»   » ಪುನೀತ್ ರಾಜ್ ಕುಮಾರ್ ಮಲಯಾಳಂ 'ಮೈತ್ರಿ'

ಪುನೀತ್ ರಾಜ್ ಕುಮಾರ್ ಮಲಯಾಳಂ 'ಮೈತ್ರಿ'

Posted By:
Subscribe to Filmibeat Kannada

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಬಾಯಲ್ಲೂ ಕೇಳಿಬರುತ್ತಿರುವ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಮೈತ್ರಿ'. ಈ ಚಿತ್ರ ಪುನೀತ್ ಅವರ ವೃತ್ತಿ ಬದುಕಿನಲ್ಲಿ ನಿರೀಕ್ಷೆಗೂ ಮೀರಿ ಸದ್ದು ಮಾಡುತ್ತಿದೆ.

ಬಾಲಾಪರಾಧಿಗಳ ಬಗೆಗಿನ ಕಥಾಹಂದರ ಈ ಚಿತ್ರದಲ್ಲಿ ಪುನೀತ್ ಅವರು ಅವರಾಗಿಯೇ ಅಭಿನಯಿಸಿದ್ದಾರೆ. ಈ ಚಿತ್ರದ ಗಮನಾರ್ಹ ಪಾತ್ರದಲ್ಲಿ ಪರಿಪೂರ್ಣ ನಟ ಮೋಹನ್ ಲಾಲ್ ಅಭಿನಯಿಸಿದ್ದು ಇದೀಗ 'ಮೈತ್ರಿ' ಚಿತ್ರ ಮಲಯಾಳಂನಲ್ಲೂ ಬಿಡುಗಡೆಯಾಗಲು ಸಿದ್ಧವಾಗಿದೆ. [ಮೈತ್ರಿ ಚಿತ್ರ ವಿಮರ್ಶೆ]


Mythri movie still

ಹೊಸ ತರಹದ ಚಿತ್ರಗಳ ಮೂಲಕ ಹೆಸರು ಮಾಡಿರುವ ಬಿ.ಎಂ ಗಿರಿರಾಜ್ ಅವರು ಮೈತ್ರಿ ಕನ್ನಡ ಚಿತ್ರವನ್ನು ಶೇ.50ರಷ್ಟು ರೀಶೂಟ್ ಮಾಡಿ ಮಲಯಾಳಂನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲಿನ ನೇಟಿವಿಟಿಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಇದೇ ಮಾರ್ಚ್ ಎರಡನೇ ವಾರದಲ್ಲಿ ಮಲಯಾಳಂ 'ಮೈತ್ರಿ' ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ರವಿಕಾಳೆ ಪೋಷಿಸಿದ್ದ ಪಾತ್ರವನ್ನು ಮಲಯಾಳಂನಲ್ಲಿ ಕಲಾಭವನ್ ಮಣಿ ಮಾಡಲಿದ್ದಾರೆ. ಆದರೆ ಪುನೀತ್ ಅವರ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಹೇಳಿದ್ದಾರೆ.


ಈ ಬಗ್ಗೆ ವಿವರ ನೀಡಿರುವ ಪುನೀತ್, ತಮಿಳು, ತೆಲುಗಿನಲ್ಲಿ ಆಗಿದ್ದರೆ ನಾನೇ ಧ್ವನಿ ನೀಡುತ್ತಿದ್ದೆ. ಆದರೆ ಮಲಯಾಳಂ ನನಗೆ ಕಷ್ಟ. ಹಾಗಾಗಿ ತಮ್ಮ ಪಾತ್ರಕ್ಕೆ ಬೇರೆಯವರು ಧ್ವನಿ ನೀಡಿದ್ದಾರೆ ಎಂದಿದ್ದಾರೆ. ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪುನೀತ್ ಅಡಿಯಿಟ್ಟಂತಾಗಿದೆ. (ಏಜೆನ್ಸೀಸ್)

English summary
Power Star Puneeth Rajkumar's 'Mythiri' movie is all set to be releasing in Malayalam very soon. The movie is expected to release in March 2nd week. The movie directed by BM Giriraj, Mohanlal played a key role in this film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada