ಟ್ರೆಂಡ್ ಸೃಷ್ಟಿಯಾಗಿದೆ.

ಇತ್ತೀಚಿಗಷ್ಟೆ ಜೇಮ್ಸ್ ಅಡ್ಡಾದಿಂದ ಪವರ್ ಸ್ಟಾರ್ ಪವರ್ ಫುಲ್ ಲುಕ್ ನ ಫೋಟೋ ರಿವೀಲ್ ಆಗಿತ್ತು. ಸ್ಟೈಲಿಶ್ ಕಾರಿನ ಜೊತೆ ಫೈಟ್ ಗೆ ರೆಡಿಯಾಗಿ ನಿಂತಿರುವ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿತ್ತು. ಜೇಮ್ಸ್ ಚಿತ್ರದ ಮೊದಲ ಲುಕ್ ಬಿಟ್ಟರೆ ಚಿತ್ರದಿಂದ ಯಾವುದೆ ಅಪ್ ಡೇಟ್ ಸಿಕ್ಕಿರಲಿಲ್ಲ. ಆದರೀಗ ಹುಟ್ಟುಹಬ್ಬಕ್ಕೆ ಜೇಮ್ಸ್ ಮೋಷನ್ ಪೋಸ್ಟರ್ ಜೊತೆ ಬರುತ್ತಿರುವುದನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಅಂದ್ಹಾಗೆ ಅಪ್ಪು ಹುಟ್ಟುಹಬ್ಬದ ದಿನ ಯುವರತ್ನ ಚಿತ್ರದದಿಂದನೂ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಕಾದಿದೆ. ಯುವರತ್ನ ಚಿತ್ರದ ಟೀಸರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣ ಭಾಕಿ ಉಳಿದಿದೆ. ಹಾಡನ್ನು ಸೆರೆಹಿಡಿಯಲು ವಿದೇಶಕ್ಕೆ ಹೋಗಬೇಕಿದ್ದ ಚಿತ್ರತಂಡ ಕೊರೊನಾ ವೈರಸ್ ಕಾರಣ ರದ್ದು ಮಾಡಿದೆ. ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Kannada Actor Puneeth Rajkumar starrer James movie motion poster will release on March 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X