ಸದ್ದಿಲ್ಲದೆ ಮುಹೂರ್ತ ಆಚರಿಸಿಕೊಂಡ ಪುನೀತ್ ರ 'ರಾಜಕುಮಾರ'

By Suneetha

2015 ರಲ್ಲಿ ಚಂದನವನಕ್ಕೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಎಂಬ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ರಾಜಕುಮಾರ; ಸಿನಿಮಾ ಸದ್ದಿಲ್ಲದೆ ಮುಹೂರ್ತ ಆಚರಿಸಿಕೊಂಡಿದೆ.

ಶುಕ್ರವಾರ (ಮಾರ್ಚ್ 11) ದಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಳ್ಳಲಿರುವ 'ರಾಜಕುಮಾರ' ಚಿತ್ರಕ್ಕೆ ಮುಹೂರ್ತ ಆಗಿದ್ದು, ಅಧಿಕೃತವಾಗಿ ಚಿತ್ರದ ಶೂಟಿಂಗ್ ಗೆ ಚಾಲನೆ ದೊರೆತಿದೆ.['ರಾಜಕುಮಾರ' ಪುನೀತ್ ರವರ ಯುವರಾಣಿ 'ಇವರೇ'..!]

Puneeth Rajkumar's latest movie 'Rajakumara' to be launched

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅವರ ಪತ್ನಿ ಅಶ್ವಿನಿ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಕೆಲವು ಪ್ರಮುಖ ಆಪ್ತರ ಸಮ್ಮುಖದಲ್ಲಿ 'ರಾಜಕುಮಾರ' ಚಿತ್ರಕ್ಕೆ ಮುಹೂರ್ತ ನಡೆಸಿ ಮೊದಲ ಕ್ಲಾಪ್ ಮಾಡಲಾಯಿತು.[ಕಸ್ತೂರಿ ನಿವಾಸ ಗೆಟಪ್ ನಲ್ಲಿ ಪುನೀತ್ 'ರಾಜಕುಮಾರ']

Puneeth Rajkumar's latest movie 'Rajakumara' to be launched

'ಸಾರಥಿ' ಚಿತ್ರದಲ್ಲಿ ದರ್ಶನ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದ ತಮಿಳು ನಟ ಶರತ್ ಕುಮಾರ್ ಅವರು 'ರಾಜಕುಮಾರ' ಚಿತ್ರದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ.['ರಾಜಕುಮಾರ'ನ ಜೊತೆ ಡ್ಯುಯೆಟ್ ಹಾಡೋ ರಾಣಿ ಯಾರು ಗೊತ್ತಾ?]

Puneeth Rajkumar's latest movie 'Rajakumara' to be launched

ಈಗಾಗಲೇ ಚಿತ್ರದ ಪೋಸ್ಟರ್ ಮೂಲಕ ಭಾರಿ ಕುತೂಹಲ ಹುಟ್ಟಿಸಿರುವ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಜುಗಲ್ ಬಂದಿಯ 'ರಾಜಕುಮಾರ' ಸಿನಿಮಾ ಆದಷ್ಟು ಬೇಗ-ಬೇಗನೇ ಸಿನಿಮಾದ ಶೂಟಿಂಗ್ ಮುಗಿಸಿ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

More from Filmibeat

English summary
Most Expensive Kannada movie of Sandalwood, 'Rajakumara' to be launched. Starring Kannada Actor Puneeth Rajkumar and Actress Priya Anand in the lead role. To be directed by Santhosh Ananddram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X