ದಾಖಲೆ ಬರೀತಿದೆ 'ಜೇಮ್ಸ್': ಬೆಳಗ್ಗಿನ 6ಗಂಟೆ ಶೋ ಟಿಕೆಟ್ ಸೋಲ್ಡ್ ಔಟ್

ಜೇಮ್ಸ್ ಸಿನಿಮಾ ರಿಲೀಸ್ ಆಗಲು ಇನ್ನೇನು ನಾಲ್ಕೇ ದಿನ ಬಾಕಿ. ಜೇಮ್ಸ್ ಕ್ರೇಜ್ ಬಗ್ಗೆ ಹೇಳಲು ಪದಗಳೆ ಇಲ್ಲ. ಯಾಕಂದ್ರೆ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ದೇವರ ಉತ್ಸವದಂತೆ ಆರಾಧಿಸುತ್ತಿದ್ದಾರೆ. ಜೇಮ್ಸ್ ಸಿನಿಮಾ ಮೂಲಕ ದೇವರನ್ನು ಕಣ್ತುಂಬಿಕೊಳ್ಳುವ ಕಾತುರದಲ್ಲಿದ್ದಾರೆ. ಹೀಗಾಗಿ ಈಗ ಎಲ್ಲಿ ನೋಡಿದರೂ ಜೇಮ್ಸ್ ಸಿನಿಮಾದೇ ಸದ್ದು, ಸುದ್ದಿ. ಥಿಯೇಟರ್‌ಗಳಲ್ಲಿ ಈಗಾಗಲೇ ಅಪ್ಪು ಕಟೌಟ್‌ಗಳು, ದೊಡ್ಮನೆ ಕುಟುಂಬದ ಕಟೌಟ್‌ಗಳು ರಾರಾಜಿಸುತ್ತಿದೆ.

ಅದೆಷ್ಟೋ ಥಿಯೇಟರ್‌ಗಳು ಮದುವಣಗಿತ್ತಿಯಂತೆ ಈಗಲೇ ಅಲಂಕಾರವಾಗುತ್ತಿದೆ. ಜೇಮ್ಸ್ ಅನ್ನು ತೆರೆಮೇಲೆ ಕಣ್ತುಂಬಿಕೊಳ್ಳಲ್ಲು ಅದೆಷ್ಟೋ ಅಭಿಮಾನಿ ಬಳಗ ನಿದ್ದೆ, ಊಟ ಬಿಟ್ಟು ಕಾದುಕುಳಿತ್ತಿದ್ದಾರೆ. ಅದರಂತೆ ಚಿತ್ರತಂಡ ಕೂಡ ಜೇಮ್ಸ್ ಸಿನಿಮಾದ ಆನ್‌ ಲೈನ್ ಟಿಕೆಟ್ ಬುಕ್ಕಿಂಗ್‌ಗೆ ಒಂದು ವಾರದ ಮುಂಚಿತವಾಗಿ ಅವಕಾಶ ಮಾಡಿಕೊಟ್ಟಿತ್ತು. ಆನ್‌ಲೈನ್ ಬುಕ್ಕಿಂಗ್ ಆರಂಭ ಆಗಿದ್ದೆ ತಡ ಜೇಮ್ಸ್ ಚಿತ್ರದ ಟಿಕೆಟ್ ಹರಿದು ಹೋಗುವ ನೀರಿನಂತೆ ಬುಕ್ಕಿಂಗ್ ಆಗುತ್ತಿದೆ. ಈ ಮೂಲಕ ಹೊಸ ದಾಖಲೆ ಮಾಡಿತ್ತು ಜೇಮ್ಸ್. ಇದೀಗ ಮತ್ತೊಂದು ದಾಖಲೆಗೆ ಜೇಮ್ಸ್ ಸಾಕ್ಷಿಯಾಗಿದೆ.

ಹಲವು ಕಡೆ ಬೆಳಗಿನ ಜಾವ 4 ಗಂಟೆಯಿಂದಲೇ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಸದ್ಯ ಬುಕ್ ಮೈ ಶೋ ಆಪ್ ನಲ್ಲಿ ಬೆಳಗ್ಗೆ 6 ಗಂಟೆ ನಂತರದ ಪ್ರದರ್ಶನಗಳ ಟಿಕೆಟ್ ಬುಕ್ ಮಾಡಬಹುದು. ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ಮಾ.17 ರಂದು ಬೆಳಗ್ಗೆ 6 ಗಂಟೆಗೆ 200 ಶೋಗಳು ಜೆಮ್ಸ್ ಗಾಗಿ ಟಿಕೆಟ್ ಮೀಸಲಿಟ್ಟಿತ್ತು. ಕೆಲವೇ ತಾಸುಗಳಲ್ಲಿ ಅಷ್ಟೂ ಶೋಗಳ ಟಿಕೆಟ್ಟ್ ಸೋಲ್ಡೌಟ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಬೆಳಗಿನ ಪ್ರದರ್ಶನಕ್ಕೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಬಹುತೇಕ ಸ್ಕ್ರೀನ್ ಗಳನ್ನು ಜೇಮ್ಸ್ ಪ್ರದರ್ಶನಕ್ಕಾಗಿಯೇ ಮೀಸಲಿಡಲಾಗಿದೆ.

Puneeth Rajkumars last film James breaking old records

ಇನ್ನು ಜೇಮ್ಸ್ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಹೊಸ ದಾಖಲೆ ಮಾಡಿದೆ. ಒಂದೇ ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಇರುವ 'ಕಾವೇರಿ ಸಿನಿಮಾಸ್' ಚಿತ್ರಮಂದಿರದಲ್ಲಿ ಬೆಳಗ್ಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದ್ದು, ಜನ ಮತ್ತೆ ಮತ್ತೆ ಟಿಕೆಟ್‌ಗಾಗಿ ಮುಗಿ ಬೀಳುತ್ತಿದ್ದಾರೆ.

Puneeth Rajkumars last film James breaking old records

ಆನ್‌ಲೈನ್‌ ಮೂಲಕವೂ ಹೆಚ್ಚೆಚ್ಚು ಟಿಕೆಟ್ ಬುಕ್ಕಿಂಗ್

'ಜೇಮ್ಸ್' ಸಿನಿಮಾದ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿರುವ 5 ಗೋಪಾಲನ್ ಮಾಲ್‌ಗಳಲ್ಲಿ ಜೇಮ್ಸ್ ಸಿನಿಮಾ ಬುಕಿಂಗ್ ಮಾಡಬಹುದಾಗಿದೆ. ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್‌, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ 'ಜೇಮ್ಸ್' ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ವಿತರಣೆಯಾಗುತ್ತಿದೆ.

Puneeth Rajkumars last film James breaking old records

ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿಯೇ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ ಜೇಮ್ಸ್. ಅಭಿಮಾನಿಗಳು ಕೂಡ ಜೇಮ್ಸ್ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ. ಜೊತೆಗೆ ಜೇಮ್ಸ್ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

More from Filmibeat

English summary
Puneeth Rajkumar acted last film going to release on March 17th. here is more details about ticket booking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X