ದೇಶದ ಹಲವು ನಗರಗಳಲ್ಲಿ 'ಜೇಮ್ಸ್' ಪ್ರೀ ರಿಲೀಸ್ ಕಾರ್ಯಕ್ರಮ

ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Recommended Video

ಜೇಮ್ಸ್ ರಿಲೀಸ್‌ ದಿನದ ಟೈಮ್‌ಟೇಬಲ್ ರಿಲೀಸ್ ಮಾಡಿದ ಫ್ಯಾನ್ಸ್!

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಾದ ಮಾರ್ಚ್ 17 ಕ್ಕೆ 'ಜೇಮ್ಸ್' ಸಿನಿಮಾ ಬಿಡುಗಡೆ ಆಗುತ್ತಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ಚಿತ್ರಕ್ಕೂ ಇಲ್ಲದಂತೆ 'ಜೇಮ್ಸ್‌' ಸಿನಿಮಾವನ್ನು ಸ್ವಾಗತಿಸಲು ಅಭಿಮಾನಿಗಳು ತಯಾರಾಗಿದ್ದಾರೆ.

ಕೇವಲ ಅಭಿಮಾನಿಗಳು ಮಾತ್ರವಲ್ಲ ಚಿತ್ರತಂಡ ಸಹ ಪುನೀತ್‌ರ ಕೊನೆಯ ಸಿನಿಮಾವನ್ನು ದೇಶದೆಲ್ಲೆಡೆಯ ಸಿನಿ ಪ್ರೇಮಿಗಳಿಗೆ ತಲುಪಿಸುವ ಕಾರ್ಯ ಮಾಡಲು ಯೋಜನೆ ರೂಪಿಸಿದೆ. 'ಜೇಮ್ಸ್' ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅನ್ನು ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮಾಡಲು ನಿಶ್ಚಯಿಸಲಾಗಿದೆ. ಈ ಕಾರ್ಯಕ್ರಮಗಳು ಭಾರಿ ಅದ್ಧೂರಿಯಾಗಿ ನೆರವೇರಲಿವೆ.

ಮೂರು ನಗರಗಳಲ್ಲಿ 'ಜೇಮ್ಸ್' ಇವೆಂಟ್

ಮೂರು ನಗರಗಳಲ್ಲಿ 'ಜೇಮ್ಸ್' ಇವೆಂಟ್

ಕರ್ನಾಟಕದಲ್ಲಿ ಮೂರು ಪ್ರಮುಖ ನಗರಗಳಲ್ಲಿ 'ಜೇಮ್ಸ್' ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಬೆಂಗಳೂರು, ಬಳ್ಳಾರಿಯ ಹೊಸಪೇಟೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 'ಜೇಮ್ಸ್' ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಈ ಮೂರೂ ಕಾರ್ಯಕ್ರಮಗಳಿಗೆ ಅಣ್ಣಾವ್ರ ಕುಟುಂಬ ಸೇರಿದಂತೆ ಚಿತ್ರರಂಗದ ಪ್ರಮುಖ ನಟ-ನಟಿಯರು ಭಾಗವಹಿಸಲಿದ್ದಾರೆ.

ನೆರೆ ರಾಜ್ಯಗಳಲ್ಲಿಯೂ ಕಾರ್ಯಕ್ರಮ

ನೆರೆ ರಾಜ್ಯಗಳಲ್ಲಿಯೂ ಕಾರ್ಯಕ್ರಮ

ಕರ್ನಾಟಕ ಹೊರತುಪಡಿಸಿ ನೆರೆ ರಾಜ್ಯಗಳಲ್ಲಿಯೂ 'ಜೇಮ್ಸ್' ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮಗಳು ನಡೆಯಲಿವೆ. ಹೈದರಾಬಾದ್, ಚೆನ್ನೈ, ಮುಂಬೈ ನಗರಗಳಲ್ಲಿ ಸಿನಿಮಾದ ಪ್ರಿ ರಿಲೀಸ್ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಆಯಾ ರಾಜ್ಯದ ಪ್ರಮುಖ ನಟ-ನಟಿಯರು ಅತಿಥಿಗಳಾಗಿ ಆಗಮಿಸಿ ಪುನೀತ್‌ರ ಸಿನಿಮಾಕ್ಕೆ ಶುಭ ಹಾರೈಸಲಿದ್ದಾರೆ. ಸಿನಿಮಾವನ್ನು ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಾಗುತ್ತಿದೆ.

