ಬಿಗ್ ಅನೌನ್ಸ್ ಮೆಂಟ್: ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ಯುವರತ್ನ ಸಿನಿಮಾದಿಂದ ದೊಡ್ಡ ಅನೌನ್ಸ್ ಮೆಂಟ್ ಹೊರಬಿದ್ದಿದೆ. ಹೌದು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳಿದ್ದ ದೊಡ್ಡ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.
Recommended Video
ಹೊಸ ವರ್ಷಕ್ಕೆ ಯುವರತ್ನ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಸಿನಿಮಾತಂಡ ಈಗಾಗಲೇ ಬಹಿರಂಗ ಪಡಿಸಿತ್ತು. ಅದರಂತೆ ಹೊಸ ವರ್ಷದ ಮೊದಲ ದಿನವೇ ಭರ್ಜರಿ ಸುದ್ದಿ ನೀಡುವ ಮೂಲಕ ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿವಂತೆ ಮಾಡಿದೆ.
ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಯುವರತ್ನ ಸಿನಿಮಾ 'ಏಪ್ರಿಲ್ 1'ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಬರ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ಕನ್ನಡದಲ್ಲಿ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೊದಲ ಸಿನಿಮಾ ಇದಾಗಿದೆ. ಇದುವರೆಗೂ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳ ರಿಲೀಸ್ ಬಗ್ಗೆ ಯಾರು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಯುವರತ್ನ ಸಿನಿಮಾ ಹೊಸ ವರ್ಷಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸ್ಯಾಂಡಲ್ ವುಂಡ್ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ವಿಶೇಷ ಎಂದರೆ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದಿಂದ ಎರಡು ಹಾಡುಗಳು ರಿಲೀಸ್ ಆಗಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಯುವರತ್ನನ ಹಾಡುಗಳು ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಚಿತ್ರದ ಎರಡನೇ ಹಾಡನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ತೆಲುಗಿನಲ್ಲಿ ವಿಜಯ್ ದೇವರಕೊಂಡ ರಿಲೀಸ್ ಮಾಡಿದ್ದರು.

ಯುವರತ್ನ ಚಿತ್ರದ ಹಾಡುಗಳಿಗೆ ಎಸ್ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೂ ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಸಯೇಶಾ ಕಾಣಿಸಿಕೊಂಡಿದ್ದಾರೆ. ಸಾಯೇಶಾಗೆ ಇದು ಮೊದಲ ಕನ್ನಡ ಸಿನಿಮಾವಾಗಿದ್ದು, ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಯುವರತ್ನ ಅಬ್ಬರ ಹೇಗಿರಲಿದೆ ಎಂದು ನೋಡಲು ಏಪ್ರಿಲ್ 1ರ ವರೆಗೂ ಕಾಯಲೇ ಬೇಕು.


Click it and Unblock the Notifications











