ಸ್ವಾತಂತ್ರ್ಯ ದಿನಕ್ಕೆ 'ಜೇಮ್ಸ್' ಆಗಿ ಸೈನಿಕರ ಜೊತೆ ಬಂದ ಅಪ್ಪು

ನಟ ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾದ ವಿಶೇಷ ಪೋಸ್ಟರ್ ಒಂದನ್ನು ಸ್ವಾತಂತ್ರ್ಯ ದಿನಾಚರಣೆ ದಿನ ಬಿಡುಗಡೆ ಮಾಡಲಾಗಿದೆ.

ಪೋಸ್ಟರ್‌ನಲ್ಲಿ ಕಪ್ಪು ಧಿರಿಸು, ಕಪ್ಪು ಕನ್ನಡಕ ಧರಿಸಿ ಸೂಪರ್ ಆಗಿ ಕಾಣುತ್ತಿದ್ದಾರೆ ಪುನೀತ್ ರಾಜ್‌ಕುಮಾರ್. ಪೋಸ್ಟರ್‌ನಲ್ಲಿ ಅಪ್ಪು ಸುತ್ತ ಗನ್‌ಗಳನ್ನು ಹಿಡಿದ ಸೈನಿಕರು ಸಹ ಇದ್ದಾರೆ.

'ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್' ಎಂದು ಪೋಸ್ಟರ್‌ ಮೂಲಕ ಯೋಧರಿಗೆ ಸಲಾಂ ಹೇಳಿರುವ ಚಿತ್ರತಂಡ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳನ್ನು ಸಹ ಕೋರಿದೆ.

Puneeth Rajkumars James Movie Poster Released

ಪುನೀತ್ ರಾಜ್‌ಕುಮಾರ್ ನಟಿಸುತ್ತಿರುವ 'ಜೇಮ್ಸ್' ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಕಿಶೋರ್ ಪಾತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ಈ ಹಿಂದೆ 'ರಾಜಕುಮಾರ' ಸಿನಿಮಾದಲ್ಲಿಯೂ ಪುನೀತ್ ಜೊತೆಗೆ ಪ್ರಿಯಾ ನಟಿಸಿದ್ದರು. ಗಣೇಶ್ ನಟನೆಯ 'ಆರೆಂಜ್' ಸಿನಿಮಾದಲ್ಲಿಯೂ ಪ್ರಿಯಾ ನಾಯಕಿಯಾಗಿದ್ದರು.

ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನು ಪ್ರಭಾಕರ್ ವಿಲನ್‌ಗಳಾಗಿ ಖ್ಯಾತಿಗಳಿಸಿರುವ ಮುಖೇಶ್ ರಿಷಿ, ಆದಿತ್ಯ ಮೆನನ್ ಸಹ ನಟಿಸುತ್ತಿದ್ದಾರೆ. ರಂಘಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾವು ಕೆಲವೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

'ಜೇಮ್ಸ್' ಸಿನಿಮಾದ ಹೊರತಾಗಿ ಪುನೀತ್ ರಾಜ್‌ಕುಮಾರ್ 'ದ್ವಿತ್ವ' ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು ಸಿನಿಮಾಕ್ಕೆ ತ್ರಿಶಾ ನಾಯಕಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದೆ. ಅದರ ಬಳಿಕ ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಲಿದ್ದಾರೆ. ಆ ಸಿನಿಮಾದ ಮೇಲೂ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅದರ ಬಳಿಕ 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ಅಭಿನಯಿಸಲಿದ್ದಾರೆ. ಅದರ ಬಳಿಕ ಮತ್ತೆ ನಿರ್ದೇಶಕ ಸಂತೋಶ್ ಆನಂದ್‌ರಾಮ್ ಜೊತೆಗೆ ಸಿನಿಮಾವೊಂದರಲ್ಲಿ ಪುನೀತ್ ತೊಡಗಿಕೊಳ್ಳಲಿದ್ದಾರೆ. ಒಟ್ಟಾರೆ ಪುನೀತ್ ರಾಜ್‌ಕುಮಾರ್ ಬಹಳ ಬ್ಯುಸಿಯಾಗಿದ್ದಾರೆ.

More from Filmibeat

English summary
Actor Puneeth Rajkumar acted James movie poster released on Independence Day. Movie directed by Chetan Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X