ವಿರೇಶ್‌ ಚಿತ್ರಮಂದಿರದ ಬಳಿ ಹಲವು ಕಾರ್ಯಕ್ರಮ

ವಿರೇಶ್‌ ಚಿತ್ರಮಂದಿರದ ಬಳಿ ಹಲವು ಕಾರ್ಯಕ್ರಮ

ಮತ್ತೊಂದೆಡೆ ಅಪ್ಪು ಅಭಿಮಾನಿಗಳು ಸಹ 'ಜೇಮ್ಸ್' ಸ್ವಾಗತಕ್ಕೆ ಸಕಲ ಸಜ್ಜಾಗಿದ್ದಾರೆ. ಒಂದೊಂದು ಚಿತ್ರಮಂದಿರಗಳ ಬಳಿ ಒಂದೊಂದು ಅಭಿಮಾನಿ ಸಂಘ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿರೇಶ್ ಚಿತ್ರಮಂದಿರದ ಬಳಿ, ಅಪ್ಪು ನಾಯಕ ನಟನಾಗಿ ನಟಿಸಿರುವ 31 ಚಿತ್ರಗಳ ಬೃಹತ್ ಕಟೌಟ್​ಹಾಕಲಾಗುವುದು. ಎಲ್ಲಾ ಕಟೌಟ್​ಗಳಿಗೂ ಬಾರಿ ಹೂವಿನ ಹಾರ ಹಾಕಲಾಗುವುದು, ಹೆಲಿಕ್ಯಾಫ್ಟರ್​ನಿಂದ ಅಪ್ಪು ಕಟೌಟ್​ಗಳಿಗೆ ಪುಷ್ಪಾರ್ಚನೆ ಮಾಡಲಾಗುವುದು. ಮಾರ್ಚ್ 18ರ ಬೆಳಗ್ಗೆ ಸಿಹಿ ಹಂಚಿಕೆ, ಮಧ್ಯಾಹ್ನ ಅನ್ನದಾನ, ಸಂಜೆ ದೀಪೋತ್ಸವ ಮಾರ್ಚ್‌ 19ಕ್ಕೆ ಅನ್ನದಾನ, ನೇತ್ರದಾನ ತಪಾಸಣೆ, ರಕ್ತದಾನ ಶಿಬಿರ, ಮಾರ್ಚ್ 20ಕ್ಕೆ ಚಿಕ್ಕನ್ ಬಿರಿಯಾನಿ ಹಂಚಿಕೆ ಮಾಡಲು ಯೋಜಿಸಲಾಗಿದೆ.

ಬೆಳ್ಳಿ ರಥದಲ್ಲಿ ಮೆರವಣಿಗೆ

ಬೆಳ್ಳಿ ರಥದಲ್ಲಿ ಮೆರವಣಿಗೆ

ಕಮಲಾನಗರ ವೀರಭದ್ರೇಶ್ವರ ಚಿತ್ರಮಂದಿರದ ಬಳಿ, ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಅವರ ಬೃಹತ್ ಕಟೌಟ್ ಹಾಕಲಾಗುವುದು. ಹೆಲಿಕ್ಯಾಫ್ಟರ್​ನಿಂದ ಪುನೀತ್​ಕಟೌಟ್​​ಗೆ ನಿರಂತರ 1 ಗಂಟೆ ಪುಷ್ಪಾರ್ಚನೆ. ಹೆಲಿಕ್ಯಾಫ್ಟರ್​ನಿಂದ 40 ಅಡಿಯ ಪುನೀತ್ ಫೋಟೋ ತೂಗು ಬಿಡಲಾಗುವುದು. ಡೊಳ್ಳು ಕುಣಿತ, ಪೂಜಾಕುಣಿತ, ವೀರಗಾಸೆ, ಕೇರಳದ ಪ್ರಸಿದ್ಧ ವಾದ್ಯದವರಿಂದ ವಾದ್ಯಗೋಷ್ಠಿ ಮತ್ತು ಬೆಂಗಳೂರು ತಮಟೆ. ಬೆಳ್ಳಿಪರದೆ ಮುಂದೆ ಪುನೀತ್​ರವರ ವಿಶೇಷ ಲೈಟಿಂಗ್ಸ್ ವ್ಯವಸ್ಥೆ. ಬಸವೇಶ್ವರನಗರ ಸರ್ಕಲ್​ನಿಂದ ಚಿತ್ರಮಂದಿರವರೆಗೂ ಬೆಳ್ಳಿರಥದ ಮೆರವಣಿಗೆ. 'ಜೇಮ್ಸ್' ಚಿತ್ರತಂಡದ ಸದಸ್ಯರು ಅಭಿಮಾನಿಗಳೊಟ್ಟಿಗೆ ಸಿನಿಮಾ ವೀಕ್ಷಣೆ. ಅಭಿಮಾನಿಗಳಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ.

ಮೂರು ಸಿನಿಮಾಗಳಿಗಾಗಿ ಕಾತರ

ಮೂರು ಸಿನಿಮಾಗಳಿಗಾಗಿ ಕಾತರ

ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಮೂರು ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿರುವ 'ಜೇಮ್ಸ್' ಅದರ ಬಳಿಕ ಅತಿಥಿ ಪಾತ್ರದಲ್ಲಿ ನಟಿಸಿರುವ 'ಲಕ್ಕಿ ಮ್ಯಾನ್' ಹಾಗೂ ಟ್ರಾವೆಲ್ ಸಿನಿಮಾ 'ಗಂಧದ ಗುಡಿ' ಸಿನಿಮಾಗಳು ಬಿಡುಗಡೆ ಆಗಬೇಕಿವೆ. 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ. ಈ ಮೂರು ಸಿನಿಮಾಗಳಲ್ಲಿ 'ಗಂಧದ ಗುಡಿ' ಟ್ರಾವೆಲ್ ಸಿನಿಮಾ ಪುನೀತ್‌ರ ಕನಸಿನ ಸಿನಿಮಾ ಎನ್ನಲಾಗುತ್ತಿದೆ.

More from Filmibeat

English summary
Puneeth Rajkumar's James movie pre release event will be organized in different cities across the country. Movie is releasing on March 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X