'ಜೇಮ್ಸ್' ಸ್ವಾಗತಕ್ಕೆ ವಿದೇಶದಲ್ಲೂ ಅಪ್ಪು ಅಭಿಮಾನಿಗಳಿಂದ ಭರ್ಜರಿ ತಯಾರಿ

ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಮಾರ್ಚ್ 17 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಪ್ಪು ಅಭಿಮಾನಿಗಳು ಸಜ್ಜಾಗಿದ್ದಾರೆ.

Recommended Video

James prerelease event | Puneeth Rajkumar | Shivarajkumar

ಕರ್ನಾಟಕ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ ಆಗುತ್ತಿದೆ. ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್‌ ಅವರ ದೊಡ್ಡ ದೊಡ್ಡ ಕಟೌಟ್ ಹಾಕಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಿನಿಮಾದ ಸ್ವಾಗತಕ್ಕೆ ಸಜ್ಜು ಮಾಡಲಾಗಿದೆ.

ಕರ್ನಾಟಕ ಮಾತ್ರವೇ ಅಲ್ಲ ವಿದೇಶಗಳಲ್ಲಿ ಸಹ 'ಜೇಮ್ಸ್' ಸಿನಿಮಾಕ್ಕೆ ಅದ್ಧೂರಿ ಸ್ವಾಗತ ದೊರೆಯುತ್ತಿದೆ. ಕರ್ನಾಟಕದಲ್ಲಿ ಮಾಡುತ್ತಿರುವಂತೆಯೇ ವಿದೇಶದಲ್ಲೂ ಅಭಿಮಾನಿಗಳು 'ಜೇಮ್ಸ್' ಬಿಡುಗಡೆಯನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ.

Puneeth Rajkumars James Movie Releasing In Foreign Theaters Also

ಅಮೆರಿಕದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ ಆಗುತ್ತಿದ್ದು ಅದ್ಧೂರಿ ಕಾರ್ಯಕ್ರಮ, ಜಾಥಾ ಮೂಲಕ ಸಿನಿಮಾವನ್ನು ಸ್ವಾಗತಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆನಡಾದಲ್ಲಿ ನೆಲೆಸಿರುವ ಅಪ್ಪು ಅಭಿಮಾನಿ ಕಿರಣ್, ಅಮೆರಿಕದ ವಿವಿಧ ರಾಜ್ಯಗಳಲ್ಲಿ 'ಜೇಮ್ಸ್' ತೆರೆ ಕಾಣುತ್ತಿದೆ. ಬ್ರಿಟನ್‌ನಲ್ಲಿ 50 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ ಟಾಕೀಸ್ ಬಳಗದವರು ಯೂರೋಪ್ ನ ಎಲ್ಲ ದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಿಂಗಪೂರ್‌ನಲ್ಲಿ 'ಸ್ಯಾಂಡಲ್‌ವುಲ್ ಎಂಟರ್ಟೈನ್‌ಮೆಂಟ್ ಸಿಂಗಪುರ್' ಅವರು 'ಜೇಮ್ಸ್' ಅನ್ನು ಅಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾನಲ್ಲಿ ಸುಮಾರು 150 ಶೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದ ನಟನೊಬ್ಬನ ಸಿನಿಮಾದ 150 ಶೋ ಆಸ್ಟ್ರೇಲಿಯಾದಲ್ಲಿ ಪ್ರದರ್ಶನವಾಗುತ್ತಿರುವುದು ಇದೇ ಮೊದಲು ಎಂದಿದ್ದಾರೆ.

''ನಾವು ವಿದೇಶದಲ್ಲಿರುವ ಕನ್ನಡಿಗರು, ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಟ್ರಿಬ್ಯೂಟ್ ನೀಡಲು ಸಜ್ಜಾಗಿದ್ದೇವೆ. 'ಜೇಮ್ಸ್' ಸಿನಿಮಾದ ಬಿಡುಗಡೆ ದಿನದಂದು ಕಾರ್ ರ್ಯಾಲಿ ಮಾಡುತ್ತಿದ್ದೇವೆ. ಪಟಾಕಿ ಹೊಡೆಯಲಿದ್ದೇವೆ. ಇನ್ನೂ ಹಲವು ಕಾರ್ಯಕ್ರಮಗಳನ್ನು ನಾವು ಅಂದು ಆಯೋಜಿಸಿದ್ದೇವೆ. ಪುನೀತ್ ಅವರಿಗೆ ಒಂದು ಅತ್ಯುತ್ತಮವಾದ ಟ್ರಿಬ್ಯೂಟ್ ನೀಡುವುದು ನಮ್ಮ ಆಶಯ'' ಎಂದಿದ್ದಾರೆ ಕಿರಣ್.

''ನಮ್ಮೆಲ್ಲ ಕನ್ನಡಿಗರಿಗೆ ಇದೊಂದು ಸಿನಿಮಾ ಎಂಬುದಕ್ಕಿಂತಲೂ ಇದೊಂದು ಭಾವನಾತ್ಮಕ ವಿಷಯವಾಗಿದೆ ಕರ್ನಾಟಕದಲ್ಲಿ ಹೇಗೆ ನೀವು ಸಂಭ್ರಮದಿಂದ 'ಜೇಮ್ಸ್' ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಿದ್ದೀರೋ ಹಾಗೆಯೇ ನಾವುಗಳು ಸಹ ಇಲ್ಲಿ ಅಪ್ಪು ಸಿನಿಮಾವನ್ನು ಸಂಭ್ರಮಿಸುತ್ತೇವೆ'' ಎಂದಿದ್ದಾರೆ. 'ಜೇಮ್ಸ್' ಸಿನಿಮಾ ಮಾರ್ಚ್ 17 ರಂದು ತೆರೆಗೆ ಬರಲಿದೆ.

More from Filmibeat

English summary
Puneeth Rajkumar's James movie releasing in foreign theaters also. Appu fans in foreign country were celebrating James release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X